
‘ಬಿಗ್ ಬಾಸ್ ಕನ್ನಡ ಸೀಸನ್ 11’ರಲ್ಲಿ ಐಶ್ವರ್ಯಾ ಶಿಂಧೋಗಿ ಅವರು ಭರ್ಜರಿ ಕಾಂಪಿಟೇಷನ್ ನೀಡುತ್ತಿದ್ದಾರೆ. ಐಶ್ವರ್ಯಾ ಅವರು ಒಂದು ಟಾಸ್ಕ್ನಲ್ಲಿ ಭವ್ಯಾ ಅವರ ವಿರುದ್ಧ ಹೀನಾಯವಾಗಿ ಸೋತಿದ್ದಾರೆ. ಈ ಬಗ್ಗೆ ಅವರ ಫ್ಯಾನ್ಸ್ಗೆ ಬೇಸರ ಆಗಿದೆ.

ಬಿಗ್ ಬಾಸ್ನಲ್ಲಿ ಟಾಸ್ಕ್ ಒಂದನ್ನು ನೀಡಲಾಗಿತ್ತು. ಈ ಟಾಸ್ಕ್ನ ಅನುಸಾರ ಒಂದು ದೊಡ್ಡ ಬೌಲ್ನ ನಿಗದಿಪಡಿಸಿದ ಗೋಲ್ ಒಳಗೆ ಹಾಕಬೇಕಿತ್ತು. ಸ್ಪರ್ಧೆ ಇದ್ದಿದ್ದು ಭವ್ಯಾ ಹಾಗೂ ಐಶ್ವರ್ಯಾ ಮಧ್ಯೆ ಆಗಿತ್ತು.

ಬಜರ್ ಆಗುತ್ತಿದ್ದಂತೆ ಭವ್ಯಾ ಗೌಡ ಅವರು ಐಶ್ವರ್ಯಾಗಿಂತ ವೇಗವಾಗಿ ಓಡಿ ಬೌಲ್ನ ಗೋಲ್ ಒಳಗೆ ಹಾಕಿ ಬಿಟ್ಟರು. ಇದಕ್ಕೆ ಅವರು ತೆಗೆದುಕೊಂಡಿದ್ದು ಕೆಲವೇ ಕೆಲವು ಸೆಕೆಂಡ್ಗಳು ಮಾತ್ರ ಅನ್ನೋದು ವಿಶೇಷ. ಐಶ್ವರ್ಯಾಗೆ ಬಾಲ್ ಮುಟ್ಟಲೂ ಅವಕಾಶ ಸಿಕ್ಕಿಲ್ಲ.

ಈ ಬಗ್ಗೆ ಐಶ್ವರ್ಯಾ ಸಾಕಷ್ಟು ಬೇಸರ ಮಾಡಿಕೊಂಡಿದ್ದಾರೆ. ಭವ್ಯಾ ಎದುರೇ ಸೋತೆನಲ್ಲ ಎಂದು ಅವರು ಅನೇಕರ ಬಳಿ ಹೇಳಿಕೊಂಡಿದ್ದಾರೆ. ವೈರಿ ವಿರುದ್ಧವೇ ಸೋತ ಬೇಸರ ಅವರಿಗೆ ಇದೆ.

ಇತ್ತೀಚೆಗೆ ಭವ್ಯಾ ಗೌಡ ಹಾಗೂ ಐಶ್ವರ್ಯಾ ಮಧ್ಯೆ ಕಿರಿಕ್ ಆಗಿತ್ತು. ಬಿಗ್ ಬಾಸ್ನಲ್ಲಿ ಇದ್ದಾಗ ಹಾಗೂ ಬಿಗ್ ಬಾಸ್ನಿಂದ ಹೊರ ಹೋದ ಬಳಿಕವೂ ಐಶ್ವರ್ಯಾ ಜೊತೆ ಮಾತನಾಡಲ್ಲ ಎಂದು ಇತ್ತೀಚೆಗೆ ಹೇಳಿದ್ದರು ಭವ್ಯಾ.