Updated on: Oct 06, 2022 | 7:02 PM
ನಟಿ ಆಲಿಯಾ ಭಟ್ ಏಪ್ರಿಲ್ 14ರಂದು ಮದುವೆ ಆದರು. ಮದುವೆ ಆಗಿ ಕೇವಲ ಎರಡೂವರೆ ತಿಂಗಳಿಗೆ ಪ್ರೆಗ್ನೆಂಟ್ ಆದ ವಿಚಾರವನ್ನು ಆಲಿಯಾ ಘೋಷಿಸಿದರು. ಆ ಬಳಿಕ ಆಲಿಯಾ ಹಲವು ಫೋಟೋಗಳನ್ನು ಹಂಚಿಕೊಂಡಿದ್ದಿದೆ.
ಈಗ ಆಲಿಯಾ ಭಟ್ಗೆ ಸೀಮಂತ ಶಾಸ್ತ್ರ ನಡೆದಿದೆ. ಈ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಅವರು ಹಂಚಿಕೊಂಡಿದ್ದಾರೆ.
ಆಲಿಯಾ ಭಟ್ ಹಳದಿ ಬಣ್ಣದ ಬಟ್ಟೆ ಉಟ್ಟಿದ್ದಾರೆ. ರಣಬೀರ್ ಕಪೂರ್ ಅವರು ಆಲಿಯಾ ಕೆನ್ನೆಗೆ ಮುತ್ತಿಟ್ಟಿದ್ದಾರೆ. ಈ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಕುಟುಂಬದ ಜತೆ ಇರುವ ಫೋಟೋ ಹಂಚಿಕೊಂಡಿರುವ ಆಲಿಯಾ, ‘ಪ್ರೀತಿ ಮಾತ್ರ’ ಎಂದು ಬರೆದುಕೊಂಡಿದ್ದಾರೆ. ಈ ಫೋಟೋ ಸಖತ್ ವೈರಲ್ ಆಗಿದೆ.
ಆಲಿಯಾ ಭಟ್-ರಣಬೀರ್
ಆಲಿಯಾ ಭಟ್ ನಟನೆಯ ‘ಬ್ರಹ್ಮಾಸ್ತ್ರ’ ಸಿನಿಮಾ ಇತ್ತೀಚೆಗೆ ರಿಲೀಸ್ ಆಯಿತು. ಈ ಚಿತ್ರಕ್ಕೆ ಟೀಕೆ ವ್ಯಕ್ತವಾದ ಹೊರತಾಗಿಯೂ ದೊಡ್ಡ ಮಟ್ಟದಲ್ಲಿ ಕಲೆಕ್ಷನ್ ಮಾಡಿತು.
Published On - 6:15 pm, Thu, 6 October 22