ಕೇವಲ 6 ದಿನಗಳಲ್ಲಿ ಎರಡನೇ ಚಿನ್ನದ ಪದಕ ಗೆದ್ದ ಪಾಕಿಸ್ತಾನದ ಜಾವೆಲಿನ್ ಎಸೆತಗಾರ ಅರ್ಷದ್ ನದೀಮ್..!

Arshad Nadeem: ಇನ್ನೊಂದು ಆಶ್ಚರ್ಯಕಾರಿ ಸಂಗತಿಯೆಂದರೆ, ಈ ಎರಡು ಕ್ರೀಡಾಕೂಟಗಳಲ್ಲು ಚಿನ್ನ ಗೆದ್ದಿರುವ ನದೀಮ್​ಗೆ ವೈಯಕ್ತಿಕ ತರಬೇತುದಾರರಿಲ್ಲ.

Aug 13, 2022 | 4:48 PM
TV9kannada Web Team

| Edited By: pruthvi Shankar

Aug 13, 2022 | 4:48 PM

ಕಾಮನ್‌ವೆಲ್ತ್‌ ಗೇಮ್ಸ್‌ನಲ್ಲಿ 90 ಮೀಟರ್‌ ಜಾವೆಲಿನ್ ಎಸೆದು ಚಿನ್ನ ಗೆದ್ದಿದ್ದ ಪಾಕಿಸ್ತಾನದ ಜಾವೆಲಿನ್‌ ಎಸೆತಗಾರ ಅರ್ಷದ್ ನದೀಮ್, ಕೇವಲ 6 ದಿನಗಳಲ್ಲಿ ಎರಡನೇ ಚಿನ್ನದ ಪದಕ ಗೆದ್ದಿದ್ದಾರೆ. ಈ ಹಿಂದೆ ನದೀಮ್ 90.18 ಮೀಟರ್‌ ದೂರ ಜಾವೆಲಿನ್ ಎಸೆದು ಕಾಮನ್‌ವೆಲ್ತ್‌ ಗೇಮ್ಸ್​ನಲ್ಲಿ ಚಿನ್ನದ ಪದಕ ಗೆದ್ದಿದ್ದರು.

1 / 5
ಕಾಮನ್‌ವೆಲ್ತ್‌ ಗೇಮ್ಸ್‌ನಲ್ಲಿ ಭಾರತದ ನೀರಜ್ ಚೋಪ್ರಾ ಅಲಭ್ಯತೆಯ ಲಾಭ ಮಡೆದ ನದೀಮ್ ಚಿನ್ನ ಗೆಲ್ಲುವಲ್ಲಿ ಯಶಸ್ವಿಯಾಗಿದ್ದರು. ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ನದೀಮ್ 90 ಮೀಟರ್ ದೂರ ಜಾವೆಲಿನ್ ಎಸೆಯುವ ಮೂಲಕ ಈ ದಾಖಲೆ ಮಾಡಿದ ದಕ್ಷಿಣ ಏಷ್ಯಾದ ಮೊದಲ ಆಟಗಾರ ಎನಿಸಿಕೊಂಡಿದ್ದರು. ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿನ ಲಯವನ್ನು ಮುಂದುವರೆಸಿರುವ ನದೀಮ್ ಇಸ್ಲಾಮಿಕ್ ಸಾಲಿಡಾರಿಟಿ ಗೇಮ್ಸ್‌ನಲ್ಲಿ 88.55 ಮೀಟರ್‌ ದೂರ ಜಾವೆಲಿನ್ ಎಸೆದು ಚಿನ್ನದ ಪದಕ ಗೆದ್ದಿದ್ದಾರೆ.

2 / 5
ಕೇವಲ 6 ದಿನಗಳಲ್ಲಿ ಎರಡನೇ ಚಿನ್ನದ ಪದಕ ಗೆದ್ದ ಪಾಕಿಸ್ತಾನದ ಜಾವೆಲಿನ್ ಎಸೆತಗಾರ ಅರ್ಷದ್ ನದೀಮ್..!

ನದೀಮ್ ವಾಸ್ತವವಾಗಿ, ಕೆಲವು ದಿನಗಳಿಂದ ಮೊಣಕಾಲು ಮತ್ತು ಮೊಣಕೈ ಗಾಯಗಳಿಂದ ನರಳುತ್ತಿದ್ದು, ನೋವಿನಲ್ಲೂ ಈ ದಾಖಲೆಯ ಪ್ರದರ್ಶನ ನೀಡಿದ್ದಾರೆ. ಈ ಕ್ರೀಡಾಕೂಟದಲ್ಲಿ ತಮ್ಮ ಪ್ರದರ್ಶನವನ್ನು ಹೆಚ್ಚು ಸುಧಾರಿಸಿರುವ ನದೀಮ್, 2017 ರಲ್ಲಿ 76.66 ಮೀಟರ್‌ ದೂರ ಜಾವೆಲಿನ್ ಎಸೆದಿದ್ದರು. ಆದರೆ ಈ ಬಾರಿ 88.55 ಮೀಟರ್‌ ದೂರ ಜಾವೆಲಿನ್ ಎಸೆದು ಚಿನ್ನದ ಪದಕ ಗೆದ್ದಿದ್ದಾರೆ.

3 / 5
ಕೇವಲ 6 ದಿನಗಳಲ್ಲಿ ಎರಡನೇ ಚಿನ್ನದ ಪದಕ ಗೆದ್ದ ಪಾಕಿಸ್ತಾನದ ಜಾವೆಲಿನ್ ಎಸೆತಗಾರ ಅರ್ಷದ್ ನದೀಮ್..!

ಇನ್ನೊಂದು ಆಶ್ಚರ್ಯಕಾರಿ ಸಂಗತಿಯೆಂದರೆ, ಈ ಎರಡು ಕ್ರೀಡಾಕೂಟಗಳಲ್ಲು ಚಿನ್ನ ಗೆದ್ದಿರುವ ನದೀಮ್​ಗೆ ವೈಯಕ್ತಿಕ ತರಬೇತುದಾರರಿಲ್ಲ. ಕೋಚ್ ಇಲ್ಲದೆಯೇ ನದೀಮ್, ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌, ಕಾಮನ್‌ವೆಲ್ತ್ ಗೇಮ್ಸ್ ಮತ್ತು ಈಗ ಇಸ್ಲಾಮಿಕ್ ಗೇಮ್ಸ್‌ನಲ್ಲಿ ಭಾಗವಹಿಸಿದ್ದಾರೆ.

4 / 5
ಕೇವಲ 6 ದಿನಗಳಲ್ಲಿ ಎರಡನೇ ಚಿನ್ನದ ಪದಕ ಗೆದ್ದ ಪಾಕಿಸ್ತಾನದ ಜಾವೆಲಿನ್ ಎಸೆತಗಾರ ಅರ್ಷದ್ ನದೀಮ್..!

ಆದರೆ ಕಾಮನ್​ವೆಲ್ತ್ ಗೇಮ್ಸ್ ಆರಂಭಕ್ಕೂ ಮುನ್ನ ಪಾಕಿಸ್ತಾನದ ಆಟಗಾರ ದಕ್ಷಿಣ ಆಫ್ರಿಕಾದಲ್ಲಿ ಲೀಬೆನ್‌ಬರ್ಗ್ ಅವರ ಮಾರ್ಗದರ್ಶನದಲ್ಲಿ ಎರಡು ತಿಂಗಳ ಕಾಲ ತರಬೇತಿ ಪಡೆದಿದ್ದರು.

5 / 5

Follow us on

Most Read Stories

Click on your DTH Provider to Add TV9 Kannada