
ಭಾರತ ಕ್ರಿಕೆಟ್ ತಂಡದ ಸ್ಟಾರ್ ಆಟಗಾರ ಕೆ.ಎಲ್ ರಾಹುಲ್ ತಮ್ಮ ಗೆಳತಿ ಆಥಿಯಾ ಶೆಟ್ಟಿಯೊಂದಿಗೆ ಕಾಣಿಸಿಕೊಂಡಿದ್ದಾರೆ.

ಬೆಂಗಳೂರಿನಲ್ಲಿ ಖಾಸಗಿ ಕಂಪನಿಯೊಂದರ ಪ್ರಚಾರ ಕಾರ್ಯದ ನಿಮಿತ್ತ ಈರ್ವರೂ ಆಗಮಿಸಿದ್ದರು.

ಈ ವೇಳೆ ರಾಹುಲ್- ಆಥಿಯಾ ಫೋಟೋಗಳಿಗೆ ಭರ್ಜರಿ ಪೋಸ್ ನೀಡಿದ್ದಾರೆ. ರಾಹುಲ್ ಈ ಫೋಟೋಗಳನ್ನು ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ಈ ಹಿಂದೆಯೂ ರಾಹುಲ್ ಹಾಗೂ ಆಥಿಯಾ ಜತೆಯಾಗಿ ಜಾಹಿರಾತುಗಳಲ್ಲಿ ಕಾಣಿಸಿಕೊಂಡಿದ್ದರು.

ಇತ್ತೀಚೆಗೆ ಪ್ರೇಮಿಗಳ ದಿನದಂದು ರಾಹುಲ್ ಆಥಿಯಾ ಜತೆಗಿರುವ ಫೋಟೋ ಹಂಚಿಕೊಂಡು ಶುಭಾಶಯ ಕೋರಿದ್ದರು.

ರಾಹುಲ್ ಹಾಗೂ ಆಥಿಯಾ ಜೋಡಿಯೆಂದರೆ ಅಭಿಮಾನಿಗಳಿಗೆ ಅಚ್ಚುಮೆಚ್ಚು. ಈರ್ವರೂ ಮಜವಾದ ಫೋಟೋಗಳನ್ನು ಹಂಚಿಕೊಳ್ಳುತ್ತಾ, ಸಾಮಾಜಿಕ ಜಾಲತಾಣಗಳಲ್ಲಿ ಸುದ್ದಿಯಲ್ಲಿರುತ್ತಾರೆ.

ಕೆ.ಎಲ್ ರಾಹುಲ್- ಆಥಿಯಾ ಶೆಟ್ಟಿ