ಆಗಾಗ್ಗೆ ಟೆನ್ಷನ್ ಆಗುತ್ತಾ? ಈ ಐದರಲ್ಲಿ ಯಾವುದಾದರೂ ಒಂದು ವಿಧಾನ ಅನುಸರಿಸಿ ನೋಡಿ, ಕೂಲ್ ಆಗ್ತೀರಿ!

|

Updated on: Aug 16, 2024 | 2:00 PM

ಕೆಲವರು ಪದೇಪದೆ ಮಾನಸಿಕ ಒತ್ತಡಕ್ಕೆ ಒಳಗಾಗುತ್ತಿರುತ್ತಾರೆ. ಇದು ಅವರ ದೈನಂದಿನ ಚಟುವಟಿಕೆಗಳ ಮೇಲೆ, ದೈಹಿಕ ಆರೋಗ್ಯದ ಮೇಲೂ ಗಂಭೀರ ಪರಿಣಾಮಗಳನ್ನುಂಟು ಮಾಡುತ್ತದೆ. ಹಾಗಾದರೆ, ಒತ್ತಡದಂತಹ ಸನ್ನಿವೇಶಗಳನ್ನು ನಿರ್ವಹಿಸಲು ಏನು ಮಾಡಬೇಕು? ಧ್ಯಾನ ಮಾಡಬಹುದೆಂದು ಅನೇಕರು ಸಲಹೆ ನೀಡಬಹುದು. ಆದರೆ ಅದೂ ಕೂಡ ಸುಲಭದಲ್ಲಿ ಸಾಧ್ಯವಾಗುವುದಿಲ್ಲ. ಪ್ರಶಾಂತವಾದ ಸ್ಥಳದಲ್ಲಿ ಒಂದೆಡೆ ಕುಳಿತುಕೊಂಡೇ ಧ್ಯಾನ ಮಾಡಬೇಕೆಂದಿಲ್ಲ! ಬದಲಿಗೆ ವಿಭಿನ್ನವಾಗಿ ಮತ್ತು ವಿವಿಧ ರೀತಿಯಲ್ಲಿ ಧ್ಯಾನಗಳನ್ನು ಮಾಡಬಹುದು. ಅದು ಹೇಗೆಂಬುದು ಇಲ್ಲಿದೆ ನೋಡಿ.

1 / 7
ಇತ್ತೀಚಿನ ದಿನಗಳಲ್ಲಿ ಜನರ ಜೀವನಶೈಲಿ ತುಂಬಾ ಬದಲಾಗದೆ. ಆರೋಗ್ಯದ ಬಗ್ಗೆ ಕಾಳಜಿ ವಹಿಸಲು ಜನರಿಗೆ ಸಮಯವಿಲ್ಲ. ಅನೇಕರು ದೈನಂದಿನ ಕೆಲಸ ಮತ್ತು ಇತರ ಅನೇಕ ವಿಷಯಗಳ ಬಗ್ಗೆ ಚಿಂತಿಸುತ್ತಲೇ ಇರುತ್ತಾರೆ. ಆತಂಕವನ್ನು ಕಡಿಮೆ ಮಾಡಲು ಧ್ಯಾನವನ್ನು ಸೂಚಿಸಲಾಗುತ್ತದೆ. ಧ್ಯಾನ ಮಾಡುವುದರಿಂದ ಒತ್ತಡವನ್ನು ಕಡಿಮೆ ಮಾಡಿಕೊಳ್ಳಬಹುದು ಎಂಬುದು ನಿಜ. ಆದರೆ ಸರಳವಾಗಿ ಧ್ಯಾನ ಮಾಡುವುದು ಹೇಗೆ?

2 / 7
ಧ್ಯಾನವು ಮಾನಸಿಕ ವ್ಯಾಯಾಮವಾಗಿದ್ದು ಅದು ಗಮನ, ಅರಿವು ಮತ್ತು ವಿಶ್ರಾಂತಿಯನ್ನು ಒಳಗೊಂಡಿರುತ್ತದೆ. ಇದು ಮನಸ್ಸಿಗೆ ವ್ಯಾಯಾಮ. ಇದು ಮನಸ್ಸಿಗೆ ಶಾಂತಿಯನ್ನು ಒದಗಿಸಲು ಸಹಾಯ ಮಾಡುತ್ತದೆ ಮತ್ತು ಒತ್ತಡವನ್ನು ನಿವಾರಿಸುತ್ತದೆ. ಆದರೆ ಧ್ಯಾನವೆಂದರೆ ಒಂದೇ ಸ್ಥಳದಲ್ಲಿ ಕುಳಿತುಕೊಂಡೇ ಮಾಡಬೇಕು ಎಂದೇನೂ ಇಲ್ಲ. ಅದನ್ನು ಮಾಡಲು ಹಲವು ಮಾರ್ಗಗಳಿವೆ. ಧ್ಯಾನವನ್ನು ಫೋಕಸ್ಡ್ ಮೆಡಿಟೇಶನ್, ಆಧ್ಯಾತ್ಮಿಕ ಧ್ಯಾನ, ಗಮನ ಧ್ಯಾನ, ಚಲನೆಯ ಧ್ಯಾನ, ಮಂತ್ರ ಧ್ಯಾನದಂತಹ ವಿಧಾನಗಳಲ್ಲಿಯೂ ಮಾಡಬಹುದು.

3 / 7
ಮೈಂಡ್‌ಫುಲ್‌ನೆಸ್ ಧ್ಯಾನ: ಈ ವಿಧಾನದಲ್ಲಿ ನಮ್ಮ ಸುತ್ತ ನಡೆಯುತ್ತಿರುವ ಘಟನೆಗಳು ಅಥವಾ ಸನ್ನಿವೇಶಗಳ ಮೇಲೆ ಗಮನವನ್ನು ಕೇಂದ್ರೀಕರಿಸಬೇಕು. ಇದು ಧ್ಯಾನದ ಒಂದು ರೂಪ. ಒಂದು ಸಮಯದಲ್ಲಿ ಒಂದು ವಿಷಯದ ಮೇಲೆ ಮಾತ್ರ ಗಮನ ಕೇಂದ್ರೀಕರಿಸಲು ಪ್ರಯತ್ನಿಸುವ ಬದಲು, ನಾವು ವರ್ತಮಾನದ ಮೇಲೆ, ಆಲೋಚನೆಗಳ ಮೇಲೆ, ನಾವಿರುವ ಸ್ಥಳದ ಮೇಲೆ ಸಂಪೂರ್ಣವಾಗಿ ಗಮನ ಕೇಂದ್ರೀಕರಿಸಬೇಕು. ಆ ಕ್ಷಣವನ್ನು ಮತ್ತು ಕ್ರಿಯೆಯನ್ನು ಸಂಪೂರ್ಣವಾಗಿ ಅನುಭವಿಸಬೇಕು.

4 / 7
ಆಧ್ಯಾತ್ಮಿಕ ಧ್ಯಾನ: ಇದು ಪ್ರಾರ್ಥನೆಗೆ ಬಹಳ ಸನಿಹದ್ದಾಗಿದೆ. ಇದರಲ್ಲಿ ಧ್ಯಾನ ಮಾಡಲು ಶಾಂತವಾಗಿ ಕುಳಿತು ಉಸಿರಾಟದ ಮೇಲೆ ಗಮನ ಕೇಂದ್ರೀಕರಿಸಲು ಯತ್ನಿಸಬೇಕು. ಈ ಹಂತದಲ್ಲಿ ಗಮನ ಉಸಿರಾಟದ ಮೇಲೆಯೇ ಇರಬೇಕು.

5 / 7
ಫೋಕಸ್ಡ್ ಮೆಡಿಟೇಶನ್: ಫೋಕಸ್ಡ್ ಮೆಡಿಟೇಶನ್ ಅನ್ನು ಫೋಕಸ್ಡ್ ಅಟೆನ್ಶನ್ ಮೆಡಿಟೇಶನ್ ಎಂದೂ ಕರೆಯುತ್ತಾರೆ. ಇದು ಒಂದು ರೀತಿಯ ಸಾವಧಾನದ ಧ್ಯಾನ ವಿಧಾನವಾಗಿದೆ. ಈ ವಿಧಾನದಲ್ಲಿ ಮನಸ್ಸನ್ನು ಖಾಲಿ ಮಾಡಲು ಪ್ರಯತ್ನಿಸುವ ಬದಲು, ಗಮನವನ್ನು ನಿರ್ದಿಷ್ಟ ವಸ್ತು ಅಥವಾ ನಿಮ್ಮ ಉಸಿರಾಟದ ಮೇಲೆ ಕೇಂದ್ರೀಕರಿಸಲಾಗುತ್ತದೆ.

6 / 7
ಚಲನೆಯ ಧ್ಯಾನ: ಕುಳಿತುಕೊಂಡು ಧ್ಯಾನ ಮಾಡಲು ಕಷ್ಟವಾಗಿದ್ದರೆ, ಈ ಧ್ಯಾನ ವಿಧಾನವನ್ನು ಪ್ರಯತ್ನಿಸಬಹುದು. ಇದಕ್ಕಾಗಿ ನೀವು ಯಾವುದೇ ಕೆಲಸವನ್ನು ಮಾಡಬಹುದು. ನೀವು ವಾಕಿಂಗ್ ಕೂಡ ಮಾಡಬಹುದು. ಆದರೆ ಇದರಲ್ಲಿ ಗಮನಿಸಬೇಕಾದ ಅಂಶವೆಂದರೆ, ನಿಮ್ಮ ಸಂಪೂರ್ಣ ಗಮನವನ್ನು ಆ ಕಾರ್ಯದ ಮೇಲೆ ಕೇಂದ್ರೀಕರಿಸಬೇಕು. ಹಾಗೆ ಮಾಡುವುದರಿಂದ ನಿಮ್ಮ ಮನಸ್ಸು ಮತ್ತು ಹೃದಯ ಶಾಂತವಾಗುತ್ತದೆ ಮತ್ತು ನಿಮ್ಮ ಮನಸ್ಥಿತಿ ಸುಧಾರಿಸುತ್ತದೆ.

7 / 7
ಮಂತ್ರ ಧ್ಯಾನ: ಮಂತ್ರ ಧ್ಯಾನವು ಮನಸ್ಸನ್ನು ಶಾಂತಗೊಳಿಸಲು ಮತ್ತು ಕೇಂದ್ರೀಕರಿಸಲು ಸಹಾಯ ಮಾಡಲು ಮಂತ್ರಗಳನ್ನು ಬಳಸುವ ತಂತ್ರವಾಗಿದೆ. ಈ  ವಿಧಾನದಲ್ಲಿ ಮಂತ್ರಗಳನ್ನು ಉಚ್ಚರಿಸುತ್ತಾ ಅವುಗಳ ಮೇಲೆಯೇ ಗಮನ ಕೇಂದ್ರೀಕರಿಸಬೇಕು. ಇವಿಷ್ಟು ಧ್ಯಾನ ವಿಧಾನಗಳನ್ನು ನಮಗೆ ಯಾವುದು ಸೂಕ್ತವೋ ಅದನ್ನು ಮಾಡುವ ಮೂಲಕ ಟೆನ್ಷನ್​ಗೆ ಗುಡ್ ಬೈ ಹೇಳಬಹುದು.