- Kannada News Photo gallery Ayyappa Swamy devotees perform puja and bhajan at the house of the Muslim leader in koppal
ಮುಸ್ಲಿಂ ಮುಖಂಡನ ಮನೆಯಲ್ಲಿ ಪೂಜೆ, ಭಜನೆ ಮಾಡಿದ ಅಯ್ಯಪ್ಪಸ್ವಾಮಿ ಭಕ್ತರು; ಕುಟುಂಬದಿಂದ ಅನ್ನಸಂತರ್ಪಣೆ
ಕೊಪ್ಪಳ ಜಿಲ್ಲೆಯ ಗಂಗಾವತಿ ಪಟ್ಟಣದ ಜಯನಗರದಲ್ಲಿರುವ ಪಿಂಜಾರ ಸಮುದಾಯದ ಜಿಲ್ಲಾಧ್ಯಕ್ಷರಾಗಿರೋ ಕಾಶಿಂ ಅಲಿ ಮುದ್ದಾಬಳ್ಳಿಯವರ ಮನೆಯಲ್ಲಿ ನೂರಾರು ಅಯ್ಯಪ್ಪಸ್ವಾಮಿ ಮಲಾಧಾರಿಗಳು ಪೂಜೆ ಮಾಡಿ ಭಜನೆ ಮಾಡಿದ್ದಾರೆ. ಅಲ್ಲದೆ ನೂರಾರು ಅಯ್ಯಪ್ಪಸ್ವಾಮಿ ಮಾಲಾಧಾರಿಗಳಿಗೆ ಕಾಶಿಂ ಅಲಿ ಮುದ್ದಾಬಳ್ಳಿಯವರು ತಮ್ಮ ಮನೆಯಲ್ಲೇ ಅನ್ನಸಂತರ್ಪಣೆ ಮಾಡಿದರು.
Updated on: Jan 10, 2024 | 8:04 AM

ಮುಸ್ಲಿಂ ಸಮುದಾಯದ ವ್ಯಕ್ತಿ ಮನೆಯಲ್ಲಿ ಅಯ್ಯಪ್ಪ ಸ್ವಾಮಿ ಪೂಜೆ ಮಾಡಿ ಪ್ರಸಾದ ಹಂಚಲಾಗಿದೆ. ಈ ಮೂಲಕ ಮುಸ್ಲಿಂ ಸಮುದಾಯದ ಮುಖಂಡ ಭಾವೈಕ್ಯತೆಯ ಸಂದೇಶ ಸಾರಿದ್ದಾರೆ.

ಕೊಪ್ಪಳ ಜಿಲ್ಲೆಯ ಗಂಗಾವತಿ ಪಟ್ಟಣದ ಜಯನಗರದಲ್ಲಿರುವ ಪಿಂಜಾರ ಸಮುದಾಯದ ಜಿಲ್ಲಾಧ್ಯಕ್ಷರಾಗಿರೋ ಕಾಶಿಂ ಅಲಿ ಮುದ್ದಾಬಳ್ಳಿಯವರ ಮನೆಯಲ್ಲಿ ನೂರಾರು ಅಯ್ಯಪ್ಪಸ್ವಾಮಿ ಮಲಾಧಾರಿಗಳು ಪೂಜೆ ಮಾಡಿ ಭಜನೆ ಮಾಡಿದ್ದಾರೆ.

ಅಲ್ಲದೆ ನೂರಾರು ಅಯ್ಯಪ್ಪಸ್ವಾಮಿ ಮಾಲಾಧಾರಿಗಳಿಗೆ ಕಾಶಿಂ ಅಲಿ ಮುದ್ದಾಬಳ್ಳಿಯವರು ತಮ್ಮ ಮನೆಯಲ್ಲೇ ಅನ್ನಸಂತರ್ಪಣೆ ಮಾಡಿದರು.

ಮುಸ್ಲಿಂ ಮನೆಯಲ್ಲಿ ಹಿಂದೂ ಧರ್ಮದ ಆಚರಣೆಗಳಂತೆ ಕಳೆದ ರಾತ್ರಿ ಅದ್ದೂರಿಯಾಗಿ ಅಯ್ಯಪ್ಪಸ್ವಾಮಿ ಪೂಜೆ ನಡೆದಿದೆ. ಪೂಜೆ ನಂತರ ಅಯ್ಯಪ್ಪಸ್ವಾಮಿ ಮಾಲಾಧಾರಿಗಳಿಗೆ ಕುಟುಂಬ ಸತ್ಕರಿಸಿದೆ.

ಕಾಶಿಂ ಅಲಿ ಮುದ್ದಾಬಳ್ಳಿ ಕುಟುಂಬ ಅಯ್ಯಪ್ಪಸ್ವಾಮಿ ಮಾಲಾಧಾರಿಗಳ ಜೊತೆ ಅಯ್ಯಪ್ಪಸ್ವಾಮಿಯ ಕುರಿತು ಭಜನೆ ಮಾಡಿದರು.

ಪಿಂಜಾರ ಸಮುದಾಯದ ಜಿಲ್ಲಾಧ್ಯಕ್ಷರಾಗಿರೋ ಕಾಶಿಂ ಅಲಿ ಮುದ್ದಾಬಳ್ಳಿ ಅವರು ಮಾತನಾಡಿ, ಎಲ್ಲಾ ಧರ್ಮಗಳು ಒಂದೇ, ಎಲ್ಲಾ ಧರ್ಮದ ಸಾರಗಳು ಗೊತ್ತಿರಬೇಕು ಎಂದರು.



