ಇದೇ ನಮ್ಮ ಪುಟಾಣಿ ಪ್ರಪಂಚ; ಗೌತಮಿ ಜಾಧವ್ ಕುಟಂಬದಲ್ಲಿ ಸದಾ ನಗು, ಪಾಸಿಟಿವಿಟಿ
ನಟಿ ಗೌತಮಿ ಜಾಧವ್ ಕುಟುಂಬದ ಫೋಟೋಗಳನ್ನು ಆಗಾಗ ಹಂಚಿಕೊಳ್ಳುತ್ತಾ ಇರುತ್ತಾರೆ. ಅವರ ಕಟುಂಬ ಚಿಕ್ಕದು. ಆದರೆ, ಅಲ್ಲಿ ನಗು ಹಾಗೂ ಪಾಸಿಟಿವಿಟಿಗೆ ಯಾವುದೇ ಕೊರತೆ ಇಲ್ಲ. ಈ ಸಂದರ್ಭದ ವಿಡಿಯೋ ವೈರಲ್ ಆಗಿ ಗಮನ ಸೆಳೆದಿದೆ. ಆ ಬಗ್ಗೆ ಇಲ್ಲಿದೆ ವಿವರ.
ಗೌತಮಿ ಜಾಧವ್ ಅವರು ಸದಾ ನಗು ಮೊಗದಲ್ಲಿ ಇರುತ್ತಾರೆ. ಪಾಸಿಟಿವಿಟಿ ಹಂಚಲು ಅವರು ಯಾವಾಗಲೂ ಬಯಸುತ್ತಾರೆ. ಸೋಶಿಯಲ್ ಮೀಡಿಯಾದಲ್ಲಿ ಆ್ಯಕ್ಟೀವ್ ಆಗಿರೋ ಅವರು ಆಗಾಗ ತಮ್ಮ ನೆಚ್ಚಿನ ಶ್ವಾನಗಳ ಜೊತೆ ಇರೋ ಫೋಟೋಗಳನ್ನು ಹಂಚಿಕೊಳ್ಳುತ್ತಾರೆ.
1 / 5
ಗೌತಮಿ ಜಾಧವ್ ಅವರು ಮೂರು ಗೋಲ್ಡನ್ ರಿಟ್ರೈವರ್ ಶ್ವಾನಗಳನ್ನು ಸಾಕಿದ್ದಾರೆ. ಈ ಶ್ವಾನಕ್ಕೆ ಅವರು ಹ್ಯಾಪಿ, ಕಾಫಿ ಹಾಗೂ ಕ್ವೀನ್ ಎಂದು ಹೆಸರು ಇಟ್ಟಿದ್ದಾರೆ. ಇವುಗಳ ಜೊತೆ ಗೌತಮಿ ಹಾಗೂ ಅವರ ಪತಿ ಅಭಿಷೇಕ್ ಫೋಟೋಶೂಟ್ ಮಾಡಿಸಿದ್ದಾರೆ.
2 / 5
ಗೌತಮಿ ಅವರ ಪತಿ ಅಭಿಷೇಕ್ ಕಾಸರಗೋಡು ಅವರು ಕೂಡ ಪತ್ನಿಯಂತೆ ಶ್ವಾನವನ್ನು ಇಷ್ಟಪಡುತ್ತಾರೆ. ಅವುಗಳನ್ನು ಸಾಕೋದು ಎಂದರೆ ಅವರಿಗೆ ಎಲ್ಲಿಲ್ಲದ ಪ್ರಿತಿ. ಈ ಮೂವರನ್ನು ತುಂಬಾನೇ ಕಾಳಜಿಯಿಂದ ದಂಪತಿ ನೋಡಿಕೊಳ್ಳುತ್ತಿದ್ದಾರೆ.
3 / 5
ಗೌತಮಿ ಅವರ ಕುಟುಂಬದಲ್ಲಿ ನಗು ಹೆಚ್ಚುತ್ತಿದೆ ಎಂದರೆ ಅದಕ್ಕೆ ಕಾರಣ ಹ್ಯಾಪಿ, ಕಾಫಿ ಮತ್ತು ಕ್ವೀನ್ ಕಾರಣ. ಅವುಗಳ ಜೊತೆ ಆಗಾ ಫೋಟೋ ಕ್ಲಿಕ್ಕಿಸಿಕೊಂಡು ನಟಿ ಹಂಚಿಕೊಳ್ಳುತ್ತಾ ಇರುತ್ತಾರೆ. ಇದಕ್ಕೆ ಫ್ಯಾನ್ಸ್ ಕಡೆಯಿಂದ ಭರ್ಜರಿ ಲೈಕ್ಸ್ ಸಿಗುತ್ತದೆ.
4 / 5
ಗೌತಮಿ ಜಾಧವ್ ಅವರಿಗೆ ದೊಡ್ಡ ಮಟ್ಟದಲ್ಲಿ ಜನಪ್ರಿಯತೆ ಸಿಕ್ಕಿದೆ. ಈ ಮೊದಲು‘ಬಿಗ್ ಬಾಸ್ ಕನ್ನಡ ಸೀಸನ್ 11’ರಲ್ಲಿ ಅವರು ಸ್ಪರ್ಧಿಸಿದ್ದರು. ಆ ಬಳಿಕ ಅವರು ಕಲರ್ಸ್ನ ಧಾರಾವಾಹಿ ಒಂದರಲ್ಲಿ ಅತಿಥಿ ಪಾತ್ರ ಮಾಡಿದರು. ಅವರು ಪೂರ್ಣ ಪ್ರಮಾಣದ ಪಾತ್ರ ಮಾಡಬೇಕು ಎಂಬುದು ಫ್ಯಾನ್ಸ್ ಕೋರಿಕೆ.