Updated on: Dec 27, 2021 | 6:53 PM
ಮದ್ಯಪಾನ ಆರೋಗ್ಯಕ್ಕೆ ಹಾನಿಕಾರಕ ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರ. ಆದರೆ ಕೆಲವೊಂದು ಡ್ರಿಂಕ್ಸ್ಗಳನ್ನು ಮಿತಿಯಲ್ಲಿ ಕುಡಿದರೆ ಆರೋಗ್ಯಕರ ಪ್ರಯೋಜನಗಳನ್ನು ಸಹ ಪಡೆಯಬಹುದು. ಹಾಗೆಯೇ ಬಿಯರ್ ಕುಡಿಯುವುದರಿಂದ ಕೂಡ ಆರೋಗ್ಯವನ್ನು ವೃದ್ಧಿಸಿಕೊಳ್ಳಬಹುದು ಎನ್ನುತ್ತದೆ ಸಂಶೋಧನೆ. ಹೀಗಾಗಿಯೇ ಅನೇಕರಲ್ಲಿ ಬಿಯರ್ ಉತ್ತಮ ಎಂಬ ಭಾವನೆಯಿದೆ. ಆದರೆ...
ಆದರೆ ಬಿಯರ್ ಕುಡಿಯುವಾಗ ನೀವು ಕೆಲವು ವಿಷಯಗಳನ್ನು ನೆನಪಿನಲ್ಲಿಟ್ಟುಕೊಳ್ಳಬೇಕು.ಇಲ್ಲದಿದ್ದರೆ ಅತಿಯಾದರೆ ಅಮೃತವೂ ವಿಷ ಎಂಬಂತೆ ಬಿಯರ್ ಕುಡಿಯುವ ಅಭ್ಯಾಸ ಅನೇಕ ಅನಾರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು. ಅಲ್ಲದೆ ಮಿತಿಮೀರಿದ ಸೇವನೆಯು ನಿಮ್ಮ ಆರೋಗ್ಯಕ್ಕೆ ಅಪಾಯಕಾರಿಯಾಗಲಿದೆ. ಹಾಗಿದ್ರೆ ಬಿಯರ್ ಕುಡಿಯುವವರು ಅನುಸರಿಸಬೇಕಾದ ಕ್ರಮಗಳೇನು ಎಂಬುದನ್ನು ಇಲ್ಲಿ ತಿಳಿಸಲಾಗಿದೆ.
1- ಖಾಲಿ ಹೊಟ್ಟೆಯಲ್ಲಿ ಬಿಯರ್ ಸೇವಿಸಬಾರದು: ಹೌದು, ಖಾಲಿ ಹೊಟ್ಟೆಯಲ್ಲಿ ಅಥವಾ ಅತಿಯಾದ ಆಹಾರದ ಸೇವನೆ ಬಳಿಕ ಬಿಯರ್ ಅನ್ನು ಕುಡಿಯಲೇಬಾರದು. ಖಾಲಿ ಹೊಟ್ಟೆಯಲ್ಲಿ ಬಿಯರ್ ಸೇವಿಸುವುದು ನಿಮ್ಮ ಆರೋಗ್ಯಕ್ಕೆ ಹಾನಿಕಾರಕವಾಗಿದೆ.
2- ಹೆಚ್ಚು ಬಿಯರ್ ಕುಡಿಯಬೇಡಿ: ಬಿಯರ್‌ನಲ್ಲಿ ಆಲ್ಕೋಹಾಲ್ ಅಂಶ ಕಡಿಮೆ ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರ. ಹೀಗಾಗಿಯೇ ಅನೇಕರು ಬಿಯರ್ ಆಯ್ಕೆಯ ಮೊರೆ ಹೋಗುತ್ತಾರೆ. ಆದರೆ ಬಿಯರ್‌ನಲ್ಲಿ ಆಲ್ಕೋಹಾಲ್ ಅಂಶ ಕಡಿಮೆ ಇದೆ ಎಂದು ಅತಿಯಾಗಿ ಸೇವಿಸಿದರೂ ಕೂಡ ನಿಮ್ಮ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ.
3- ಆರೋಗ್ಯದ ಬಗ್ಗೆ ಎಚ್ಚರಿಕೆಯಿರಲಿ: ನೀವು ಗ್ಯಾಸ್ ಮತ್ತು ಅಸಿಡಿಟಿ ಸಮಸ್ಯೆ ಹೊಂದಿದ್ದರೆ, ಆ ಸಮಯದಲ್ಲಿ ನೀವು ಬಿಯರ್ ಕುಡಿಯಲೇಬಾರದು. ಇದು ಅಜೀರ್ಣಕ್ಕೆ ಕಾರಣವಾಗುತ್ತದೆ. ಅಷ್ಟೇ ಅಲ್ಲದೆ ಗ್ಯಾಸ್-ಅಸಿಡಿಟಿ ಸಮಸ್ಯೆಯನ್ನು ಹೆಚ್ಚಿಸುತ್ತದೆ.
4- ಹೆಚ್ಚು ನೀರು ಕುಡಿಯಿರಿ: ಆಲ್ಕೋಹಾಲ್ ದೇಹದಲ್ಲಿ ನೀರಿನ ಶೇಕಡಾವಾರು ಪ್ರಮಾಣವನ್ನು ಕಡಿಮೆ ಮಾಡುತ್ತದೆ. ಆದ್ದರಿಂದ ಬಿಯರ್ ಸೇವಿಸಿದ ಬಳಿಕ ನೀವು ಹೆಚ್ಚು ನೀರನ್ನು ಕುಡಿಯಬೇಕು. ಇಲ್ಲದಿದ್ದರೆ ದೇಹದಲ್ಲಿ ನೀರಿನ ಕೊರತೆ ಸಮಸ್ಯೆ ಎದುರಾಗುತ್ತದೆ.
5- ತೂಕವನ್ನು ಹೆಚ್ಚಿಸುತ್ತದೆ: ನೀವು ತೂಕ ಇಳಿಸಿಕೊಳ್ಳಲು ಡಯಟ್ ಮಾಡುತ್ತಿದ್ದರೆ, ನೀವು ಬಿಯರ್ ಸೇವಿಸಬಾರದು. ಏಕೆಂದರೆ ಬಿಯರ್ ಸೇವನೆಯು ನಿಮ್ಮ ದೇಹದ ತೂಕವನ್ನು ಹೆಚ್ಚಿಸುತ್ತದೆ. ಹೀಗಾಗಿ ಬಿಯರ್ ಹೀರುವ ಮುನ್ನ ಈ ಅಂಶಗಳ ಬಗ್ಗೆ ಎಚ್ಚರಿಕೆವಹಿಸುವುದು ಉತ್ತಮ.