
ನಟಿ ಅಮೃತಾ ಐಯ್ಯಂಗಾರ್ ಅವರಿಗೆ ಇಂದು (ಜುಲೈ 26) ಬರ್ತ್ಡೇ ಸಂಭ್ರಮ. ಅವರಿಗೆ ಎಲ್ಲ ಕಡೆಗಳಿಂದ ಶುಭಾಶಯ ಬರುತ್ತಿವೆ. ಸೋಶಿಯಲ್ ಮೀಡಿಯಾ ಮೂಲಕ ನಟಿಗೆ ವಿಶ್ ತಿಳಿಸಲಾಗುತ್ತಿದೆ.

ಡಾಲಿ ಧನಂಜಯ್, ಸಪ್ತಮಿ ಗೌಡ ಸೇರಿ ಅನೇಕರು ಅಮೃತಾ ಐಯ್ಯಂಗಾರ್ಗೆ ವಿಶ್ ಮಾಡಿದ್ದಾರೆ. ಹಲವು ಅಭಿಮಾನಿಗಳು ಕೂಡ ಅಮೃತಾಗೆ ವಿಶ್ ಮಾಡಿ ಶುಭಕೋರಿದ್ದಾರೆ.

ಅಮೃತಾ ಐಯ್ಯಂಗಾರ್ ಅವರು 2017ರಲ್ಲಿ ಚಿತ್ರರಂಗಕ್ಕೆ ಕಾಲಿಟ್ಟರು. ‘ಸಿಂಹ ಹಾಕಿದ ಹೆಜ್ಜೆ’ ಅವರ ನಟನೆಯ ಮೊದಲ ಸಿನಿಮಾ. 2019ರಲ್ಲಿ ‘ಅನುಷ್ಕಾ’ ಹೆಸರಿನ ಸಿನಿಮಾದಲ್ಲಿ ನಟಿಸಿದರು.

2020ರ ಸೂಪರ್ ಹಿಟ್ ಚಿತ್ರ ‘ಲವ್ ಮಾಕ್ಟೇಲ್’ ಸಿನಿಮಾ ಅಮೃತಾ ಐಯ್ಯಂಗಾರ್ ಅವರ ಬದುಕನ್ನು ಬದಲಾಯಿಸಿತು. ಡಾರ್ಲಿಂಗ್ ಕೃಷ್ಣ ಈ ಚಿತ್ರ ನಿರ್ದೇಶನ ಮಾಡಿದ್ದರು.

ಅಮೃತಾ ಐಯ್ಯಂಗಾರ್ ಅವರು ಈ ಚಿತ್ರದಲ್ಲಿ ಮಾಡಿದ್ದ ಜೋ ಪಾತ್ರ ಸಾಕಷ್ಟು ಗಮನ ಸೆಳೆಯಿತು. ಈ ಸಿನಿಮಾ ಬಳಿಕ ಅವರಿಗೆ ಸಾಕಷ್ಟು ಆಫರ್ಗಳು ಬಂದವು.

ಅಮೃತಾ ಹಾಗೂ ಧನಂಜಯ್ ಅವರದ್ದು ಸೂಪರ್ ಹಿಟ್ ಕಾಂಬಿನೇಷನ್ ಎನಿಸಿಕೊಂಡಿದೆ. ‘ಪಾಪ್ಕಾರ್ನ್ ಮಂಕಿ ಟೈಗರ್’, ‘ಬಡವ ರಾಸ್ಕಲ್’ ಹಾಗೂ ‘ಹೊಯ್ಸಳ’ ಸಿನಿಮಾ ಇವರ ಕಾಂಬಿನೇಷನ್ನಲ್ಲಿ ಮೂಡಿ ಬಂದಿದೆ.

ಸದ್ಯ ಅಮೃತಾ ಅವರು ಹೊಸ ಹೊಸ ಕಥೆಗಳನ್ನು ಕೇಳುತ್ತಿದ್ದಾರೆ. ಇಷ್ಟವಾದ ಸ್ಕ್ರಿಪ್ಟ್ಗಳನ್ನು ಒಪ್ಪಿ ಅವರು ನಟಿಸುತ್ತಿದ್ದಾರೆ.