- Kannada News Photo gallery Raichur Head Constable son Aniket selected to 2023-24 under 16 cricket team
ರಾಯಚೂರು ಹೆಡ್ ಕಾನ್ಸ್ಟೇಬಲ್ ಪುತ್ರ ಅನಿಕೇತ್ ಕ್ರಿಕೆಟ್ ಸಾಧನೆ: ಅಂಡರ್ 16 ತಂಡಕ್ಕೆ ಆಯ್ಕೆ
ರಾಯಚೂರು ನಗರದ ಸ್ರೈಬರ್ ಕ್ರೈಂ ಪೊಲೀಸ್ ಠಾಣೆಯ ಹೆಡ್ ಕಾನ್ಸ್ಟೇಬಲ್ ವಿಕ್ರಮರೆಡ್ಡಿ ಪುತ್ರ ಅನಿಕೇತ (16) ಅವರ ಕ್ರಿಕೆಟ್ ಸಾಧನೆಗೆ ಪ್ರಶಂಸೆ ವ್ಯಕ್ತವಾಗುತ್ತಿದೆ. 2023-24 ನೇ ಸಾಲಿನ ಅಂಡರ್ 16 ಕ್ರಿಕೆಟ್ ಟೀಂಗೆ ಆಯ್ಕೆಯಾಗಿದ್ದಾರೆ.
Updated on:Nov 25, 2023 | 9:56 AM

2023-24 ನೇ ಸಾಲಿನ ಅಂಡರ್ 16 ಕ್ರಿಕೆಟ್ ಟೀಂಗೆ ರಾಯಚೂರಿನ ಹೆಡ್ ಕಾನ್ಸ್ಟೇಬಲ್ ಪುತ್ರ ಆಯ್ಕೆಯಾಗಿದ್ದಾರೆ.

ರಾಯಚೂರು ನಗರದ ಸ್ರೈಬರ್ ಕ್ರೈಂ ಪೊಲೀಸ್ ಠಾಣೆಯ ಹೆಡ್ ಕಾನ್ಸ್ಟೇಬಲ್ ವಿಕ್ರಮರೆಡ್ಡಿ ಪುತ್ರ ಅನಿಕೇತ (16) ಅವರ ಕ್ರಿಕೆಟ್ ಸಾಧನೆಗೆ ಪ್ರಶಂಸೆ ವ್ಯಕ್ತವಾಗುತ್ತಿದೆ.

ಬಿಸಿಸಿಐ ಹಾಗೂ ಕೆಎಸ್ಸಿಎ ವಿಜಯ ಮರ್ಚೆಂಟ್ ಟ್ರೋಫಿಯ ಕರ್ನಾಟಕ ತಂಡದ ಆಟಗಾರ ಪಟ್ಟಿ ರಿಲೀಸ್ ಮಾಡಿದೆ. ಈ ಪಟ್ಟಿಯಲ್ಲಿ ರಾಹುಲ್ ದ್ರಾವಿಡ್ರ ಪುತ್ರ ಅನ್ವಯ್ ದ್ರಾವಿಡ್ ಕ್ಯಾಪ್ಟನ್ ಆಗಿ ಸ್ಥಾನ ಪಡೆದಿದ್ದು, ಅನಿಕೇತ ರೆಡ್ಡಿ ವೈಸ್ ಕ್ಯಾಪ್ಟನ್ ಆಗಿದ್ದಾರೆ.

ಅನಿಕೇತ್ ಬಾಲ್ಯದಿಂದಲೇ ಕ್ರಿಕೆಟ್ ಬಗ್ಗೆ ಆಸಕ್ತಿ ಹೊಂದಿದ್ದು, ಭಾರತ ಕ್ರಿಕೆಟ್ ತಂಡದ ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಕ್ರಿಕೆಟ್ ಅಕಾಡೆಮಿಯಲ್ಲಿ ಅಭ್ಯಾಸ ಮಾಡುತ್ತಿದ್ದಾರೆ.

ಅನಿಕೇತ ಡಿಸೆಂಬರ್ 1 ರಿಂದ 23 ರವರೆಗೆ ವಿಜಯವಾಡದಲ್ಲಿ ನಡೆಯಲಿರುವ ಕ್ರಿಕೆಟ್ ಟೂರ್ನಿಯಲ್ಲಿ ಆಡಲಿದ್ದಾರೆ.

ಹೆಡ್ ಕಾನ್ಸ್ಟೇಬಲ್ ವಿಕ್ರಮ್ ರೆಡ್ಡಿ ಮಗನಿಗಾಗಿ ಎರಡು ವರ್ಷ ಪ್ರೊಮೋಷನ್ ರಿಜೆಕ್ಟ್ ಮಾಡಿದ್ದರು. "ನಾನೆ ಎರಡು ವರ್ಷ ಪ್ರೊಮೋಷನ್ ಬೇಡ ಅಂತ ಬರೆದು ಕೊಟ್ಟೆ" ಎಂದು ಹೆಡ್ ಕಾನ್ಸ್ಟೇಬಲ್ ವಿಕ್ರಮ ರೆಡ್ಡಿ ಹೇಳಿದರು.

ಪೊಲೀಸ್ ವೃತ್ತಿ ನಡುವೇಯೂ ಹೆಡ್ ಕಾನ್ಸ್ಟೇಬಲ್ ವಿಕ್ರಮ ರೆಡ್ಡಿ ಟ್ರೈನಿಂಗ್ಗಾಗಿ ಅನಿಕೇತನನ್ನು ಬೇರೆ ಬೇರೆ ಕಡೆ ಕರೆದುಕೊಂಡು ಹೋಗಿತ್ತಿದ್ದರು.
Published On - 9:55 am, Sat, 25 November 23



















