Updated on:Apr 29, 2023 | 10:51 AM
ಆ್ಯಪಲ್ ಸಿಇಒ ಟಿಮ್ ಕುಕ್ ಇತ್ತೀಚೆಗಷ್ಟೇ ಭಾರತದಲ್ಲಿ ತನ್ನ ಮೊದಲೆರಡು ಆ್ಯಪಲ್ ಸ್ಟೋರ್ಗಳನ್ನು ಉದ್ಘಾಟನೆಗೊಳಿಸಿದ್ದಾರೆ.
ಮುಂಬೈನ ಬಾಂದ್ರಾ ಕುರ್ಲಾ ಕಾಂಪ್ಲೆಕ್ಸ್ನಲ್ಲಿರುವ ಜಿಯೋ ವರ್ಲ್ಡ್ ಡ್ರೈವ್ನಲ್ಲಿ ಸ್ಥಾಪಿಸಲಾಗಿರುವ ಆ್ಯಪಲ್ ಬಿಕೆಸಿ ಸ್ಟೋರ್ ಈಗಾಗಲೇ ಜನರನ್ನು ಸೆಳೆಯುತ್ತಿದೆ.
ಆದರೆ ಇದೀಗಾ ಸಾಕಷ್ಟು ಜನರಲ್ಲಿ ಆ್ಯಪಲ್ ಸ್ಟೋರ್ ಸಿಬ್ಬಂದಿಗಳ ತಿಂಗಳ ವೇತನದ ಕುರಿತು ಚರ್ಚೆ ನಡೆಯುತ್ತಿದೆ. ಇಲ್ಲಿನ ಸಿಬ್ಬಂದಿಗಳ ಸಂಬಳ ಕೇಳಿದರಂತೂ ನೀವು ಶಾಕ್ ಆಗುವುದಂತೂ ಖಂಡಿತಾ.
ಭಾರತದಲ್ಲಿ ಪ್ರಾರಂಭಿಸಲಾದ ತನ್ನ ಮೊದಲೆರಡು ಕಂಪೆನಿಗಳನ್ನು ನಿರ್ವಹಿಸಲು ಸುಮಾರು 170 ಸಿಬ್ಬಂದಿಗಳನ್ನು ನೇಮಕಾತಿ ಮಾಡಿಕೊಂಡಿದೆ ಎಂದು ಮಾಧ್ಯಮಗಳ ವರದಿಯಿಂದ ತಿಳಿದುಬಂದಿದೆ.
ಜೊತೆಗೆ ಸಿಬ್ಬಂದಿಗಳ ಮಾಸಿಕ ವೇತನ 1 ಲಕ್ಷ ರೂಪಾಯಿ. ಈ ಸಂಬಳವು ಇತರ ಟೆಕ್ ಬ್ರ್ಯಾಂಡ್‌ಗಳು ತಮ್ಮ ರಿಟೇಲ್ ಸ್ಟೋರ್ ಉದ್ಯೋಗಿಗಳಿಗೆ ಪಾವತಿಸುವುದಕ್ಕಿಂತ ನಾಲ್ಕು ಪಟ್ಟು ಹೆಚ್ಚು ಎಂದು ವರದಿಯ ಮೂಲಕ ತಿಳಿದುಬಂದಿದೆ.
ಜೊತೆಗೆ ತನ್ನ ಗ್ರಾಹಕರಿಗೆ ಅನುಕೂಲವಾಗುವಂತೆ ಸರಿಸುಮಾರು 20 ಭಾಷೆಗಳಲ್ಲಿ ಸಂವಹನ ನಡೆಸಲು ಸಾಮರ್ಥ್ಯವುಳ್ಳ ಸಿಬ್ಬಂದಿಗಳನ್ನು ನಿಯೋಜಿಸಲಾಗಿದೆ ವರದಿಗಳ ಮೂಲಕ ತಿಳಿದುಬಂದಿದೆ.
Published On - 10:47 am, Sat, 29 April 23