ಹಲವು ರೀತಿಯಲ್ಲಿ ಅರುಣ್ ಸಾಗರ್ ಅವರು ಗುರುತಿಸಿಕೊಂಡಿದ್ದಾರೆ. ನಟನಾಗಿ, ನಿರೂಪಕನಾಗಿ ಅವರು ಜನಮೆಚ್ಚುಗೆ ಗಳಿಸಿದ್ದಾರೆ. ಅವರು ತುಂಬ ಚೆನ್ನಾಗಿ ಮಿಮಿಕ್ರಿ ಕೂಡ ಮಾಡುತ್ತಾರೆ. ಬಿಗ್ ಬಾಸ್ನಲ್ಲಿ ಅದಕ್ಕೆ ವೇದಿಕೆ ಸಿಕ್ಕಿದೆ.
‘ಬಿಗ್ ಬಾಸ್ ಬಾಸ್ ಕನ್ನಡ ಸೀಸನ್ 9’ರಲ್ಲಿ ಅರುಣ್ ಸಾಗರ್ ಸ್ಪರ್ಧಿಸುತ್ತಿದ್ದಾರೆ. ಎಲ್ಲರನ್ನೂ ಮನರಂಜಿಸುತ್ತಾ ಅವರು ಗಮನ ಸೆಳೆಯುತ್ತಿದ್ದಾರೆ. ಈಗ ಅವರು ಡಾ. ರಾಜ್ಕುಮಾರ್ ರೀತಿ ಮಿಮಿಕ್ರಿ ಮಾಡಿರುವುದು ವಿಶೇಷ.
‘ಒಂದು ವೇಳೆ ಡಾ. ರಾಜ್ಕುಮಾರ್ ಅವರು ಎಲ್ಲ ಸ್ಪರ್ಧಿಗಳಿಗೆ ಸಲಹೆ ಕೊಟ್ಟರೆ ಹೇಗಿರುತ್ತದೆ ಎಂಬುದನ್ನು ಮಾಡಿ ತೋರಿಸಿ’ ಎಂದು ಅರುಣ್ ಸಾಗರ್ಗೆ ಕಿಚ್ಚ ಸುದೀಪ್ ಹೇಳಿದರು. ಆಗ ಪ್ರಶಾಂತ್ ಸಂಬರ್ಗಿಯನ್ನು ವಜ್ರಮುನಿಗೆ ಹೋಲಿಸಿದರು ಅರುಣ್ ಸಾಗರ್.
‘ಪ್ರಶಾಂತ್ ಸಂಬರ್ಗಿಯವರನ್ನು ನೋಡಿದರೆ ನನಗೆ ಯಾಕೋ ವಜ್ರಮುನಿ ನೆನಪಾಗ್ತಾರೆ. ಅವರ ಮಾಡೋ ಪಾತ್ರಗಳೆಲ್ಲ ನೆನಪಾಗುತ್ತವೆ. ಪಗಡೆ ಆಟದಲ್ಲಿ ಶಕುನಿ ರೀತಿ ನೀವು ಆಡ್ತೀರಿ. ಆ ರೀತಿ ಇಲ್ಲಿ ಮಾತ್ರ ಆಡಿ. ಜೀವನದಲ್ಲಿ ಆಡಬೇಡಿ’ ಎಂದು ಕಾಲೆಳೆದಿದ್ದಾರೆ ಅರುಣ್ ಸಾಗರ್.
ಡಾ. ರಾಜ್ಕುಮಾರ್ ರೀತಿ ಅರುಣ್ ಸಾಗರ್ ಮಿಮಿಕ್ರಿ ಮಾಡಿದ್ದು ನೋಡಿ ಎಲ್ಲರೂ ಎಂಜಾಯ್ ಮಾಡಿದ್ದಾರೆ. ಸುದೀಪ್ ಕೂಡ ಬಿದ್ದು ಬಿದ್ದು ನಕ್ಕಿದ್ದಾರೆ. ಈ ಸಂಚಿಕೆ ಅ.2ರ ರಾತ್ರಿ 9.30ಕ್ಕೆ ಕಲರ್ಸ್ ಕನ್ನಡದಲ್ಲಿ ಪ್ರಸಾರ ಆಗಲಿದೆ.
Published On - 3:33 pm, Sun, 2 October 22