- Kannada News Photo gallery Avoid thsese Six things Heart Health Heart Care These habits are harmful to your Heart
Heart Health: ನಿತ್ಯ ಜೀವನದ ಈ 5 ಚಟುವಟಿಕೆಗಳು ನಿಮ್ಮ ಹೃದಯದ ಆರೋಗ್ಯಕ್ಕೆ ಅಪಾಯಕಾರಿ; ಕಾಳಜಿ ವಹಿಸಿ
ರಕ್ತಪರಿಚಲನಾ ವ್ಯವಸ್ಥೆಯ ಮೂಲಕ ದೇಹದ ವಿವಿಧ ಭಾಗಗಳಿಗೆ ರಕ್ತ ಮತ್ತು ಆಮ್ಲಜನಕವನ್ನು ಪಂಪ್ ಮಾಡಲು ನಮ್ಮ ಹೃದಯವು ಒಂದು ಸೂಕ್ಷ್ಮವಾದ ಅಂಗವಾಗಿದೆ. ಅದನ್ನು ಆರೋಗ್ಯಕರವಾಗಿ ಇಟ್ಟುಕೊಳ್ಳುವುದು ದೀರ್ಘ ಮತ್ತು ರೋಗ ಮುಕ್ತ ಜೀವನವನ್ನು ಜೀವಿಸಲು ಅತ್ಯಗತ್ಯ.
Updated on: Apr 03, 2022 | 11:11 AM

ರಕ್ತಪರಿಚಲನಾ ವ್ಯವಸ್ಥೆಯ ಮೂಲಕ ದೇಹದ ವಿವಿಧ ಭಾಗಗಳಿಗೆ ರಕ್ತ ಮತ್ತು ಆಮ್ಲಜನಕವನ್ನು ಪಂಪ್ ಮಾಡಲು ನಮ್ಮ ಹೃದಯವು ಒಂದು ಸೂಕ್ಷ್ಮವಾದ ಅಂಗವಾಗಿದೆ. ಅದನ್ನು ಆರೋಗ್ಯಕರವಾಗಿ ಇಟ್ಟುಕೊಳ್ಳುವುದು ದೀರ್ಘ ಮತ್ತು ರೋಗ ಮುಕ್ತ ಜೀವನವನ್ನು ಜೀವಿಸಲು ಅತ್ಯಗತ್ಯ. ಅದಕ್ಕಾಗಿ, ಆರೋಗ್ಯಕರ ಆಹಾರ ಮತ್ತು ನಿಯಮಿತ ವ್ಯಾಯಾಮ ಸೇರಿದಂತೆ ಇತರ ಕೆಲವು ಅಂಶಗಳನ್ನು ಅಗತ್ಯವೆಂದು ಪರಿಗಣಿಸಲಾಗಿದೆ. ನಮ್ಮ ಹೃದಯದ ಆರೋಗ್ಯದ ಮೇಲೆ ಋಣಾತ್ಮಕ ಪ್ರಭಾವ ಬೀರುವ ಹಲವಾರು ಇತರ ಚಟುವಟಿಕೆಗಳು ಇವೆ. ಅವುಗಳ ಬಗ್ಗೆ ಗಮನ ಇರಿಸುವುದು ಮುಖ್ಯ. ದೀರ್ಘಾವಧಿಯಲ್ಲಿ ಅವು ನಿಮ್ಮ ಹೃದಯದ ದಕ್ಷತೆಯನ್ನು ಕಡಿಮೆ ಮಾಡುತ್ತವೆ ಎಂದು ಹೇಳಲಾಗುತ್ತದೆ. ಇದರಿಂದಾಗಿ ನೀವು ಹೃದಯದ ಕಾಯಿಲೆಗಳಿಗೆ ಹೆಚ್ಚು ಒಳಗಾಗಬಹುದು. ನಿಮ್ಮ ಹೃದಯದ ಆರೋಗ್ಯಕ್ಕೆ ಹಾನಿ ಮಾಡುವ ಆರು ಚಟುವಟಿಕೆಗಳ ವಿವರ ಇಲ್ಲಿದೆ.

ಒಂದೇ ಕಡೆ ಕುಳಿತು ಮಾಡುವ ಕೆಲಸ: ದಿನವಿಡೀ ಒಂದೇ ಸ್ಥಳದಲ್ಲಿ ಕುಳಿತುಕೊಳ್ಳಲು ನಿಮ್ಮ ಕೆಲಸವು ನಿಮ್ಮನ್ನು ಒತ್ತಾಯಿಸುತ್ತದೆಯೇ ಅಥವಾ ನೀವು ಇಡೀ ದಿನವನ್ನು ಮಂಚದ ಮೇಲೆ ಮಲಗಲು ಬಯಸಿದರೆ, ದಿನವಿಡೀ ಕುಳಿತುಕೊಳ್ಳುವುದು ಹೃದಯ ವೈಫಲ್ಯದ ಅಪಾಯವನ್ನು ದ್ವಿಗುಣಗೊಳಿಸುತ್ತದೆ. ಅಮೇರಿಕನ್ ಹಾರ್ಟ್ ಅಸೋಸಿಯೇಷನ್ (AHA) ಜರ್ನಲ್‌ನಲ್ಲಿ ಪ್ರಕಟವಾದ ಅಧ್ಯಯನದ ಪ್ರಕಾರ, ಸಾಕಷ್ಟು ಚಲಿಸದ ಅಥವಾ ಪ್ರತಿದಿನ ಐದು ಗಂಟೆ ಅಥವಾ ಅದಕ್ಕಿಂತ ಹೆಚ್ಚು ಕಾಲ ಕುಳಿತುಕೊಳ್ಳುವವರಿಗೆ ಹೃದಯ ಸಮಸ್ಯೆಗಳು ಬರುವ ಸಾಧ್ಯತೆ ಹೆಚ್ಚು. ಹೃದಯವನ್ನು ಆರೋಗ್ಯವಾಗಿಡಲು ಪ್ರತಿ ಗಂಟೆಗೆ ಐದು ನಿಮಿಷಗಳ ನಡಿಗೆಯನ್ನು ತೆಗೆದುಕೊಳ್ಳಲು ಸೂಚಿಸಲಾಗುತ್ತದೆ.

ಒಂಟಿತನ: ಹೌದು, ಒಂಟಿತನವು ಮಾನಸಿಕ ಹಾಗೂ ದೈಹಿಕ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು. ಒಂಟಿಯಾಗಿರುವ ಜನರು ಹೃದಯ ಸಂಬಂಧಿ ಕಾಯಿಲೆಗೆ ತುತ್ತಾಗುವ ಸಾಧ್ಯತೆ ಹೆಚ್ಚು. ಕುಟುಂಬ ಮತ್ತು ಸ್ನೇಹಿತರೊಂದಿಗೆ ಸಮಯ ಕಳೆಯುವುದು ಒತ್ತಡದ ಮಟ್ಟವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ ಮತ್ತು ನಿಮ್ಮ ಜೀವನಕ್ಕೆ ಇನ್ನಷ್ಟು ಆಯಸ್ಸು, ವರ್ಷಗಳನ್ನು ಸೇರಿಸುತ್ತದೆ. ಸಾಕುಪ್ರಾಣಿಗಳನ್ನು ದತ್ತು ಪಡೆಯುವುದು ಸಹ ಜೀವನದಲ್ಲಿ ಸಂತೋಷವನ್ನು ತರಲು ಸಹಾಯ ಮಾಡುತ್ತದೆ.

ಇಷ್ಟವಿಲ್ಲದ ಸಂಬಂಧ: ಅಸಂತೋಷದ, ಇಷ್ಟ ಇಲ್ಲದ ಸಂಬಂಧದಲ್ಲಿ ಇರುವುದು ಹೃದಯದ ಸಮಸ್ಯೆಗಳ ಪ್ರಕರಣಗಳಲ್ಲಿ ಸ್ಪೈಕ್‌ಗೆ ಸಂಬಂಧಿಸಿದೆ ಎಂದು ಕಂಡುಬಂದಿದೆ. ಇದು ಒತ್ತಡದ ಮಟ್ಟವನ್ನು ಹೆಚ್ಚಿಸುತ್ತದೆ ಮತ್ತು ಅನಾರೋಗ್ಯಕರ ಆಹಾರ ಪದ್ಧತಿಯಲ್ಲಿ ನಿಮ್ಮನ್ನು ತೊಡಗಿಸಿಕೊಳ್ಳುವಂತೆ ಮಾಡುತ್ತದೆ. ಇದು ಅಂತಿಮವಾಗಿ ಜನರಲ್ಲಿ ಹೃದಯ ಸಮಸ್ಯೆಗಳ ಅಪಾಯವನ್ನು ಹೆಚ್ಚಿಸುತ್ತದೆ. ಸಂತೋಷದ ಸಂಬಂಧವು ವ್ಯಕ್ತಿಯನ್ನು ಮಾನಸಿಕವಾಗಿ ಮತ್ತು ದೈಹಿಕವಾಗಿ ಆರೋಗ್ಯವಾಗಿರಿಸುತ್ತದೆ ಮತ್ತು ದೀರ್ಘಾಯುಷ್ಯವನ್ನು ಹೆಚ್ಚಿಸುತ್ತದೆ.

ಅತಿಯಾದ ವ್ಯಾಯಾಮ: ಹೃದಯದ ಆರೋಗ್ಯ ಸೇರಿದಂತೆ ಒಟ್ಟಾರೆ ಯೋಗಕ್ಷೇಮಕ್ಕೆ ವ್ಯಾಯಾಮ ಉತ್ತಮವಾಗಿದೆ. ಆದರೆ ಒಂದು ಸಮಯದಲ್ಲಿ ಹೆಚ್ಚು ವ್ಯಾಯಾಮ ಮಾಡುವುದು, ವಿಶೇಷವಾಗಿ ನೀವು ಸಮರ್ಥರಾಗಿ ಇರದಿದ್ದಾಗ ದೀರ್ಘಕಾಲದವರೆಗೆ ವ್ಯಾಯಾಮ ಮಾಡುವುದು ಇದರಿಂದ ನಿಮ್ಮ ಹೃದಯದ ಮೇಲೆ ಹೆಚ್ಚುವರಿ ಒತ್ತಡ ಉಂಟಾಗುತ್ತದೆ. ಹೃದಯ ಸಮಸ್ಯೆಗಳ ಅಪಾಯವನ್ನು ಹೆಚ್ಚಿಸುತ್ತದೆ. ತುಂಬಾ ಕಠಿಣ ಮತ್ತು ವೇಗವಾಗಿ ಕೆಲಸ ಮಾಡುವುದು ಹೃದಯಾಘಾತದ ಅಪಾಯವನ್ನು ಹೆಚ್ಚಿಸುತ್ತದೆ. ಆದ್ದರಿಂದ, ನಿಧಾನವಾಗಿ ಪ್ರಾರಂಭಿಸಿ ಮತ್ತು ವ್ಯಾಯಾಮ ಮಾಡುವಾಗ ನಿಮ್ಮ ದೇಹವನ್ನು ವಿಪರೀತವಾಗಿ ದಂಡಿಸಬೇಡಿ.

ಅತಿಯಾದ ಉಪ್ಪು ಸೇವನೆ: ನಿಮ್ಮ ಆಹಾರದಲ್ಲಿ ಹೆಚ್ಚುವರಿ ಉಪ್ಪನ್ನು ಸೇರಿಸುವುದು ಅಧಿಕ ರಕ್ತದೊತ್ತಡ ಮತ್ತು ಹೃದ್ರೋಗದ ಅಪಾಯವನ್ನು ಹೆಚ್ಚಿಸುತ್ತದೆ. ಸಂಸ್ಕರಿಸಿದ ಆಹಾರಗಳು ಮತ್ತು ಜಂಕ್ ಫುಡ್‌ಗಳು ಸಹ ನಿಮಗೆ ಹೃದಯ ಸಮಸ್ಯೆಗಳು ಮತ್ತು ಇತರ ಹೃದಯ ಸಮಸ್ಯೆಗಳ ಅಪಾಯವನ್ನು ಉಂಟುಮಾಡುತ್ತವೆ. ನಿಮ್ಮ ಆಹಾರದಲ್ಲಿ 5 ಗ್ರಾಂ ಗಿಂತ ಹೆಚ್ಚು ಉಪ್ಪನ್ನು ತೆಗೆದುಕೊಳ್ಳುವುದರಿಂದ ಇತರ ಆರೋಗ್ಯ ಸಮಸ್ಯೆಗಳ ಅಪಾಯವೂ ಉಂಟಾಗುತ್ತದೆ.



















