Lalbagh Flower Show: 5 ಲಕ್ಷ ಜನರಿಂದ ಲಾಲ್ಬಾಗ್ ಫ್ಲವರ್ ಶೋ ವೀಕ್ಷಣೆ, 2.59 ಕೋಟಿ ರೂ. ಆದಾಯ
Bangalore Lalbagh Flower Show: ಈ ಬಾರಿಯ ಲಾಲ್ಬಾಗ್ ಫ್ಲವರ್ ಶೋ ಬಹಳ ವಿಶೇಷತೆಯಿಂದ ಕೂಡಿತ್ತು. 215ನೇ ಫಲಪುಷ್ಪ ಪ್ರದರ್ಶನಕ್ಕೆ ಭರ್ಜರಿ ರೆಸ್ಪಾನ್ಸ್ ಸಿಕ್ಕಿದ್ದು, ಮಕ್ಕಳು, ಕಪಲ್ಸ್, ವೃದ್ಧರು, ಮಹಿಳೆಯರು ಸೇರಿದಂತೆ ಕುಟುಂಬ ಸಮೇತರಾಗಿ ಬಂದು ಫ್ಲವರ್ ಶೋ ಎಂಜಾಯ್ ಮಾಡಿದ್ದಾರೆ.
ಈ ಬಾರಿಯ ಲಾಲ್ಬಾಗ್ ಫ್ಲವರ್ ಶೋ ಬಹಳ ವಿಶೇಷತೆಯಿಂದ ಕೂಡಿತ್ತು. 215ನೇ ಫಲಪುಷ್ಪ ಪ್ರದರ್ಶನಕ್ಕೆ ಭರ್ಜರಿ ರೆಸ್ಪಾನ್ಸ್ ಸಿಕ್ಕಿದ್ದು, ಮಕ್ಕಳು, ಕಪಲ್ಸ್, ವೃದ್ಧರು, ಮಹಿಳೆಯರು ಸೇರಿದಂತೆ ಕುಟುಂಬ ಸಮೇತರಾಗಿ ಬಂದು ಫ್ಲವರ್ ಶೋ ಎಂಜಾಯ್ ಮಾಡಿದ್ದಾರೆ.
1 / 7
ಈ ಬಾರಿಯ ಲಾಲ್ಬಾಗ್ ಫ್ಲವರ್ ಶೋ ಬಹಳ ವಿಶೇಷತೆಯಿಂದ ಕೂಡಿತ್ತು. 215ನೇ ಫಲಪುಷ್ಪ ಪ್ರದರ್ಶನದಲ್ಲಿ ಬಸವಣ್ಣ, ಅಲ್ಲಮಪ್ರಭು, ಅಕ್ಕಮಹಾದೇವಿ, ಚನ್ನಬಸವಣ್ಣ ಪ್ರತಿರೂಪ ಅರಳಿದ್ದವು. ಲಾಲ್ಬಾಗ್ನ ಗಾಜಿನಮನೆಯಲ್ಲಿ ಸೇವಂತಿಗೆ, ಗುಲಾಬಿ ಹೂವುಗಳಿಂದ ಅನುಭವ ಮಂಟಪ ನಿರ್ಮಾಣ ಮಾಡಲಾಗಿತ್ತು.
2 / 7
68 ಬಗೆಯ 32 ಲಕ್ಷ ಹೂವುಗಳ ಬಳಕೆ ಮಾಡಲಾಗಿತ್ತು. ಜನವರಿ 18 ರಿಂದ ಜನವರಿ 28ರವರೆಗೆ 11 ದಿನಗಳ ಕಾಲ ಫಲಪುಷ್ಪ ಪ್ರದರ್ಶನಕ್ಕೆ ನಡೆಯಿತು. ಬೆಳಗ್ಗೆ 6.30ರಿಂದ ಸಂಜೆ 7.30ರವರೆಗೆ ವೀಕ್ಷಿಸಲು ಅವಕಾಶ ನೀಡಲಾಗಿತ್ತು.
3 / 7
ಗಣರಾಜ್ಯೋತ್ಸವ ಅಂಗವಾಗಿ ಸಾಕಷ್ಟು ಸಂಖ್ಯೆಯಲ್ಲಿ ಜನರು ಲಾಲ್ ಬಾಗ್ಗೆ ಭೇಟಿ ನೀಡಿದ್ದರು. ಜನವರಿ 26 ರಂದು ಒಂದೇ ದಿನ 96,500 ಜನರು ಫ್ಲವರ್ ಶೋ ವೀಕ್ಷಣೆ ಮಾಡಿದ್ದು, ಟಿಕೆಟ್ ಮಾರಾಟದಿಂದ 65 ಲಕ್ಷ ರೂ. ಆದಾಯ ಹರಿದು ಬಂದಿತ್ತು.
4 / 7
ಲಾಲ್ಬಾಗ್ ಫ್ಲವರ್ ಶೋಗೆ ರವಿವಾರ (ಜ.28) ರಂದು ತೆರೆ ಕಂಡಿದೆ. ಕಳೆದ 11 ದಿನಗಳಲ್ಲಿ ಒಟ್ಟು 5.6 ಲಕ್ಷ ಮಂದಿ ವೀಕ್ಷಣೆ ಮಾಡಿದ್ದಾರೆ. ಒಟ್ಟು 2.59 ಕೋಟಿ ಆದಾಯ ಬಂದಿದೆ.
5 / 7
ಕೊನೆಯ ದಿನವಾದ ರವಿವಾರ (ಜ.28) ರಂದು ಒಟ್ಟು 75,500 ಮಂದಿ ಭೇಟಿ ನೀಡಿದ್ದಾರೆ. ಆದರೆ ಈ ಬಾರಿ 10 ರಿಂದ 11 ಲಕ್ಷದಷ್ಟು ಜನರು ಬರುವ ನಿರೀಕ್ಷೆ ಇತ್ತು.
6 / 7
ಆದರೆ ತೋಟಾಗಾರಿಕೆಯ ನಿರೀಕ್ಷೆಗೆ ತಕ್ಕಂತೆ ಜನರು ಆಗಮಿಸಿಲ್ಲ. ಕಳೆದ ವರ್ಷ ಆಗಸ್ಟ್ ತಿಂಗಳಲ್ಲಿ ನಡೆದಿದ್ದ ಫ್ಲವರ್ ಶೋಗೆ 10 ಲಕ್ಷದಷ್ಟು ಜನರು ಆಗಮಿಸಿದ್ದರು.