AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Virat Kohli: ದಾಖಲೆಗಳ ಸರದಾರನ ಹೆಸರಿಗೆ ಮತ್ತೊಂದು ವಿಶ್ವ ದಾಖಲೆ ಸೇರ್ಪಡೆ!

IPL 2026: ಐಪಿಎಲ್ 2026ರ 61ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಪಂಜಾಬ್ ಕಿಂಗ್ಸ್ ವಿರುದ್ಧ 23 ರನ್‌ಗಳ ಭರ್ಜರಿ ಜಯ ಸಾಧಿಸಿ, ಪ್ರಸಕ್ತ ಸೀಸನ್‌ನಲ್ಲಿ ಅಧಿಕೃತವಾಗಿ ಪ್ಲೇ-ಆಫ್ ಹಂತ ತಲುಪಿದ ಮೊದಲ ತಂಡ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಆರ್‌ಸಿಬಿ ತಂಡದ ಈ ಐತಿಹಾಸಿಕ ಗೆಲುವಿಗೆ ಆಧಾರಸ್ತಂಭವಾಗಿದ್ದು ಓಪನರ್ ವಿರಾಟ್ ಕೊಹ್ಲಿ. ಪಂದ್ಯದಲ್ಲಿ 58 ರನ್ ಚಚ್ಚುವ ಮೂಲಕ ಕಿಂಗ್ ಕೊಹ್ಲಿ ಹೊಸ ವಿಶ್ವ ದಾಖಲೆಯನ್ನು ಕೂಡ ತಮ್ಮದಾಗಿಸಿಕೊಂಡಿದ್ದಾರೆ.

ಝಾಹಿರ್ ಯೂಸುಫ್
|

Updated on: May 18, 2026 | 8:43 AM

Share
ದಾಖಲೆಗಳ ಸರದಾರನ ಹೆಸರಿಗೆ ಮತ್ತೊಂದು ವಿಶ್ವ ದಾಖಲೆ ಸೇರ್ಪಡೆಯಾಗಿದೆ. ಈ ಬಾರಿ ಸೇರ್ಪಡೆಯಾಗಿರುವ ಹೊಸ ದಾಖಲೆ ಟಿ20 ಕ್ರಿಕೆಟ್‌ನಲ್ಲಿ ಅತಿ ಹೆಚ್ಚು 50+ ರನ್‌ಗಳ ಜೊತೆಯಾಟ. ಈ ದಾಖಲೆಯೊಂದಿಗೆ ಇಂಗ್ಲೆಂಡ್ ಬ್ಯಾಟರ್ ಅಲೆಕ್ಸ್ ಹೇಲ್ಸ್​ ಅವರ ವಿಶ್ವ ದಾಖಲೆಯನ್ನು ವಿರಾಟ್ ಕೊಹ್ಲಿ (Virat Kohli) ಸರಿಗಟ್ಟಿದ್ದಾರೆ. (PC: IPL)

1 / 5
ಪಂಜಾಬ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ ಆರಂಭಿಕನಾಗಿ ಕಣಕ್ಕಿಳಿದ ವಿರಾಟ್ ಕೊಹ್ಲಿ 2ನೇ ವಿಕೆಟ್​ಗೆ ದೇವದತ್ ಪಡಿಕ್ಕಲ್ ಜೊತೆ 76 ರನ್​ಗಳ ಜೊತೆಯಾಟವಾಡಿದ್ದರು. ಈ ಜೊತೆಯಾಟದೊಂದಿಗೆ ಟಿ20 ಕ್ರಿಕೆಟ್​ ಇತಿಹಾಸದಲ್ಲೇ ಅತೀ ಹೆಚ್ಚು ಬಾರಿ 50+ ರನ್​ಗಳ ಜೊತೆಯಾಟವಾಡಿದ ಏಷ್ಯನ್ ಬ್ಯಾಟರ್ ಎನಿಸಿಕೊಂಡಿದ್ದಾರೆ. ಹಾಗೆಯೇ ವಿಶ್ವ ದಾಖಲೆಯನ್ನು ಕೂಡ ಸರಿಗಟ್ಟಿದ್ದಾರೆ. (PC: IPL)

2 / 5
ಟಿ20 ಕ್ರಿಕೆಟ್​ ಇತಿಹಾಸದಲ್ಲಿ ಅತೀ ಹೆಚ್ಚು ಬಾರಿ 50+ ಸ್ಕೋರ್ ಜೊತೆಯಾಟವಾಡಿದ ವಿಶ್ವ ದಾಖಲೆ ಇಂಗ್ಲೆಂಡ್​ನ ಅಲೆಕ್ಸ್ ಹೇಲ್ಸ್​ ಹೆಸರಿನಲ್ಲಿದೆ. ಈವರೆಗೆ 523 ಟಿ20 ಇನಿಂಗ್ಸ್​ ಆಡಿರುವ ಹೇಲ್ಸ್ ಒಟ್ಟು 210 ಬಾರಿ 50+ ಜೊತೆಯಾಟದಲ್ಲಿ ಪಾಲುದಾರರಾಗಿದ್ದಾರೆ. ಇದೀಗ ಈ ಸಂಖ್ಯೆಯನ್ನು ಕಿಂಗ್ ಕೊಹ್ಲಿ ಸರಿಗಟ್ಟಿರುವುದು ವಿಶೇಷ. (PC: Google)

3 / 5
ಈವರೆಗೆ 410 ಟಿ20 ಇನಿಂಗ್ಸ್ ಆಡಿರುವ ವಿರಾಟ್ ಕೊಹ್ಲಿ ಒಟ್ಟು 210 ಬಾರಿ 50+ ಸ್ಕೋರ್​ಗಳ ಜೊತೆಯಾಟದಾಟದ ಪಾಲುದಾರರಾಗಿದ್ದಾರೆ. ಈ ಮೂಲಕ ಟಿ20 ಕ್ರಿಕೆಟ್ ಇತಿಹಾಸದಲ್ಲೇ ಅತೀ ಹೆಚ್ಚು ಬಾರಿ 50+ ಸ್ಕೋರ್​ಗಳ ಜೊತೆಯಾಟವಾಡಿದ ಅಲೆಕ್ಸ್ ಹೇಲ್ಸ್ ಅವರ ವಿಶ್ವ ದಾಖಲೆಯನ್ನು ಕಿಂಗ್ ಕೊಹ್ಲಿ ಸರಿಗಟ್ಟಿದ್ದಾರೆ. (PC: IPL)

4 / 5
ಇನ್ನು ಈ ಪಂದ್ಯದಲ್ಲಿ ಬಾರಿಸಿದ 58 ರನ್​ಗಳೊಂದಿಗೆ ವಿರಾಟ್ ಕೊಹ್ಲಿ ಈ ಬಾರಿಯ ಐಪಿಎಲ್​ನಲ್ಲಿ 500 ರನ್​ಗಳನ್ನು ಪೂರೈಸಿದ್ದಾರೆ.  ಈ ಮೂಲಕ ಐಪಿಎಲ್ ಇತಿಹಾಸದಲ್ಲಿ 9 ಬೇರೆ ಬೇರೆ ಸೀಸನ್‌ಗಳಲ್ಲಿ 500ಕ್ಕೂ ಹೆಚ್ಚು ರನ್ ಗಳಿಸಿದ ಏಕೈಕ ಬ್ಯಾಟರ್ ಎಂಬ ದಾಖಲೆಯನ್ನು ಕೂಡ ಕಿಂಗ್ ಕೊಹ್ಲಿ ತಮ್ಮದಾಗಿಸಿಕೊಂಡಿದ್ದಾರೆ. (PC: IPL)

5 / 5
ಝಾಹಿರ್ ಯೂಸುಫ್
ಝಾಹಿರ್ ಯೂಸುಫ್

ಟಿವಿ9 ಡಿಜಿಟಲ್ ಮುಖ್ಯ ಉಪ ಸಂಪಾದಕ. 10 ವರ್ಷಗಳಿಂದ ಕನ್ನಡ ಡಿಜಿಟಲ್​ ಮಾಧ್ಯಮದಲ್ಲಿ ಪತ್ರಿಕಾ ವೃತ್ತಿ. ಕ್ರೀಡಾ ಸುದ್ದಿ, ದೀರ್ಘ ಲೇಖನ, ವಿಶ್ಲೇಷಣೆ, ಹೀಗೆ ಎಲ್ಲ ತರಹದ ಬರಹದಲ್ಲೂ ಅನುಭವ. ಪ್ರಸ್ತುತ ವಿದ್ಯಮಾನಗಳ ವ್ಯಾಖ್ಯಾನ, ಚರ್ಚೆಯಲ್ಲಿ ನೈಪುಣ್ಯ. ಈ ಹಿಂದೆ ಉದಯವಾಣಿ, ನ್ಯೂಸ್ 18 ಕನ್ನಡ ಡಿಜಿಟಲ್​​ನಲ್ಲಿ ಕೆಲಸ ಮಾಡಿದ ಅನುಭವ. ಆಸಕ್ತಿದಾಯಕ ವಿಷಯ ಕ್ರೀಡೆ, ಸಿನಿಮಾ ಮತ್ತು ರಾಜಕೀಯ.

Read More
Follow Us
ಮೈಸೂರು ಅರಮನೆಗೆ ಭೇಟಿ ನೀಡಿದ ನಟಿ ಕಾಜಲ್ ಅಗರ್ವಾಲ್; ಗತವೈಭವ ಕಂಡು ಬೆರಗು

ಬಿಗ್ ಬಾಸ್ ಮನೆಯಲ್ಲಿ ಗಂಧರ್ವರು vs ರಾಕ್ಷಸರು; ಮಂಜು ಅಬ್ಬರ

ಇಂದು ಈ ರಾಶಿಯವರು ಸಾಲದ ವಿಚಾರದಲ್ಲಿ ಸ್ವಲ್ಪ ಜಾಗೃತರಾಗಿರಿ

ಬೆಂಗಳೂರಿನಾದ್ಯಂತ ವರುಣಾರ್ಭಟ: ರಾತ್ರಿ ಮಳೆಗೆ ರಸ್ತೆಗಳು ಜಲಾವೃತ

ಮುಂಬೈನ ಡಿಪೋದಲ್ಲಿ ಭಾರೀ ಬೆಂಕಿ ಅವಘಡ; ಧಗಧಗನೆ ಹೊತ್ತಿ ಉರಿದ ಬಸ್‌ಗಳು

ಶಿವರಾಜ್‌ಕುಮಾರ್ ಆಗಮನ ವೇಳೆ ಪಟಾಕಿ ಸ್ಫೋಟ; ತಪ್ಪಿದ ದೊಡ್ಡ ಅಪಾಯ

ಹೆಚ್ಚಿತು ಗಾನವಿ, ಯಶಸ್ ನಡುವಿನ ಆಪ್ತತೆ; ಸೌಂದರ್ಯಾ ಶೆಟ್ಟಿ ಕಥೆ ಏನು?

‘ಹೆದ್ದಾರಿ ವಿಸ್ತರಣೆಗೆ 2,326 ಮರಗಳಿಗೆ ಕೊಡಲಿ ಪೆಟ್ಟು’

ಸಿಎಂ ಸ್ಥಾನಕ್ಕೆ ರಾಜೀನಾಮೆ ಕೊಟ್ಟ ಪ್ರಸಂಗ ಬಿಚ್ಚಿಟ್ಟ ಸಿದ್ದರಾಮಯ್ಯ

ಕರ್ನಾಟಕ ಮುಖ್ಯ ಚುನಾವಣಾಧಿಕಾರಿ ತುರ್ತು ಸುದ್ದಿಗೋಷ್ಠಿ ಲೈವ್