AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

All England Championship: ಫೈನಲ್ ತಲುಪಿದ ಅತ್ಯಂತ ಕಿರಿಯ ಭಾರತೀಯ ಲಕ್ಷ್ಯ ಸೇನ್! ಇವರಿಗೂ ಮುನ್ನ ಈ ಸಾಧನೆ ಮಾಡಿದವರ ಪಟ್ಟಿ

All England Championship: 20ರ ಹರೆಯದ ಲಕ್ಷ್ಯ ಸೇನ್ ಈ ಟೂರ್ನಿಯ ಇತಿಹಾಸದಲ್ಲಿ ಫೈನಲ್ ಪ್ರವೇಶಿಸಿದ ಭಾರತದ ಅತ್ಯಂತ ಕಿರಿಯ ಷಟ್ಲರ್ ಎನಿಸಿಕೊಂಡಿದ್ದಾರೆ.

ಪೃಥ್ವಿಶಂಕರ
|

Updated on: Mar 20, 2022 | 8:29 AM

Share
ಭಾರತದ ಯುವ ಬ್ಯಾಡ್ಮಿಂಟನ್ ಆಟಗಾರ ಲಕ್ಷ್ಯ ಸೇನ್ ದಿನದಿಂದ ದಿನಕ್ಕೆ ಹೊಸ ಅದ್ಭುತಗಳನ್ನು ಮಾಡುತ್ತಿದ್ದಾರೆ. ಕೇವಲ 20ರ ಹರೆಯದಲ್ಲಿ ಈ ಆಟಗಾರ ಭಾರತದ ಬ್ಯಾಡ್ಮಿಂಟನ್​ನಲ್ಲಿ ಹೊಸ ಇತಿಹಾಸ ಬರೆಯುತ್ತಿದ್ದಾರೆ. ಈ ಋತುವಿನಲ್ಲಿ ಅತ್ಯುತ್ತಮ ಫಾರ್ಮ್‌ನಲ್ಲಿರುವ ಲಕ್ಷ್ಯ ಇದೀಗ ಮತ್ತೊಂದು ಸಾಧನೆ ಮಾಡಿದ್ದಾರೆ. ಲಕ್ಷ್ಯ ಅವರು ಪ್ರತಿಷ್ಠಿತ ಆಲ್ ಇಂಗ್ಲೆಂಡ್ ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್‌ನಲ್ಲಿ ಫೈನಲ್ ಪ್ರವೇಶಿಸಿದ್ದಾರೆ. ಈ ಪಂದ್ಯಾವಳಿಯ ಇತಿಹಾಸದಲ್ಲಿ ಎಲ್ಲಾ ಈವೆಂಟ್‌ಗಳಲ್ಲಿ ಫೈನಲ್ ತಲುಪಿದ ಐದನೇ ಭಾರತೀಯ ಆಟಗಾರ ಲಕ್ಷ್ಯ.

1 / 6
ಮಾರ್ಚ್ 19 ರ ಶನಿವಾರದಂದು ಲಕ್ಷ್ಯ ಅವರು ಮೂರು ಗೇಮ್‌ಗಳ ಕಠಿಣ ಹೋರಾಟದ ಪಂದ್ಯದಲ್ಲಿ ಏಳನೇ ಶ್ರೇಯಾಂಕದ ಮತ್ತು ಹಾಲಿ ಚಾಂಪಿಯನ್ ಮಲೇಷ್ಯಾದ ಲಿ ಜಿ ಜಿಯಾ ಅವರನ್ನು 21-13, 12-21 21-19 ರಿಂದ ಸೋಲಿಸುವ ಮೂಲಕ ಮೊದಲ ಬಾರಿಗೆ ಫೈನಲ್‌ಗೆ ಪ್ರವೇಶಿಸಿದರು. ಈ ಚಾಂಪಿಯನ್‌ಶಿಪ್‌ನಲ್ಲಿ ಫೈನಲ್ ತಲುಪಿದ ಅತ್ಯಂತ ಕಿರಿಯ ಭಾರತೀಯ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ.

2 / 6
All England Championship: ಫೈನಲ್ ತಲುಪಿದ ಅತ್ಯಂತ ಕಿರಿಯ ಭಾರತೀಯ ಲಕ್ಷ್ಯ ಸೇನ್! ಇವರಿಗೂ ಮುನ್ನ ಈ ಸಾಧನೆ ಮಾಡಿದವರ ಪಟ್ಟಿ

ಪ್ರಕಾಶ್ ನಾಥ್ ಅವರು ಭಾರತದ ಪರ ಮೊದಲ ಬಾರಿಗೆ ಆಲ್ ಇಂಗ್ಲೆಂಡ್‌ನ ಫೈನಲ್‌ನಲ್ಲಿ ಆಡಿದ್ದರು. ಪ್ರಕಾಶ್ ನಾಥ್ ಅವರು 1947 ರಲ್ಲಿ ಪುರುಷರ ಸಿಂಗಲ್ಸ್ ಫೈನಲ್‌ಗೆ ಪ್ರವೇಶಿಸಿದರು, ಅಲ್ಲಿ ಅವರು ಸ್ವೀಡನ್‌ನ ಕೋನಿ ಜೆಪ್ಸನ್ ಅವರನ್ನು ಸೋಲಿಸಿದರು.

3 / 6
All England Championship: ಫೈನಲ್ ತಲುಪಿದ ಅತ್ಯಂತ ಕಿರಿಯ ಭಾರತೀಯ ಲಕ್ಷ್ಯ ಸೇನ್! ಇವರಿಗೂ ಮುನ್ನ ಈ ಸಾಧನೆ ಮಾಡಿದವರ ಪಟ್ಟಿ

ಇದಾದ ಬಳಿಕ ಭಾರತ ಈ ಪ್ರಶಸ್ತಿಗಾಗಿ ಬಹಳ ವರ್ಷ ಕಾಯಬೇಕಾಗಿ ಬಂದಿದ್ದು, ಮತ್ತೊಬ್ಬ ಪ್ರಕಾಶ್ ಅವರಿಂದ ಈ ಕಾಯುವಿಕೆ ಅಂತ್ಯಗೊಂಡಿತು. ಭಾರತದ ಅತ್ಯುತ್ತಮ ಸಿಂಗಲ್ಸ್ ಆಟಗಾರ ಎಂದು ಪರಿಗಣಿಸಲ್ಪಟ್ಟ ಪ್ರಕಾಶ್ ಪಡುಕೋಣೆ 1980 ರಲ್ಲಿ ಮೊದಲ ಬಾರಿಗೆ ಫೈನಲ್‌ಗೆ ಪ್ರವೇಶಿಸಿದರು ಮತ್ತು ಮೊದಲ ಬಾರಿಗೆ ಪ್ರಶಸ್ತಿಯನ್ನು ಗೆದ್ದರು. ಇದಾದ ನಂತರ ಮುಂದಿನ ವರ್ಷವೂ 1981ರಲ್ಲಿ ಫೈನಲ್‌ ಆಡಿದ್ದರು. ಆದರೆ ಈ ಬಾರಿ ಸೋಲನ್ನು ಎದುರಿಸಬೇಕಾಯಿತು.

4 / 6
All England Championship: ಫೈನಲ್ ತಲುಪಿದ ಅತ್ಯಂತ ಕಿರಿಯ ಭಾರತೀಯ ಲಕ್ಷ್ಯ ಸೇನ್! ಇವರಿಗೂ ಮುನ್ನ ಈ ಸಾಧನೆ ಮಾಡಿದವರ ಪಟ್ಟಿ

ಮತ್ತೆ ಸುದೀರ್ಘ ಕಾಯುವಿಕೆ ಮತ್ತು 20 ವರ್ಷಗಳ ನಂತರ 2001 ರಲ್ಲಿ, ದಿಗ್ಗಜ ಆಟಗಾರ ಪುಲ್ಲೇಲ ಗೋಪಿಚಂದ್ ಮೊದಲ ಬಾರಿಗೆ ಫೈನಲ್ ಪ್ರವೇಶಿಸಿದರು. ಪುಲ್ಲೇಲಾ ಅವರು ಚೀನಾದ ಹಾಂಗ್ ಚೆನ್ ಅವರನ್ನು 15-12, 15-6 ಸೆಟ್‌ಗಳಿಂದ ಸೋಲಿಸಿ ಪ್ರಶಸ್ತಿ ಗೆದ್ದ ಎರಡನೇ ಭಾರತೀಯ ಆಟಗಾರ ಎನಿಸಿಕೊಂಡರು.

5 / 6
All England Championship: ಫೈನಲ್ ತಲುಪಿದ ಅತ್ಯಂತ ಕಿರಿಯ ಭಾರತೀಯ ಲಕ್ಷ್ಯ ಸೇನ್! ಇವರಿಗೂ ಮುನ್ನ ಈ ಸಾಧನೆ ಮಾಡಿದವರ ಪಟ್ಟಿ

ಸೈನಾ ನೆಹ್ವಾಲ್ ಆಲ್ ಇಂಗ್ಲೆಂಡ್ ಫೈನಲ್ ತಲುಪಿದ ಮೊದಲ ಭಾರತೀಯ ಮಹಿಳಾ ಷಟ್ಲರ್ ಎಂಬ ಹಿರಿಮೆ ಪಾತ್ರರಾಗಿದ್ದಾರೆ. ಭಾರತದ ಸೂಪರ್‌ಸ್ಟಾರ್ 2015 ರ ಫೈನಲ್ ತಲುಪಲು ಯಶಸ್ವಿಯಾದರು, ಆದರೆ ಅಲ್ಲಿ ಅವರು ಸ್ಪ್ಯಾನಿಷ್ ದಂತಕಥೆ ಕ್ಯಾರೊಲಿನಾ ಮರಿನ್ ವಿರುದ್ಧ 16-21, 21-14, 21-7 ರಿಂದ ಸೋಲನುಭವಿಸಬೇಕಾಯ್ತು.

6 / 6