Updated on: Oct 29, 2022 | 5:08 PM
ಪುನೀತ್ ರಾಜ್ಕುಮಾರ್ ಅವರ ಬೆಂಗಳೂರಿನ ಸದಾಶಿವನಗರದ ಮನೆ ಖಾಲಿ ಖಾಲಿ ಎನಿಸುತ್ತಿದೆ. ಪುನೀತ್ ಖುಷಿಯಿಂದ ಓಡಾಡಿಕೊಂಡಿದ್ದ ಮನೆಯಲ್ಲಿ ಪುನೀತ್ ಭಾವಚಿತ್ರವಿದೆ. ಈ ಫೋಟೋ ದುಃಖ ತರಿಸುತ್ತಿದೆ.
ಪುನೀತ್ ರಾಜ್ಕುಮಾರ್ ಅವರು ನಿಧನ ಹೊಂದಿ ಇಂದಿಗೆ (ಅಕ್ಟೋಬರ್ 29) ಒಂದು ವರ್ಷ ಕಳೆದಿದೆ. ಇಂದು ಅವರ ಪುಣ್ಯತಿಥಿ ನೆರವೇರಿದೆ.
ಪುನೀತ್ ರಾಜ್ಕುಮಾರ್ ಅವರ ಫೋಟೋವನ್ನು ಇಟ್ಟು ಹೂವಿನಿಂದ ಅಲಂಕಾರ ಮಾಡಲಾಗಿದೆ. ಅವರಿಷ್ಟದ ತಿಂಡಿಗಳನ್ನು ಇರಿಸಲಾಗಿದೆ.
ಈ ಫೋಟೋ ನೋಡಿದ ಅಭಿಮಾನಿಗಳು ಬೇಸರ ಹೊರಹಾಕಿದ್ದಾರೆ. ಈ ಭಾವಚಿತ್ರ ಅಭಿಮಾನಿಗಳ ಕಣ್ಣಲ್ಲಿ ನೀರು ತರಿಸುತ್ತಿದೆ.
ಕಂಠೀರವ ಸ್ಟುಡಿಯೋದಲ್ಲಿ ಪುನೀತ್ ರಾಜ್ಕುಮಾರ್ ಅವರ ಸಮಾಧಿ ಇದೆ. ಈ ಸಮಾಧಿ ಬಳಿ ಸಾವಿರಾರು ಅಭಿಮಾನಿಗಳು ನೆರೆದಿದ್ದಾರೆ.