ಹಾವೇರಿ: ಏಲಕ್ಕಿ ನಾಡಲ್ಲಿ ಅದ್ದೂರಿಯಾಗಿ ನಡೆದ ಕುಸ್ತಿ ಪಂದ್ಯಾವಳಿ; ಇಲ್ಲಿದೆ ಜಟ್ಟಿಗಳ ಝಲಕ್​

ಉತ್ತರ ಕರ್ನಾಟಕದ ಹೆಬ್ಬಾಗಿಲು ಹಾವೇರಿ ಜಿಲ್ಲೆಯ ರಾಣೆಬೇನ್ನೂರು ಅಂದ್ರೆ ಕುಸ್ತಿಕಲಿಗಳ ತವರೂರು. ಇಲ್ಲಿ ಗಟಾನು ಗಟಿ ಪೈಲ್ವಾನರು ಪಳಗಿರು ಗರಡಿ ಮನೆಗಳಿವೆ. ಇಂತಹ ಪೈಲ್ವಾನರ ತವರೂರಿನಲ್ಲಿ ಬಯಲು ಜಂಗಿ ಕುಸ್ತಿ ನಡೆದಿದೆ. ಇಲ್ಲಿಗೆ ರಾಜ್ಯದ ನಾನಾ ಭಾಗದಿಂದ ಜಗಜಟ್ಟಿ ಕುಸ್ತಿ ಪಟುಗಳು ಭಾವಹಿಸಿದ್ದರು. ಅದರ ಒಂದು ಝಲಕ್ ಇಲ್ಲಿದೇ ನೋಡಿ.

TV9 Web
| Updated By: ಕಿರಣ್ ಹನುಮಂತ್​ ಮಾದಾರ್

Updated on: Jan 29, 2024 | 3:48 PM

 ಹಾವೇರಿ ಜಿಲ್ಲೆಯ ರಾಣೇಬೆನ್ನೂರು ನಗರದಲ್ಲಿ ಶ್ರೀ ಗಂಗಾಜಲ ಮತ್ತು ತುಂಗಾಜಲ ಚೌಡೇಶ್ವರಿ ಅಮ್ಮನವರ ಜಾತ್ರಾ ಪ್ರಯುಕ್ತ ನಡೆದ ಕುಸ್ತಿಯ ಸೆಣಸಾಟ ನೋಡಲು ಜನಸಾಗರವೇ ಹರಿದು ಬಂದಿತ್ತು. ನಗರದ ತಾಲೂಕಾ ಕ್ರೀಡಾಂಗಣದಲ್ಲಿ ಬೀರೆಶ್ವರ ವ್ಯಾಯಾಮ ಶಾಲೆಯ ವತಿಯಿಂದ ಕುಸ್ತಿ ಪಂದ್ಯಾವಳಿ ನಡೆಸಲಾಯಿತು.

1 / 7
ಈ ಬಯಲು ಅಖಾಡಕ್ಕೆ ಹರಿಯಾಣ, ಮಧ್ಯಪ್ರದೇಶ, ತೆಲಂಗಾಣ ಹಾಗೂ ರಾಜ್ಯದ ಬೇರೆ ಬೇರೆ ಜಿಲ್ಲೆಯಿಂದ ಪೈಲ್ವಾನರು ಆಗಮಿಸಿದ್ದರು. ಪ್ರಥಮ ಬಹುಮಾನ ಗೆಲ್ಲುವುದಕ್ಕಾಗಿ ಜಗಜಟ್ಟಿಗಳು ಮೈಕೊಡವಿ ಹೋರಾಡಿದರು. ಇದನ್ನು ಕಂಡು ಕುಸ್ತಿ ಅಭಿಮಾನಿಗಳು ಸಂಭ್ರಮಿಸಿದರು.

2 / 7
ಇನ್ನು ಇಂದಿನ ಮಕ್ಕಳು ಮೊಬೈಲ್​ಗೆ ದಾಸರಾಗುತ್ತಿದ್ದು, ಸಣ್ಣ ವಯಸ್ಸಿನಲ್ಲೇ ದುಷ್ಚಟಕ್ಕೆ ಒಳಗಾಗುತ್ತಿದ್ದಾರೆ. ಹೀಗಾಗಿ ತಂದೆ-ತಾಯಿ ಎಚ್ಚೆತ್ತುಕೊಂಡು ಮಕ್ಕಳನ್ನು ಪೈಲ್ವಾನರಾಗಲು ಹುರಿದುಂಬಿಸಬೇಕು, ದೇಹ ದಂಡಿಸಿ ಗಟ್ಟಿಮುಟ್ಟಾಗಿ ಕುಸ್ತಿ ಪಟುವಾಗಲು ಮುಂದಾಗಬೇಕು ಅಂತಾರೆ ಕುಸ್ತಿ ಅಭಿಮಾನಿಗಳು.

3 / 7
ಕುಸ್ತಿ ಪಟುಗಳನ್ನು ಪ್ರೋತ್ಸಾಹಿಸುವ ಸಲುವಾಗಿ ಪ್ರಥಮ ಬಹುಮಾನವಾಗಿ ಎರಡು ಲಕ್ಷ ಬೆಳ್ಳಿ ಗದೆ. ದ್ವಿತಿಯ ಬಹುಮಾನ ಒಂದು ಲಕ್ಷ ಬೆಳ್ಳಿ ಗದೆ. ತೃತಿಯ ಬಹುಮಾನ 50 ಸಾವಿರಾರದಂತೆ ಕಮಿಟಿಯವರು ಬಹುಮಾನ ಘೋಷಣೆ ಮಾಡಿದರು.

4 / 7
ಈ ವೇಳೆ 34 ಜೊತೆ ಕಾಟಾ ನಿಕಾಲಿ ಕುಸ್ತಿಪಟುಗಳನ್ನು ಆಡಿಸಲಾಯಿತು. ಕಟ್ಟುಮಸ್ತಾದ ಪೈಲ್ವಾನರು ಉಪಾಯದಿಂದ ಎದುರಾಳಿಗಳ ಜೊತೆ ಕಾದಾಡಿ ನೇರಿದಿದ್ದ ಜನರನ್ನ ಕುಣಿದು ಕುಪ್ಪಳಿಸುವಂತೆ ಮಾಡಿದರು. ಬಹಳ ಅಚ್ಚುಕಟ್ಟಾಗಿ ಪಂದ್ಯವನ್ನು ಆಯೋಜಕರಾದ ರಾಜು ಮೈಲಾರ ಅವರು ಏರ್ಪಡಿಸಿ, ಕುಸ್ತಿಪಟುಗಳು ಶ್ರಮದ ಬಗ್ಗೆ ಮಾತಾಡಿದರು.

5 / 7
ಇದು ಗ್ರಾಮೀಣ ಕ್ರೀಡೆ ನಾವೇಲ್ಲರೂ ಸೇರಿ ಕಾಪಾಡಿ,ಉಳಿಸಿ ಬೆಳಸಬೇಕು ಮತ್ತು ನಶಿಸಿ ಹೋಗುತ್ತಿರುವ ಗರಡಿಮನೆಗಳ ಅಭಿವೃದ್ಧಿ ಗಾಗಿ ಸರ್ಕಾರ ಮುಂದಾಗಬೇಕು ಗರಡಿ ಮನೆಗಳು ಹೆಚ್ಚಾಗಬೇಕು ಎಂದು ಅಭಿಪ್ರಾಯ ಪಟ್ಟರು.

6 / 7
 ಒಟ್ಟಾರೆಯಾಗಿ ದೈಹಿಕ ಕಸರತ್ತು ತಾಕತ್ತು ತೋರಿಸುವ ರೈತರ ಹಾಗೂ ಯುವಕರ ಕ್ರೀಡೆಗಳಲ್ಲೊಂದಾದ ಕುಸ್ತಿ ಗರಡಿಮನಿಗಳು ಅಳವಿಂಚಿನಲ್ಲಿ ಇವೆ.ಗ್ರಾಮೀಣ ಭಾಗದಲ್ಲಿ ಇಂತಹ ಪಂದ್ಯಾಟಗಳನ್ನು ಮಾಡುವ ಮೂಲಕ ಕುಸ್ತಿ ಆಟವನ್ನ ಮತ್ತಷ್ಟು ಜೀವಂತವಾಗಿರಿಸಿದೆ.

7 / 7
Follow us
ವೆಂಕಟೇಶ್ವರ ಸ್ವಾಮಿಗೆ 150 ಕೆಜಿ ಪುಳಿಯೋಗರೆಯಿಂದ ಅಲಂಕಾರ

ಬಿಗ್ ಬಾಸ್​ಗೆ ಬಂದಿದ್ದಕ್ಕೆ ಸಾರ್ಥಕ ಆಯ್ತು: ಸುದೀಪ್ ನೀಡಿದ ಸರ್ಪ್ರೈಸ್​

ಅಶೋಕ ಸಾರಿಗೆ ಸಚಿವರಾಗಿದ್ದಾಗ ಬಸ್ ಟಿಕೆಟ್ ದರ ಹೆಚ್ಚಿಸಿರಲಿಲ್ಲವೇ? ಸಿಎಂ

ಸಿಖ್ಖರ ಮೆರವಣಿಗೆ ವೇಳೆ ಕಾರಿನಲ್ಲಿ ಡಿಕ್ಕಿ;ಜನರಿಂದ ಪೊಲೀಸ್ ಮಗನ ವಾಹನ ಪುಡಿ

ಬಿಜೆಪಿ ನಾಯಕರೊಂದಿಗೆ ರಾಜ್ಯದ ಪ್ರಸಕ್ತ ವಿದ್ಯಮಾನಗಳ ಬಗ್ಗೆ ನಡ್ಡಾ ಚರ್ಚೆ

ಸೊಸೆ ಇದೇ ರೀತಿ ಬಟ್ಟೆ ಹಾಕಬೇಕು: ಹನುಮಂತನ ತಾಯಿ ಹಾಕಿದ ಷರತ್ತು ಇದು

ಸಚಿನ್ ಸಾವಿನ ಪ್ರಕರಣದಲ್ಲಿ ಖರ್ಗೆ ಪಾತ್ರವಿಲ್ಲ, ರಾಜೀನಾಮೆ ಯಾಕೆ? ಸುರೇಶ್

ಚಪ್ಪಾಳೆ ಮತ್ತು ಶಿಳ್ಳೆ ಗಿಟ್ಟಿಸಲು ಸೂರಜ್ ರೇವಣ್ಣ ಮಾತಾಡಿದ್ದಾರೆ: ಶ್ರೇಯಸ್

ಕೇಂದ್ರ ಸರ್ಕಾರ ನಮಗೆ ಎಲೆಕ್ಟ್ರಿಕ್ ಬಸ್​​ಗಳನ್ನು ನೀಡುತ್ತಿಲ್ಲ: ಸಚಿವ

ಉದಯಪುರ ಘೋಷಣೆ ಕೆಲ ರಾಜ್ಯಗಳಲ್ಲಿ ಜಾರಿಯಾಗಿಲ್ಲ: ಸತೀಶ್ ಜಾರಕಿಹೊಳಿ