ಅರವಿಂದ್ ಕೆಪಿ ಭೇಟಿಗೆ 1000 ದಿನ; ಸಂಭ್ರಮಿಸಿದ ದಿವ್ಯಾ ಉರುಡುಗ
‘ಕನ್ನಡ ಬಿಗ್ ಬಾಸ್ ಸೀಸನ್ 8’ 2021ರ ಮೇ 8ರಂದು ಆರಂಭ ಆಯಿತು. ಅಂದು ಇಬ್ಬರು ಪರಸ್ಪರ ಭೇಟಿ ಆದರು. ಈ ಸೀಸನ್ನಲ್ಲಿ ಅರವಿಂದ್ ಹಾಗೂ ದಿವ್ಯಾ ಸಖತ್ ಕ್ಲೋಸ್ ಆದರು. ಅಲ್ಲಿಂದ ಇವರ ಬಂಧ ಗಟ್ಟಿ ಆಗುತ್ತಲೇ ಇದೆ.
1 / 6
ದಿವ್ಯಾ ಉರುಡುಗ ಹಾಗೂ ಅರವಿಂದ್ ಕೆಪಿ ಜೋಡಿ ಸಾಕಷ್ಟು ವಿಶೇಷ ಎನಿಸಿಕೊಳ್ಳುತ್ತದೆ. ಇವರು ಮೊದಲ ಬಾರಿ ಭೇಟಿ ಆಗಿದ್ದು ಬಿಗ್ ಬಾಸ್ ಮನೆಯಲ್ಲಿ. ಈ ಭೇಟಿಗೆ ಸಾವಿರ ದಿನ ಆಗಿದೆ. ಈ ಬಗ್ಗೆ ದಿವ್ಯಾ ಉರುಡುಗ ಅವರು ಮಾಹಿತಿ ಹಂಚಿಕೊಂಡಿದ್ದಾರೆ.
2 / 6
ಅರವಿಂದ್ ಕೆಪಿ ಜೊತೆಗಿನ ಫೋಟೋನ ದಿವ್ಯಾ ಹಂಚಿಕೊಂಡಿದ್ದಾರೆ. ‘ನಿಮ್ಮ ಜೊತೆ ಒಂದು ಸಾವಿರ ಗೋಲ್ಡನ್ ದಿನಗಳು. ನಿಮ್ಮ ಬಗ್ಗೆ ಆಲೋಚಿಸಿದಾಗ ನಾನೆಷ್ಟು ಲಕ್ಕಿ ಎಂಬುದು ಮನಸ್ಸಿಗೆ ಬರುತ್ತದೆ’ ಎಂದು ದಿವ್ಯಾ ಉರುಡುಗ ಬರೆದುಕೊಂಡಿದ್ದಾರೆ.
3 / 6
‘ಕನ್ನಡ ಬಿಗ್ ಬಾಸ್ ಸೀಸನ್ 8’ 2021ರ ಮೇ 8ರಂದು ಆರಂಭ ಆಯಿತು. ಅಂದು ಇಬ್ಬರು ಪರಸ್ಪರ ಭೇಟಿ ಆದರು. ಈ ಸೀಸನ್ನಲ್ಲಿ ಅರವಿಂದ್ ಹಾಗೂ ದಿವ್ಯಾ ಸಖತ್ ಕ್ಲೋಸ್ ಆದರು. ಅಲ್ಲಿಂದ ಇವರ ಬಂಧ ಗಟ್ಟಿ ಆಗುತ್ತಲೇ ಇದೆ.
4 / 6
‘ಅರ್ದಂಬರ್ಧ ಪ್ರೇಮ ಕಥೆ’ ಸಿನಿಮಾದಲ್ಲಿ ದಿವ್ಯಾ ಹಾಗೂ ಅರವಿಂದ್ ಕೆಪಿ ಒಟ್ಟಾಗಿ ನಟಿಸಿದ್ದಾರೆ. ಈ ಸಿನಿಮಾ ಶೀಘ್ರದಲ್ಲೇ ರಿಲೀಸ್ ಆಗಲಿದೆ. ಅರವಿಂದ್ ನಟಿಸಿದ ಮೊದಲ ಸಿನಿಮಾ ಇದು ಅನ್ನೋದು ವಿಶೇಷ.
5 / 6
ದಿವ್ಯಾ ಉರುಡುಗ ಅವರು ಕನ್ನಡದ ಕೆಲವು ಚಿತ್ರಗಳಲ್ಲಿ ನಟಿಸಿದ್ದಾರೆ. ‘ಬಿಗ್ ಬಾಸ್ ಕನ್ನಡ ಸೀಸನ್ 8’ ಹಾಗೂ ‘ಸೀಸನ್ 9’ರಲ್ಲಿ ಅವರು ಕಾಣಿಸಿಕೊಂಡಿದ್ದಾರೆ. ಎರಡೂ ಸೀಸನ್ನಲ್ಲಿ ಅವರು ಫಿನಾಲೆ ಹಂತಕ್ಕೆ ಬಂದಿದ್ದರು.
6 / 6
ಅರವಿಂದ್ ಹಾಗೂ ದಿವ್ಯಾ ಶೀಘ್ರದಲ್ಲೇ ಮದುವೆ ಆಗುತ್ತಾರೆ ಎನ್ನುವ ಸುದ್ದಿ ಇದೆ. ಆದರೆ, ಈ ವಿಚಾರವನ್ನು ಜೋಡಿ ಬಿಟ್ಟುಕೊಟ್ಟಿಲ್ಲ. ಇಬ್ಬರೂ ಹಾಯಾಗಿ ಸುತ್ತಾಡಿಕೊಂಡಿದ್ದಾರೆ.