ಬೆಂಗಳೂರಲ್ಲಿ ‘ಅಂಬಾರಿ’ ದರ್ಬಾರ್: ಬಿಸಿಲಲ್ಲೂ ಡಬಲ್ ಡೆಕ್ಕರ್ ಬಸ್ ಏರಿ ಸಿಟಿ ಬ್ಯೂಟಿ ನೋಡಲು ಜನವೋ ಜನ!

Edited By:

Updated on: Apr 26, 2026 | 4:52 PM

ಸೂರ್ಯನ ತಾಪ ಹೆಚ್ಚಿದ್ದರೂ ಬೆಂಗಳೂರಿನ ಅಂಬಾರಿ ಡಬಲ್ ಡೆಕ್ಕರ್ ಬಸ್‌ಗೆ ಬೇಡಿಕೆ ಕುಗ್ಗಿಲ್ಲ. KSTDC ಪರಿಚಯಿಸಿರುವ ಈ 'ಹಾಪ್ ಆನ್ ಹಾಪ್ ಆಫ್' ಸೇವೆ ಮೂಲಕ ನಗರದ ಸೌಂದರ್ಯವನ್ನು ಎತ್ತರದಿಂದ ಸವಿಯಲು ಪ್ರವಾಸಿಗರು ಮುಗಿಬೀಳುತ್ತಿದ್ದಾರೆ. ವಿಶೇಷವಾಗಿ ಮೇಲಿನ ಓಪನ್ ಟಾಪ್ ಸೀಟುಗಳಿಗೆ ಉತ್ತಮ ಸ್ಪಂದನೆ ಸಿಕ್ಕಿದ್ದು, ಬೆಂಗಳೂರು ಪ್ರವಾಸೋದ್ಯಮಕ್ಕೆ ಹೊಸ ಕಾಯಕಲ್ಪ ನೀಡಿದೆ.

1 / 5
ಸಿಲಿಕಾನ್ ಸಿಟಿಯಲ್ಲಿ ಸೂರ್ಯನ ಪ್ರತಾಪ ಜೋರಾಗಿದ್ದರೂ, ಬೆಂಗಳೂರಿಗರ ಉತ್ಸಾಹ ಮಾತ್ರ ಕುಗ್ಗಿಲ್ಲ. ಬಿಸಿಲ ಬೇಗೆಯ ನಡುವೆಯೂ ಪ್ರವಾಸೋದ್ಯಮ ಇಲಾಖೆ ಪರಿಚಯಿಸಿರುವ 'ಅಂಬಾರಿ' (Ambari) ಡಬಲ್ ಡೆಕ್ಕರ್ ಬಸ್ ಏರಿ ನಗರದ ಸೌಂದರ್ಯ ಸವಿಯಲು ಪ್ರವಾಸಿಗರು ಮುಗಿಬೀಳುತ್ತಿದ್ದಾರೆ.

ಸಿಲಿಕಾನ್ ಸಿಟಿಯಲ್ಲಿ ಸೂರ್ಯನ ಪ್ರತಾಪ ಜೋರಾಗಿದ್ದರೂ, ಬೆಂಗಳೂರಿಗರ ಉತ್ಸಾಹ ಮಾತ್ರ ಕುಗ್ಗಿಲ್ಲ. ಬಿಸಿಲ ಬೇಗೆಯ ನಡುವೆಯೂ ಪ್ರವಾಸೋದ್ಯಮ ಇಲಾಖೆ ಪರಿಚಯಿಸಿರುವ 'ಅಂಬಾರಿ' (Ambari) ಡಬಲ್ ಡೆಕ್ಕರ್ ಬಸ್ ಏರಿ ನಗರದ ಸೌಂದರ್ಯ ಸವಿಯಲು ಪ್ರವಾಸಿಗರು ಮುಗಿಬೀಳುತ್ತಿದ್ದಾರೆ.

2 / 5

ಜನವರಿ ತಿಂಗಳಲ್ಲಿ ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮ (KSTDC) ಆರಂಭಿಸಿದ ಈ ಡಬಲ್ ಡೆಕ್ಕರ್ ಬಸ್‌ಗೆ ಈಗ ಎಲ್ಲಿಲ್ಲದ ಬೇಡಿಕೆ ಬಂದಿದೆ. ಈ ಬಸ್‌ನಲ್ಲಿ ಒಟ್ಟು 44 ಆಸನಗಳಿದ್ದು, ಬಸ್‌ನ ಮೇಲ್ಭಾಗದಲ್ಲಿ (Top Deck) 20 ಆಸನಗಳಿವೆ.

3 / 5

ಬಿಸಿಲು ನೆತ್ತಿ ಸುಡುತ್ತಿದ್ದರೂ ಜನ ಕೆಳಗಿನ ಎಸಿ ಸೀಟುಗಳಿಗಿಂತ ಮೇಲಿನ ಓಪನ್ ಟಾಪ್ ಸೀಟುಗಳನ್ನೇ ಹೆಚ್ಚು ಇಷ್ಟಪಡುತ್ತಿದ್ದಾರೆ. ತಲೆಗೆ ಕ್ಯಾಪ್, ಕಣ್ಣಿಗೆ ಕೂಲಿಂಗ್ ಗ್ಲಾಸ್ ಹಾಕಿಕೊಂಡು ಹೈಟೆಕ್ ಆಗಿ ಸಿಟಿ ರೌಂಡ್ಸ್ ಹೊಡೆಯುತ್ತಿದ್ದಾರೆ.

4 / 5

ವಾರಾಂತ್ಯ ಬಂತೆಂದರೆ ಅಂಬಾರಿ ಬಸ್ ಏರಲು ಜನ ಸಾಲು ನಿಲ್ಲುತ್ತಿದ್ದಾರೆ. 'ಹಾಪ್ ಆನ್ ಹಾಪ್ ಆಫ್' (Hop-on Hop-off) ಮಾದರಿಯ ಈ ಬಸ್, ಸುಮಾರು 45 ನಿಮಿಷಗಳ ಕಾಲ ನಗರದ ಪ್ರಮುಖ ಪ್ರವಾಸಿ ತಾಣಗಳ ದರ್ಶನ ಮಾಡಿಸುತ್ತದೆ.

5 / 5

ಬಿಸಿಲಿದ್ದರೂ ಪರವಾಗಿಲ್ಲ, ಬೆಂಗಳೂರಿನ ಹಸಿರು ಮತ್ತು ಸುಂದರ ಕಟ್ಟಡಗಳನ್ನು ಎತ್ತರದಿಂದ ನೋಡುವ ಮಜವೇ ಬೇರೆ ಎಂಬುದು ಪ್ರವಾಸಿಗರ ಅಭಿಪ್ರಾಯ.

ವಿನಯ್​ ಕಾಶಪ್ಪನವರ್​

ವಿನಯಕುಮಾರ್ ಕಾಶಪ್ಪನವರ್ ಅವರು ಸಮೂಹ ಸಂವಹನ ಹಾಗೂ ತಂತ್ರಜ್ಞಾನದಲ್ಲಿ ಸ್ನಾತಕೋತ್ತರ ಪದವಿ ಮತ್ತು ಪತ್ರಿಕೋದ್ಯಮದಲ್ಲಿ ವಿದ್ಯಾಭ್ಯಾಸ ಪಡೆದಿದ್ದಾರೆ. ಕಳೆದ 8 ವರ್ಷಗಳಿಂದ ಟಿವಿ9 ಕನ್ನಡದಲ್ಲಿ ಹಿರಿಯ ವರದಿಗಾರನಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಬೆಂಗಳೂರು ನಗರ, ಶಿಕ್ಷಣ ಹಾಗೂ ಆರೋಗ್ಯ ಕ್ಷೇತ್ರಗಳಲ್ಲಿ 10 ವರ್ಷಗಳ ವರದಿಗಾರಿಕೆ ಅನುಭವ ಹೊಂದಿದ್ದು, ಸಮಾಜಮುಖಿ ಹಾಗೂ ತನಿಖಾ ವರದಿಗಳ ಮೂಲಕ ಜನಪರ ವಿಷಯಗಳನ್ನು ಬೆಳಕಿಗೆ ತರುತ್ತಿದ್ದಾರೆ.

Read More
Loading...
Unable to load recommendations.
Follow Us