ಸ್ಟಾರ್​ ನಟರ ಸಿನಿಮಾಗಳಿಗೆ ಬಹುಬೇಡಿಕೆಯ ಹೀರೋಯಿನ್​ ಆದ ತೃಪ್ತಿ ದಿಮ್ರಿ

|

Updated on: Sep 16, 2024 | 8:06 AM

ನಟಿ ತೃಪ್ತಿ ದಿಮ್ರಿ ಅವರ ಅದೃಷ್ಟ ಖುಲಾಯಿಸಿದೆ. ‘ಅನಿಮಲ್’ ಸಿನಿಮಾದ ಯಶಸ್ಸಿನ ಬಳಿಕ ಅವರಿಗೆ ಸಿಕ್ಕಾಪಟ್ಟೆ ಆಫರ್​ಗಳು ಬರಿದುಬರುತ್ತಿವೆ. ಸ್ಟಾರ್​ ನಟರ ಸಿನಿಮಾಗಳಿಗೆ ಬಹುಬೇಡಿಕೆಯ ಹೀರೋಯಿನ್​ ಆಗಿ ಅವರೀಗ ಗುರುತಿಸಿಕೊಂಡಿದ್ದಾರೆ. ಬ್ಯಾಕ್​ ಟು ಬ್ಯಾಕ್​ ಸಿನಿಮಾಗಳನ್ನು ತೃಪ್ತಿ ದಿಮ್ರಿ ಅವರು ಒಪ್ಪಿಕೊಳ್ಳುತ್ತಿದ್ದಾರೆ. ಈಗ ಅವರೊಂದು ಹೊಸ ಸಿನಿಮಾಗೆ ಸಹಿ ಮಾಡಿದ್ದಾರೆ.

1 / 5
‘ಅನಿಮಲ್​’ ಸಿನಿಮಾದಲ್ಲಿ ತೃಪ್ತಿ ದಿಮ್ರಿ ಮಾಡಿದ್ದು ಒಂದು ಚಿಕ್ಕ ಪಾತ್ರ ಅಷ್ಟೇ. ಆದರೆ ಆ ಪಾತ್ರದಿಂದ ಅವರಿಗೆ ಸಿಕ್ಕ ಯಶಸ್ಸು ತುಂಬ ದೊಡ್ಡದು. ಬೋಲ್ಡ್​ ಆಗಿ ಕಾಣಿಸಿಕೊಂಡ ಅವರು ಸಖತ್​ ಜನಪ್ರಿಯತೆ ಗಳಿಸಿದರು. ಈಗ ಅವರ ಡಿಮ್ಯಾಂಡ್​ ಹೆಚ್ಚಿದೆ.

2 / 5
ಭಾರಿ ವೈರಲ್​ ಆದ ‘ತೋಬಾ ತೋಬಾ..’ ಹಾಡಿನ ಮೂಲಕವೂ ತೃಪ್ತಿ ದಿಮ್ರಿ ಅವರು ಸೆನ್ಸೇಷನ್​ ಸೃಷ್ಟಿ ಮಾಡಿದರು. ಸೋಶಿಯಲ್​ ಮೀಡಿಯಾದಲ್ಲೂ ಅವರ ಚಾರ್ಮ್​ ಹೆಚ್ಚಾಗಿದೆ. ಹತ್ತು ಹಲವು ಅವಕಾಶಗಳು ತೃಪ್ತಿ ದಿಮ್ರಿ ಅವರನ್ನು ಹುಡುಕಿಕೊಂಡು ಬರುತ್ತಿವೆ.

3 / 5
ನಟ ಕಾರ್ತಿಕ್​ ಆರ್ಯನ್​ ಅವರ ಹೊಸ ಸಿನಿಮಾಗೆ ತೃಪ್ತಿ ದಿಮ್ರಿ ಅವರೇ ಹೀರೋಯಿನ್​ ಆಗಿ ಆಯ್ಕೆ ಆಗಿದ್ದಾರೆ ಎಂಬ ಸುದ್ದಿ ಕೇಳಿಬಂದಿದೆ. ಈಗಾಗಲೇ ಅವರಿಬ್ಬರು ‘ಭೂಲ್​ ಭುಲಯ್ಯ 3’ ಸಿನಿಮಾದಲ್ಲಿ ಒಟ್ಟಿಗೆ ನಟಿಸುತ್ತಿದ್ದಾರೆ. ಈಗ ಹೊಸ ಸಿನಿಮಾವನ್ನು ಒಪ್ಪಿಕೊಂಡಿದ್ದಾರೆ.

4 / 5
‘ಸ್ತ್ರೀ 2’ ಮೂಲಕ ಸೂಪರ್ ಸಕ್ಸಸ್​ ಕಂಡಿರುವ ರಾಜ್​ಕುಮಾರ್​ ರಾವ್​ ಜೊತೆ ‘ವಿಕ್ಕಿ ವಿದ್ಯಾ ಕಾ ವೋ ವಾಲಾ ವಿಡಿಯೋ’ ಸಿನಿಮಾದಲ್ಲಿ ಕೂಡ ತೃಪ್ತಿ ದಿಮ್ರಿ ಅವರು ನಟಿಸಿದ್ದಾರೆ. ಟ್ರೇಲರ್​ನಿಂದ ಗಮನ ಸೆಳೆದ ಈ ಸಿನಿಮಾ ಅಕ್ಟೋಬರ್ 11ರಂದು ಬಿಡುಗಡೆ ಆಗಲಿದೆ.

5 / 5
ಕರಣ್ ಜೋಹರ್​ ಅವರ ‘ಧರ್ಮ ಪ್ರೊಡಕ್ಷನ್ಸ್​’ ಮೂಲಕ ‘ಧಡಕ್​ 2’ ಸಿನಿಮಾ ನಿರ್ಮಾಣ ಆಗುತ್ತಿದೆ. ಆ ಸಿನಿಮಾಗೂ ತೃಪ್ತಿ ದಿಮ್ರಿ ಅವರು ಹೀರೋಯಿನ್​ ಆಗಿದ್ದಾರೆ. ಆ ಸಿನಿಮಾದಲ್ಲಿ ಸಿದ್ಧಾಂತ್ ಚತುರ್ವೇದಿ ಜೊತೆ ತೃಪ್ತಿ ದಿಮ್ರಿ ಅವರು ತೆರೆ ಹಂಚಿಕೊಳ್ಳಲಿದ್ದಾರೆ.