
ಆ್ಯಂಕರ್ ಅನುಶ್ರೀ ಹಾಗೂ ಹನುಮಂತ ಮಧ್ಯೆ ಒಳ್ಳೆಯ ಬಾಂಡಿಂಗ್ ಇದೆ. ಇದಕ್ಕೆ ಸಾಕ್ಷಿ ಒದಗಿಸುವ ರೀತಿಯಲ್ಲಿ ಇದೆ ಹನುಮಂತ ಹಂಚಿಕೊಂಡ ಫೋಟೋಗಳು. ಇಬ್ಬರ ಬಾಂಡಿಂಗ್ ನೋಡಿ ಫ್ಯಾನ್ಸ್ ಖುಷಿಪಟ್ಟಿದ್ದಾರೆ. ಇವರ ಫೋಟೋಗೆ ಭರ್ಜರಿ ಲೈಕ್ಸ್ ಸಿಕ್ಕಿದೆ.

ಹನುಮಂತ ಅವರು ಹೆಚ್ಚು ಜನಪ್ರಿಯತೆ ಪಡೆದಿದ್ದು ‘ಸರಿಗಮಪ’ ವೇದಿಕೆ ಮೇಲೆ. ಈ ರಿಯಾಲಿಟಿ ಶೋ ಮೂಲಕ ಅವರಿಗೆ ಸಾಕಷ್ಟು ಜನಪ್ರಿಯತೆ ಸಿಕ್ಕಿತು. ಈ ರಿಯಾಲಿಟಿ ಶೋನ ಆ್ಯಂಕರಿಂಗ್ ಮಾಡಿದ್ದು ಅನುಶ್ರೀ ಅವರು. ಹೀಗಾಗಿ, ಇವರ ಮಧ್ಯೆ ಒಳ್ಳೆಯ ಬಾಂಡಿಗ್ ಬೆಳೆದಿದೆ.

ಹನುಮಂತ ಹಾಗೂ ಅನುಶ್ರೀ ಮಧ್ಯೆ ಈಗಲೂ ಅದೇ ಬಾಂಡಿಂಗ್ ಇದೆ. ಈ ಫೋಟೋಗಳು ಬಾಂಡಿಂಗ್ನ ಹೇಳುವಂತಿದೆ. ಫ್ಯಾನ್ಸ್ ಕಡೆಯಿಂದ ಫೋಟೋಗೆ ಭರ್ಜರಿ ಲೈಕ್ಸ್ಗಳು ಸಿಕ್ಕಿವೆ. ಅಕ್ಕ-ತಮ್ಮನ ಬಾಂಡಿಂಗ್ ಹೀಗೆಯೇ ಮುಂದುವರಿಯಲಿ ಎಂದು ಫ್ಯಾನ್ಸ್ ಬಯಸುತ್ತಾ ಇದ್ದಾರೆ.

ಹನುಮಂತ ಅವರು ‘ಬಿಗ್ ಬಾಸ್ ಕನ್ನಡ ಸೀಸನ್ 11’ರ ಮೂಲಕ ಫೇಮಸ್ ಆದರು. ಸೀಸನ್ ಗೆಲ್ಲುವ ಮೂಲಕ ಕಪ್ನ ತಮ್ಮದಾಗಿಸಿಕೊಂಡರು. ‘ಬಾಯ್ಸ್ vs ಗರ್ಲ್ಸ್’ ರಿಯಾಲಿಟಿ ಶೋ ಮೂಲಕವೂ ಅವರಿಗೆ ಜನಪ್ರಿಯತೆ ಸಿಕ್ಕಿದೆ.

ಹನುಮಂತ ಅವರು ರಾಜೇಶ್ ಕೃಷ್ಣನ್ ಜೊತೆಯೂ ಕಾಣಿಸಿಕೊಂಡಿದ್ದಾರೆ. ಇವರನ್ನು ‘ಗುರುಗಳು’ ಎಂದು ಕರೆದಿದ್ದಾರೆ. ಹನುಮಂತ ಅವರ ಖ್ಯಾತಿ ದಿನ ಕಳೆದಂತೆ ಹೆಚ್ಚುತ್ತಿದೆ. ಅವರು ಮತ್ತೆ ಜೀ ಕನ್ನಡ ವೇದಿಕೆ ಮೇಲೆ ಕಾಣಿಸಿಕೊಳ್ಳಲಿ ಎಂದು ಫ್ಯಾನ್ಸ್ ಬಯಸುತ್ತಿದ್ದಾರೆ.
Published On - 9:07 am, Tue, 29 April 25