AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Asian Billiards Championship: 8 ನೇ ಬಾರಿಗೆ ಏಷ್ಯನ್ ಬಿಲಿಯರ್ಡ್ಸ್ ಚಾಂಪಿಯನ್ ಪ್ರಶಸ್ತಿ ಗೆದ್ದ ಪಂಕಜ್ ಅಡ್ವಾಣಿ!

Pankaj Advani: ಬಹು ಬಾರಿಯ ವಿಶ್ವ ಚಾಂಪಿಯನ್ ಪಂಕಜ್ ಅಡ್ವಾಣಿ ಅವರಿಗೆ ಇದು 24 ನೇ ಅಂತಾರಾಷ್ಟ್ರೀಯ ಮತ್ತು ಎಂಟನೇ ಏಷ್ಯನ್ ಪ್ರಶಸ್ತಿಯಾಗಿದೆ. ಅವರು ಫೈನಲ್‌ನಲ್ಲಿ 6 ಫ್ರೇಮ್‌ಗಳಿಂದ ತನ್ನ ಎದುರಾಳಿಯನ್ನು ಮಣಿಸಿ ಪ್ರಶಸ್ತಿ ಗೆದ್ದರು.

ಪೃಥ್ವಿಶಂಕರ
|

Updated on:Mar 19, 2022 | 10:32 PM

Share
ಭಾರತದ ಅಗ್ರಮಾನ್ಯ ಆಟಗಾರ ಪಂಕಜ್ ಅಡ್ವಾಣಿ ಮತ್ತೊಮ್ಮೆ ಏಷ್ಯನ್ ಬಿಲಿಯರ್ಡ್ಸ್ ಚಾಂಪಿಯನ್ ಆಗಿದ್ದಾರೆ. ದೋಹಾದಲ್ಲಿ ನಡೆಯುತ್ತಿರುವ 19 ನೇ ಏಷ್ಯನ್ 100 UP ಬಿಲಿಯರ್ಡ್ಸ್ ಚಾಂಪಿಯನ್‌ಶಿಪ್ 2022 ರ ಫೈನಲ್‌ನಲ್ಲಿ ಭಾರತದ ಧ್ರುವ್ ಸಿತ್ವಾಲಾ ಅವರನ್ನು 6 ಫ್ರೇಮ್‌ಗಳಿಂದ ಸೋಲಿಸುವ ಮೂಲಕ ಭಾರತದ ಸ್ಟಾರ್ ಅಡ್ವಾಣಿ 8 ನೇ ಬಾರಿ ಪ್ರಶಸ್ತಿಯನ್ನು ಗೆದ್ದರು.

1 / 4
ಎರಡು ಬಾರಿಯ ಏಷ್ಯನ್ ಬಿಲಿಯರ್ಡ್ಸ್ ಚಾಂಪಿಯನ್ ಸಿತ್ವಾಲಾ ವಿರುದ್ಧ, ಅಡ್ವಾಣಿ ಮೊದಲ ಫ್ರೇಮ್ ಅನ್ನು ಸುಲಭವಾಗಿ ಗೆದ್ದ ನಂತರ ಎರಡನೇಯ ಸೆಂಚುರಿ ವಿರಾಮದಲ್ಲಿ 2-0 ಮುನ್ನಡೆ ಸಾಧಿಸಿದರು. ಮೂರನೇಯದರಲ್ಲೂ ಅಡ್ವಾಣಿ ಪ್ರಾಬಲ್ಯ ಮುಂದುವರಿಸಿದರು.

2 / 4
Asian Billiards Championship: 8 ನೇ ಬಾರಿಗೆ ಏಷ್ಯನ್ ಬಿಲಿಯರ್ಡ್ಸ್ ಚಾಂಪಿಯನ್ ಪ್ರಶಸ್ತಿ ಗೆದ್ದ ಪಂಕಜ್ ಅಡ್ವಾಣಿ!

ಐದನೇ ಫ್ರೇಮ್ ಗೆಲ್ಲುವ ಮೂಲಕ, ಅಡ್ವಾಣಿ 4-1 ಮುನ್ನಡೆ ಸಾಧಿಸಿದರು. ನಂತರ ಆರನೇ ಫ್ರೇಮ್​ನಲ್ಲೂ ಗೆಲುವು ಅಡ್ವಾಣಿ ಪರ ವಾಲಿತು . ಏಳನೇ ಫ್ರೇಮ್ ಸಿತ್ವಾಲಾ ಗೆದ್ದರಾದರೂ ಅಡ್ವಾಣಿ ತಮ್ಮ ಎದುರಾಳಿಯನ್ನು 6-2 ರಿಂದ ಸುಲಭವಾಗಿ ಸೋಲಿಸಿದರು. ಇದು ಅಡ್ವಾಣಿ ಅವರ 24ನೇ ಅಂತಾರಾಷ್ಟ್ರೀಯ ಹಾಗೂ ಎಂಟನೇ ಏಷ್ಯನ್ ಪ್ರಶಸ್ತಿಯಾಗಿದೆ.

3 / 4
Asian Billiards Championship: 8 ನೇ ಬಾರಿಗೆ ಏಷ್ಯನ್ ಬಿಲಿಯರ್ಡ್ಸ್ ಚಾಂಪಿಯನ್ ಪ್ರಶಸ್ತಿ ಗೆದ್ದ ಪಂಕಜ್ ಅಡ್ವಾಣಿ!

ಇದಕ್ಕೂ ಮೊದಲು, ಮ್ಯಾನ್ಮಾರ್‌ನ ಪೋಕ್ ಸಾ ಅವರ ಕಠಿಣ ಸವಾಲನ್ನು ಮೀರಿ ಅಡ್ವಾಣಿ 5-4 ಗೆಲುವಿನೊಂದಿಗೆ ಫೈನಲ್‌ಗೆ ಪ್ರವೇಶಿಸಿದ್ದರು. ಸೆಮಿಫೈನಲ್ ಪಂದ್ಯದಲ್ಲಿ ಬಹು ಬಾರಿ ವಿಶ್ವ ಚಾಂಪಿಯನ್ ಅಡ್ವಾಣಿ 4-2 ರಿಂದ ಮುನ್ನಡೆ ಸಾಧಿಸಿದರು. ಆದಾಗ್ಯೂ, ಪೋಕ್ ಸಾ ಮುಂದಿನ ಎರಡು ಫ್ರೇಮ್‌ಗಳನ್ನು ಗೆಲ್ಲುವ ಮೂಲಕ ಸಮಬಲ ಸಾಧಿಸಿದರು. ನಂತರ ಅಡ್ವಾಣಿ ಅವರು ಪೋಕ್ ಸಾರನ್ನು 5-4 ರಿಂದ ಸೋಲಿಸುವ ಮೂಲಕ ತಮ್ಮ ಅಬ್ಬರದ ಪ್ರದರ್ಶನವನ್ನು ಮುಂದುವರೆಸಿದರು.

4 / 4

Published On - 10:11 pm, Sat, 19 March 22