One-Moto Electa: ಭಾರತದಲ್ಲಿ 150 ಕಿ.ಮೀ ಮೈಲೇಜ್ ನೀಡುವ ಸ್ಕೂಟರ್ ಬಿಡುಗಡೆ
One-Moto Electa electric scooter price: ಎಲೆಕ್ಟಾದಲ್ಲಿ ಹೈಡ್ರಾಲಿಕ್ ಡಿಸ್ಕ್ ಬ್ರೇಕ್‌ಗಳನ್ನು ನೀಡಲಾಗಿದ್ದು, ಇದರ ಮೋಟಾರ್, ಕಂಟ್ರೋಲರ್ ಮತ್ತು ಬ್ಯಾಟರಿಯ ಮೇಲೆ ಮೂರು ವರ್ಷಗಳ ವಾರಂಟಿ ಸಹ ಲಭ್ಯವಿರಲಿದೆ.
Updated on: Dec 27, 2021 | 5:46 PM

ಬ್ರಿಟಿಷ್ ಬ್ರ್ಯಾಂಡ್ ಒನ್-ಮೋಟೋ ದೇಶದಲ್ಲಿ ಹೈ-ಸ್ಪೀಡ್ ಎಲೆಕ್ಟ್ರಿಕ್ ಸ್ಕೂಟರ್ ಎಲೆಕ್ಟಾವನ್ನು ಬಿಡುಗಡೆ ಮಾಡಿದೆ. ಎಲೆಕ್ಟಾ ಎಲೆಕ್ಟ್ರಿಕ್ ಸ್ಕೂಟರ್ ಭಾರತದಲ್ಲಿ 5 ಬಣ್ಣಗಳ ಆಯ್ಕೆಗಳೊಂದಿಗೆ ಖರೀದಿಗೆ ಲಭ್ಯವಿರಲಿದೆ. ಅದರಂತೆ ಈ ಸ್ಕೂಟರ್ ಮ್ಯಾಟ್ ಬ್ಲ್ಯಾಕ್, ಶೈನಿಂಗ್ ಬ್ಲ್ಯಾಕ್, ನೀಲಿ, ಕೆಂಪು, ಬೂದು ಬಣ್ಣಗಳಲ್ಲಿ ಖರೀದಿಸಬಹುದು.

ಭಾರತದಲ್ಲಿ ಒನ್-ಮೋಟೋ ಕಂಪೆನಿ ಪರಿಚಯಿಸುತ್ತಿರುವ ಮೂರನೇ ವಾಹನ ಇದಾಗಿದ್ದು, ಇದಕ್ಕೂ ಮುನ್ನ ಕಮ್ಯುಟಾ ಮತ್ತು ಬೈಕಾವನ್ನು ಸ್ಕೂಟರ್ಗಳನ್ನು ಬಿಡುಗಡೆ ಮಾಡಿತ್ತು. ಈ ಮೂರು ಸ್ಕೂಟರ್‌ಗಳಲ್ಲಿ, ಜಿಯೋ-ಫೆನ್ಸಿಂಗ್, IoT ಮತ್ತು ಬ್ಲೂಟೂತ್‌ನಂತಹ ಹಲವು ವೈಶಿಷ್ಟ್ಯಗಳನ್ನು ನೀಡಲಾಗಿದೆ.

ಎಲೆಕ್ಟಾದ ವಿಶೇಷತೆಯೆಂದರೆ ಇದರಲ್ಲಿ 72V ಮತ್ತು 45A ಡಿಟ್ಯಾಚೇಬಲ್ ಲಿಥಿಯಂ-ಐಯಾನ್ ಬ್ಯಾಟರಿಯನ್ನು ನೀಡಲಾಗಿರುವುದು. ಇದನ್ನು ಕೇವಲ 4 ಗಂಟೆಗಳಲ್ಲಿ ಸಂಪೂರ್ಣವಾಗಿ ಚಾರ್ಜ್ ಮಾಡಬಹುದಾಗಿದೆ. ಈ ಎಲೆಕ್ಟ್ರಿಕ್ ಸ್ಕೂಟರ್‌ನಲ್ಲಿ 4KW QS ಬ್ರಶ್‌ಲೆಸ್ DC ಹಬ್ ಮೋಟಾರ್ ನೀಡಲಾಗಿದೆ. ಇದರ ಗರಿಷ್ಠ ವೇಗ ಗಂಟೆಗೆ 100 ಕಿ.ಮೀ.

ಇನ್ನು ಎಲೆಕ್ಟಾದಲ್ಲಿ ಹೈಡ್ರಾಲಿಕ್ ಡಿಸ್ಕ್ ಬ್ರೇಕ್‌ಗಳನ್ನು ನೀಡಲಾಗಿದ್ದು, ಇದರ ಮೋಟಾರ್, ಕಂಟ್ರೋಲರ್ ಮತ್ತು ಬ್ಯಾಟರಿಯ ಮೇಲೆ ಮೂರು ವರ್ಷಗಳ ವಾರಂಟಿ ಸಹ ಲಭ್ಯವಿರಲಿದೆ.

ರೆಟ್ರೊ ಸ್ಟೈಲ್ನಲ್ಲಿರುವ ಎಲೆಕ್ಟಾ ಸ್ಕೂಟರ್ನ ಬ್ಯಾಟರಿ 4 ಗಂಟೆಗಳಲ್ಲಿ ಸಂಪೂರ್ಣ ಚಾರ್ಜ್ ಆಗಲಿದ್ದು, ಒಮ್ಮೆ ಫುಲ್ ಚಾರ್ಜ್ ಮಾಡಿದರೆ 150 ಕಿ.ಮೀ ವರೆಗೆ ಓಡಿಸಬಹುದಾಗಿದೆ.

ಒನ್-ಮೋಟೋ ಎಲೆಕ್ಟಾ ಹೈಸ್ಪೀಡ್ ಸ್ಕೂಟರ್ ಬೆಲೆ 1.99 ಲಕ್ಷ ರೂ. ಇದೀಗ ಎಲೆಕ್ಟಾ ಸ್ಕೂಟರ್ನ ಬುಕ್ಕಿಂಗ್ ಶುರುವಾಗಿದ್ದು, ಫೆಬ್ರವರಿ 2022 ರಲ್ಲಿ ಡೆಲಿವರಿ ನೀಡುವುದಾಗಿ ಒನ್-ಮೋಟೋ ಕಂಪೆನಿ ತಿಳಿಸಿದೆ. ವಿತರಣೆಗಳು ಫೆಬ್ರವರಿ 2022 ರಿಂದ ಪ್ರಾರಂಭವಾಗುತ್ತದೆ.




