ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಅಂದರೆ ಮಂಗಳವಾರ ಅಸ್ಸಾಂನ ಗುವಾಹಟಿಯಲ್ಲಿ ರೋಡ್ ಶೋ ನಡೆಸಿದರು. ಈ ವೇಳೆ ರಸ್ತೆಬದಿಯಲ್ಲಿ ಪ್ರಧಾನಿಯವರನ್ನು ನೋಡಲು ಹೆಚ್ಚಿನ ಸಂಖ್ಯೆಯಲ್ಲಿ ಜನರು ಸೇರಿದ್ದರು. ಈ ವೇಳೆ ತಮ್ಮ ನೆಚ್ಚಿನ ನಾಯಕನ ಮೇಲೆ ಹೂವು ಸುರಿದರಲ್ಲದೆ, ಮೋದಿ.. ಮೋದಿ.. ಭಾರತ್ ಮಾತಾ ಕೀ ಜೈ ಎಂಬಿತ್ಯಾದಿ ಜಯ ಘೋಷಗಳನ್ನು ಕೂಗಿದರು.
ಪ್ರಧಾನಿ ಮೋದಿ ಮಾರ್ಚ್ 7 ರಿಂದ ಎರಡು ದಿನಗಳ ಈಶಾನ್ಯ ಪ್ರವಾಸದಲ್ಲಿದ್ದಾರೆ. ಮೇಘಾಲಯ ಮತ್ತು ನಾಗಾಲ್ಯಾಂಡ್‌ನಲ್ಲಿ ಮಂಗಳವಾರ ನಡೆದ ನೂತನ ಮುಖ್ಯಮಂತ್ರಿಗಳ ಪ್ರಮಾಣ ವಚನ ಸಮಾರಂಭದಲ್ಲಿ ಪ್ರಧಾನಿ ಮೋದಿ ಭಾಗವಹಿಸಿದ್ದರು. ಇದಾದ ನಂತರ ಅವರು ಅಸ್ಸಾಂಗೆ ತಲುಪಿದರು.
ಅದರಂತೆ ಅಸ್ಸಾಂನ ಹುವಾಹಟಿಯಲ್ಲಿ ರೋಡ್ ಶೋ ನಡೆಸಿದರು. ರಾತ್ರಿ ನಡೆಯುವ ರಾಜ್ಯ ಸರ್ಕಾರದ ಸಂಪುಟ ಸಭೆಯಲ್ಲಿ ಪ್ರಧಾನಿ ಪಾಲ್ಗೊಳ್ಳಲಿದ್ದಾರೆ ಎಂದು ಅಸ್ಸಾಂ ಆರೋಗ್ಯ ಸಚಿವ ಕೇಶವ್ ಮಹಂತ ತಿಳಿಸಿದ್ದಾರೆ. ಈ ವೇಳೆ ಎಲ್ಲ ಇಲಾಖೆಗಳ ಕಾರ್ಯವೈಖರಿಯನ್ನು ಪರಿಶೀಲಿಸುವ ಸಾಧ್ಯತೆ ಇದೆ.
ಬುಧವಾರ ಬೆಳಗ್ಗೆ 9:40ಕ್ಕೆ ಮೋದಿ ತ್ರಿಪುರಾಕ್ಕೆ ತೆರಳಲಿದ್ದಾರೆ. ಅಲ್ಲಿ ಅವರು ಮಾಣಿಕ್ ಸಹಾ ಸರ್ಕಾರದ ಪ್ರಮಾಣ ವಚನ ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ. ಸಹಾ ಅವರನ್ನು ತ್ರಿಪುರಾದಲ್ಲಿ ಬಿಜೆಪಿ ಶಾಸಕಾಂಗ ಪಕ್ಷದ ನಾಯಕ ಎಂದು ಘೋಷಿಸಲಾಗಿದೆ.
ನಾಗಾಲ್ಯಾಂಡ್‌ನಲ್ಲಿ ನೆಫಿಯು ರಿಯೊ ಮತ್ತು ಮೇಘಾಲಯದಲ್ಲಿ ಕಾನ್ರಾಡ್ ಸಂಗ್ಮಾ ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ನೇಫಿಯು ರಿಯೊ ಅವರು ಮಧ್ಯಾಹ್ನ 1.45 ಕ್ಕೆ ಐದನೇ ಬಾರಿಗೆ ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸಿದರೆ, ಸಂಗ್ಮಾ ಕಾನ್ರಾಡ್ ಅವರ ಪ್ರಮಾಣ ವಚನ ಸಮಾರಂಭ ಬೆಳಿಗ್ಗೆ 11 ಗಂಟೆಗೆ ನಡೆಯಿತು. ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ, ಬಿಜೆಪಿ ಅಧ್ಯಕ್ಷ ಜೆಪಿ ನಡ್ಡಾ ಮತ್ತು ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಇದ್ದರು.
ರಾಜ್ಯಗಳಲ್ಲಿ ಇಬ್ಬರು ಉಪಮುಖ್ಯಮಂತ್ರಿಗಳು ನೇಮಕಗೊಂಡಿದ್ದಾರೆ. ಮೇಘಾಲಯದಲ್ಲಿ ಎನ್‌ಪಿಪಿಯ ಸ್ನಿಯಾವ್‌ಭಾಲಾಂಗ್ ಧಾರ್ ಮತ್ತು ಪ್ರಿಸ್ಟೋನ್ ಟೆನ್ಸಾಂಗ್ ಉಪ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ನಾಗಾಲ್ಯಾಂಡ್‌ನಲ್ಲಿ ಟಿಆರ್ ಝೆಲಿಯಾಂಗ್ ಮತ್ತು ಯಾಂತುಂಗೋ ಪ್ಯಾಟನ್ ಅವರನ್ನು ಉಪ ಮುಖ್ಯಮಂತ್ರಿಯನ್ನಾಗಿ ಮಾಡಲಾಗಿದೆ.
Published On - 7:56 pm, Tue, 7 March 23