Lakshya Sen: ಫೈನಲ್ ಹಾದಿ ಸುಗಮವಾಗಿರಲಿಲ್ಲ; ಒಲಂಪಿಕ್, ವಿಶ್ವ ಚಾಂಪಿಯನ್ಗಳಿಗೆ ಮಣ್ಣು ಮುಕ್ಕಿಸಿದ ಲಕ್ಷ್ಯ ಸೇನ್!
All England Championship: 2022 ರಲ್ಲಿ, ಲಕ್ಷ್ಯ ಸೇನ್ ಅನೇಕ ಅದ್ಭುತ ಮೈಲುಗಲ್ಲು ಸ್ಥಾಪಿಸಿದ್ದಾರೆ. ಅವುಗಳಲ್ಲಿ ಒಂದು ಆಲ್ ಇಂಗ್ಲೆಂಡ್ ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್‌ನ ಫೈನಲ್‌ಗೆ ಟಿಕೆಟ್ ಸಿಕ್ಕಿರುವುದಾಗಿದೆ. ಆದರೆ, ಅದಕ್ಕೂ ಮುನ್ನ ಈ ವರ್ಷ ಅವರು ಇಲ್ಲಿಯವರೆಗೆ ಮಾಡಿದ ಕೆಲವು ಮೋಡಿಗಳಿವೆ.
20ರ ಹರೆಯದಲ್ಲಿ ಇತಿಹಾಸ ಸೃಷ್ಟಿಸುವವರು ತೀರಾ ಕಡಿಮೆ. ಅಂತಹ ಕೆಲವರಲ್ಲಿ ಭಾರತದ ಷಟ್ಲರ್ ಲಕ್ಷ್ಯ ಸೇನ್ ಕೂಡ ಒಬ್ಬರು. ಅವರು ಆಲ್ ಇಂಗ್ಲೆಂಡ್ ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್‌ನಲ್ಲಿ ಫೈನಲ್ ತಲುಪುವ ಮೂಲಕ ಇತಿಹಾಸ ನಿರ್ಮಿಸಿದ್ದಾರೆ. ಆದರೆ, ಈ ಇತಿಹಾಸದ ಕಥೆ ಏಕಾಏಕಿ ಬರೆದದ್ದಲ್ಲ. ಇದರ ಹಿಂದೆ ಯಾರೂ ಊಹಿಸಲಾಗದ ಅವರ ಬಲವಾದ ಪ್ರದರ್ಶನವಿದೆ.
1 / 5
2022 ರಲ್ಲಿ, ಲಕ್ಷ್ಯ ಸೇನ್ ಅನೇಕ ಅದ್ಭುತ ಮೈಲುಗಲ್ಲು ಸ್ಥಾಪಿಸಿದ್ದಾರೆ. ಅವುಗಳಲ್ಲಿ ಒಂದು ಆಲ್ ಇಂಗ್ಲೆಂಡ್ ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್‌ನ ಫೈನಲ್‌ಗೆ ಟಿಕೆಟ್ ಸಿಕ್ಕಿರುವುದಾಗಿದೆ. ಆದರೆ, ಅದಕ್ಕೂ ಮುನ್ನ ಈ ವರ್ಷ ಅವರು ಇಲ್ಲಿಯವರೆಗೆ ಮಾಡಿದ ಕೆಲವು ಮೋಡಿಗಳಿವೆ. ಇಲ್ಲಿಯವರೆಗೆ 2022 ರಲ್ಲಿ, ಅವರು ಬ್ಯಾಡ್ಮಿಂಟನ್‌ನ ದೊಡ್ಡ ತಾರೆಗಳನ್ನು ಸೋಲಿಸಿದ್ದಾರೆ. ಹಾಗಾದರೆ ಅವರು ಏಕೆ ಒಲಿಂಪಿಕ್ ಚಾಂಪಿಯನ್ ಅಥವಾ ವಿಶ್ವ ಚಾಂಪಿಯನ್ ಆಗಿಲ್ಲ? ಇಲ್ಲಿದೆ ಕುತೂಹಲಕಾರಿ ವಿಚಾರ.
2 / 5
2022 ರಲ್ಲಿ, ಲಕ್ಷ್ಯ ಸೇನ್ ಎದುರು ಸೋತ ಅತಿದೊಡ್ಡ ಶಟ್ಲರ್‌ನ ಹೆಸರು ವಿಕ್ಟರ್ ಅಕ್ಸೆಲ್ಸೆನ್, ಅವರು ಕಳೆದ ವರ್ಷ ಟೋಕಿಯೊದಲ್ಲಿ ನಡೆದ ಒಲಿಂಪಿಕ್ಸ್‌ನಲ್ಲಿ ಚಾಂಪಿಯನ್ ಆಗಿದ್ದರು. ಆಲ್ ಇಂಗ್ಲೆಂಡ್‌ನ ಫೈನಲ್‌ನಲ್ಲೂ ಮತ್ತೊಮ್ಮೆ ಅವರನ್ನು ಎದುರಿಸುವ ಗುರಿ ಇದೆ. ಲಕ್ಷ್ಯ ಸೇನ್ ನಂತರ ಟೋಕಿಯೊ ಒಲಿಂಪಿಕ್ಸ್ ಕಂಚಿನ ಪದಕ ವಿಜೇತ ಆಂಥೋನಿ ಗಿಂಟಿಂಗ್ ಅವರನ್ನು ಸೋಲಿಸಿದರು.
3 / 5
ಲಕ್ಷ್ಯ ಸೇನ್ ಕಳೆದ ವರ್ಷ ವಿಶ್ವ ಚಾಂಪಿಯನ್‌ಶಿಪ್ ವಿಜೇತ ಲೋಹ್ ಕೀನ್ ಯೂ ಅವರನ್ನು ಸೋಲಿಸಿದ್ದಾರೆ. ಇದಲ್ಲದೇ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಕಂಚಿನ ಪದಕ ಗೆದ್ದ ಆ್ಯಂಡರ್ಸ್ ಆ್ಯಂಟನ್‌ಸೆನ್, ಲಕ್ಷ್ಯ ಮುಂದೆ ಮಂಡಿಯೂರಿದ್ದಾರೆ.
4 / 5
ಈಗ ಅವರು ಲಿ ಜಿಯಾ ಅವರನ್ನು ಸೋಲಿಸುವ ಮೂಲಕ ಸಂಚಲನ ಮೂಡಿಸಿದ್ದಾರೆ. ಜಿಯಾ ಕಳೆದ ವರ್ಷ ಆಲ್ ಇಂಗ್ಲೆಂಡ್ ಚಾಂಪಿಯನ್‌ಶಿಪ್ ವಿಜೇತರಾಗಿದ್ದರು. ಆದರೆ ಈ ವರ್ಷ ಅವರ ಪ್ರಯಾಣವು ಸೆಮಿ-ಫೈನಲ್‌ನಲ್ಲಿ ಸ್ಥಗಿತಗೊಂಡಿತು ಏಕೆಂದರೆ ಲಕ್ಷ್ಯ ಸೇನ್ ತಮ್ಮ ಇತಿಹಾಸವನ್ನು ನಿರ್ಮಿಸಲು ಹಠ ಹಿಡಿದಿದ್ದರು.