ನಟಿ ಅನುಷ್ಕಾ ಶರ್ಮಾ ಅವರು ಮತ್ತೆ ಸಿನಿಮಾ ಕೆಲಸಗಳಲ್ಲಿ ಬ್ಯುಸಿ ಆಗಿದ್ದಾರೆ. ಮದುವೆ ನಂತರ ಚಿತ್ರರಂಗದಿಂದ ಬ್ರೇಕ್ ಪಡೆದಿದ್ದ ಅವರು ಈಗ ಮತ್ತೆ ಬಣ್ಣದ ಲೋಕಕ್ಕೆ ಮರಳಿದ್ದಾರೆ.
ಅನುಷ್ಕಾ ಶರ್ಮಾ ಅವರು ಸೋಶಿಯಲ್ ಮೀಡಿಯಾದಲ್ಲಿ ಆ್ಯಕ್ಟೀವ್ ಆಗಿದ್ದಾರೆ. ಅವರು ಕೋಲ್ಕತ್ತಾ ಸುತ್ತಾಡಿದ ಫೋಟೋ ವೈರಲ್ ಆಗಿದೆ.
ಸಿನಿಮಾ ಕೆಲಸಕ್ಕಾಗಿ ಅನುಷ್ಕಾ ಕೋಲ್ಕತ್ತದಲ್ಲಿದ್ದಾರೆ. ಮಗಳು ವಮಿಕಾ ಕೂಡ ಅನುಷ್ಕಾ ಜತೆಯಲ್ಲೇ ಇದ್ದಾರೆ. ಈ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಅನುಷ್ಕಾ ಶರ್ಮಾ ಅವರು ಗಂಗಾ ನದಿಗೆ ತೆರಳಿ ನಮಿಸಿದ್ದಾರೆ. ಈ ಫೋಟೋಗಳನ್ನು ಅವರು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
ವಿರಾಟ್ ಕೊಹ್ಲಿ ಅವರು ಟಿ-20 ವಿಶ್ವಕಪ್ ಆಡಲು ಆಸ್ಟ್ರೇಲಿಯಾ ತೆರಳಿದ್ದಾರೆ. ಪಾಕ್ ವಿರುದ್ಧದ ಪಂದ್ಯದಲ್ಲಿ ವಿರಾಟ್ ಅಬ್ಬರಿಸಿದಾಗ ಅನುಷ್ಕಾ ಸಂತಸ ವ್ಯಕ್ತಪಡಿಸಿದ್ದರು.