AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮೈಕ್ರೋಸಾಫ್ಟ್ ಎಐ ಮುಖ್ಯಸ್ಥರ ಎಚ್ಚರಿಕೆ; ಇನ್ನು, 12-18 ತಿಂಗಳಲ್ಲಿ ಇನ್ನಿಲ್ಲವಾಗುತ್ತವಂತೆ ವೈಟ್ ಕಾಲರ್ ಜಾಬ್​ಗಳು

AI to Eliminate White-Collar Jobs by 2027, Says Mustafa Suleyman: ಕೃತಕ ಬುದ್ಧಿಮತ್ತೆಯಿಂದ (AI) ಉದ್ಯೋಗ ನಷ್ಟವಾಗುವ ಭೀತಿಯನ್ನು ಮೈಕ್ರೋಸಾಫ್ಟ್‌ನ ಮುಸ್ತಾಫ ಸುಲೇಮಾನ್ ದೃಢಪಡಿಸಿದ್ದಾರೆ. ಅವರ ಪ್ರಕಾರ, ಮುಂದಿನ 12-18 ತಿಂಗಳಲ್ಲಿ ವೈಟ್ ಕಾಲರ್ ಕೆಲಸಗಳು (ಉದಾ: ಅಕೌಂಟೆಂಟ್, ಲಾಯರ್) ಇಲ್ಲವಾಗುತ್ತವೆ. 2027ರೊಳಗೆ AI ಹೆಚ್ಚಿನ ಕಾರ್ಪೊರೇಟ್ ಕಾರ್ಯಗಳನ್ನು ನಿರ್ವಹಿಸಲಿದೆ. ಸಾಮಾನ್ಯರೂ ಸುಲಭವಾಗಿ AI ಸಿಸ್ಟಂಗಳನ್ನು ರಚಿಸುವಂತಾಗಿದ್ದು, ಇದು ಉದ್ಯೋಗ ಮಾರುಕಟ್ಟೆಯಲ್ಲಿ ದೊಡ್ಡ ಬದಲಾವಣೆ ತರಲಿದೆ.

ಮೈಕ್ರೋಸಾಫ್ಟ್ ಎಐ ಮುಖ್ಯಸ್ಥರ ಎಚ್ಚರಿಕೆ; ಇನ್ನು, 12-18 ತಿಂಗಳಲ್ಲಿ ಇನ್ನಿಲ್ಲವಾಗುತ್ತವಂತೆ ವೈಟ್ ಕಾಲರ್ ಜಾಬ್​ಗಳು
ಕೃತಕ ಬುದ್ಧಿಮತ್ತೆImage Credit source: Getty Images
ಸುಗ್ಗನಹಳ್ಳಿ ವಿಜಯಸಾರಥಿ
|

Updated on: May 18, 2026 | 5:16 PM

Share

ನವದೆಹಲಿ, ಮೇ 18: ಕೃತಕ ಬುದ್ಧಿಮತ್ತೆಯಿಂದ (AI) ಮನುಷ್ಯರಿಗೆ ಕೆಲಸ ಇಲ್ಲವಾಗುತ್ತವೆ ಎನ್ನುವ ವಿಚಾರದ ಬಗ್ಗೆ ಪರಿಣಿತರಲ್ಲೇ ಮಿಶ್ರ ಅನಿಸಿಕೆಗಳಿವೆ. ಹಲವರು ಎಐನಿಂದ ಉದ್ಯೋಗನಷ್ಟವಾಗುವುದೆಲ್ಲಾ ಸುಳ್ಳು ಒಂದು ವರ್ಗ ಹೇಳುತ್ತಿದೆ. ಎಐನಿಂದ ಸಿಕ್ಕಾಪಟ್ಟೆ ಜನರು ಕೆಲಸ ಕಳೆದುಕೊಳ್ಳುತ್ತಾರೆ ಎಂದು ಇನ್ನೊಂದು ವರ್ಗ ಹೇಳುತ್ತಿದೆ. ಸ್ಯಾಮ್ ಆಲ್ಟ್​ಮ್ಯಾನ್, ಡೇರಿಯೋ ಅಮೋಡೇ, ಇಲಾನ್ ಮಸ್ಕ್ ಮೊದಲಾದವರು ಇದೇ ಅನಿಸಿಕೆ ಹೊಂದಿದ್ದಾರೆ. ಮೈಕ್ರೋಸಾಫ್ಟ್​ನ ಎಐ ವಿಭಾಗದ ಮುಖ್ಯಸ್ಥ ಮುಸ್ತಾಫ ಸುಲೇಮಾನ್ (Mustafa Suleyman) ಅವರೂ ಈ ಅಭಿಪ್ರಾಯಕ್ಕೆ ಧ್ವನಿಗೂಡಿಸಿದ್ದಾರೆ. ಅವರ ಪ್ರಕಾರ ಇನ್ನು 12-18 ತಿಂಗಳಲ್ಲಿ ವೈಟ್ ಕಾಲರ್ ಉದ್ಯೋಗಗಳೇ ಇಲ್ಲವಾಗುತ್ತವಂತೆ.

ಈ ಸುದ್ದಿಯ ಮುಖ್ಯಾಂಶಗಳು

  • ಎಐನಿಂದ ಹೆಚ್ಚಿನ ಜನರು ಉದ್ಯೋಗ ಕಳೆದುಕೊಳ್ಳುತ್ತಾರೆ ಎನ್ನುವ ಅಭಿಪ್ರಾಯಕ್ಕೆ ಮೈಕ್ರೋಸಾಫ್ಟ್ ಎಐ ವಿಭಾಗದ ಮುಖ್ಯಸ್ಥ ಮುಸ್ತಾಫ ಸುಲೇಮಾನ್ ಧ್ವನಿಗೂಡಿಸಿದ್ದಾರೆ.
  • ಇನ್ನು 12-18 ತಿಂಗಳಲ್ಲಿ ವೈಟ್ ಕಾಲರ್ ಜಾಬ್​ಗಳು ಇಲ್ಲವಾಗುತ್ತವೆ. ಅಕೌಂಟೆಂಟ್, ಲಾಯರ್ ಮತ್ತು ಮಾರ್ಕೆಟಿಂಗ್ ಕೆಲಸಗಳು ಇಲ್ಲದಂತಾಗುತ್ತವಂತೆ.
  • 2027ರರೊಳಗೆ ಮನುಷ್ಯರು ಮಾಡುವಂತಹ ಹೆಚ್ಚಿನ ವೈಟ್ ಕಾಲರ್ ಕೆಲಸಗಳನ್ನು ಎಐ ನಿರ್ಮಿಸಬಲ್ಲುದು ಎಂದು ಸುಲೇಮಾನ್ ಹೇಳುತ್ತಾರೆ.

ಇದನ್ನೂ ಓದಿ: ಬೈಕು, ಬಸ್ಸು, ಕಾರು, ರೈಲು, ಹೀಗೆ ನೀವು ಯಾವುದರಲ್ಲಿ ಪ್ರಯಾಣಿಸಿದ್ದು ಎಂಬುದು ಗೂಗಲ್​ಗೆ ಗೊತ್ತಾಗೋದು ಹೇಗೆ?

ವೈಟ್ ಕಾಲರ್ ಕೆಲಸಗಳು ಯಾವುವು?

ಕಚೇರಿ ಅಥವಾ ಕಾರ್ಪೊರೇಟ್ ಸಂಸ್ಥೆಗಳಲ್ಲಿ ವೃತ್ತಿಪರ, ಆಡಳಿತಾತ್ಮಕ ಮತ್ತು ನಿರ್ವಹಣಾತ್ಮಕ ಕೆಲಸಗಳನ್ನು ವೈಟ್ ಕಾಲರ್ ಜಾಬ್​ಗಳೆಂದು ಗಣಿಸಲಾಗುತ್ತದೆ. ಉದಾಹರಣೆಗೆ, ಐಟಿ ಕ್ಷೇತ್ರದ ಉದ್ಯೋಗಗಳು, ಫಿನಾನ್ಸ್, ಅಕೌಂಟಿಂಗ್, ಕಾರ್ಪೊರೇಟ್ ಮ್ಯಾನೇಜ್ಮೆಂಟ್, ವಕೀಲರು, ಲೀಗಲ್ ಅಡ್ವೈಸರ್​ಗಳು, ಪ್ರಾಜೆಕ್ಟ್ ಮ್ಯಾನೇಜ್ಮೆಂಟ್ ಇತ್ಯಾದಿ ವರ್ಗದ ಕೆಲಸಗಳು ವೈಟ್ ಕಾಲರ್ ಜಾಬ್ ಎನಿಸುತ್ತವೆ.

ಪ್ಲಂಬರ್, ಎಲೆಕ್ಟ್ರಿಶಿಯನ್, ಕಟ್ಟಡ ಕಾರ್ಮಿಕರು, ಕುಶಲಕರ್ಮಿಗಳು ಇತ್ಯಾದಿ ಮನುಷ್ಯರ ದೈಹಿಕ ಶ್ರಮ ಮತ್ತು ಕೌಶಲ್ಯ ಬೇಡುವ ಕೆಲಸಗಳನ್ನು ಬ್ಲೂ ಕಾಲರ್ ಜಾಬ್ ಎನ್ನುತ್ತಾರೆ. ಎಐ ಹೊಡೆತದಲ್ಲಿ ಹೆಚ್ಚು ದಿನ ಉಳಿಯುವುದು ಬ್ಲೂ ಕಾಲರ್ ಜಾಬ್​ಗಳೇ ಎನ್ನುವುದು ತಜ್ಞರ ಅನಿಸಿಕೆ.

ಎಐ ಏಜೆಂಟ್​ಗಳು ನುಗ್ಗುತ್ತವೆ ಹುಷಾರ್..!

ಮೈಕ್ರೋಸಾಫ್ಟ್ ಎಐ ಡಿವಿಶನ್ ಮುಖ್ಯಸ್ಥರ ಪ್ರಕಾರ ಮುಂದಿನ ಎರಡ್ಮೂರು ವರ್ಷಗಳಲ್ಲಿ ಎಐ ಏಜೆಂಟ್​ಗಳು ಯಾವುದೇ ಕಂಪನಿಯ ವರ್ಕ್​ಫ್ಲೋ ಅನ್ನು ನಿರ್ವಹಿಸಲು ಆರಂಭಿಸುವಷ್ಟು ಶಕ್ತವಾಗಿರಲಿವೆ. ಮನುಷ್ಯರ ಅವಶ್ಯಕತೆ ಇಲ್ಲದಂತೆ ಅವುಗಳೇ ನಿರ್ಧಾರ ತೆಗೆದುಕೊಳ್ಳಬಲ್ಲುವಂತೆ.

ಇದನ್ನೂ ಓದಿ: ಅತ್ಯಂತ ಮೌಲ್ಯಯುತ ಭಾರತೀಯ ಕಂಪನಿಗಳು; ರಿಲಾಯನ್ಸ್ ನಂತರ ಏರ್ಟೆಲ್; ಎಚ್​ಡಿಎಫ್​ಸಿಯನ್ನು ಹಿಂದಿಕ್ಕಿದ ಭಾರತೀಯ ಟೆಲಿಕಾಂ ಕಂಪನಿ

ಪೋಡ್​ಕ್ಯಾಸ್ಟ್ ಮಾಡಿದಷ್ಟೇ ಸುಲಭವಾಗಿ ಎಐ ಸಿಸ್ಟಂಗಳ ನಿರ್ಮಾಣ ಸಾಧ್ಯ

ಎಐ ಸಿಸ್ಟಂಗಳು ಎಲ್ಲರಿಗೂ ಕೈಗೆಟಕುವಂತಿರುತ್ತವೆ. ಸಾಮಾನ್ಯ ಜನರೂ ಕೂಡ ಯಾವುದೇ ಪರಿಣತಿ ಇಲ್ಲದಿದ್ದರೂ ತಮ್ಮದೇ ಎಐ ಸಿಸ್ಟಂಗಳನ್ನು ಸೃಷ್ಟಿಸಲು ಸಾಧ್ಯವಾಗುತ್ತದೆ ಎಂದು ಹೇಳುವ ಮುಸ್ತಫಾ ಸುಲೇಮಾನ್, ಅದನ್ನು ಡಿಜಿಟಲ್ ಕಂಟೆಂಟ್ ಕ್ರಿಯೇಟ್ ಮಾಡುವ ಕೆಲಸಕ್ಕೆ ಹೋಲಿಸುತ್ತಾರೆ.

ಗ್ರಾಹಕೀಯವಾದ ಎಐ ಮಾಡಲ್ ಅನ್ನು ಸೃಷ್ಟಿಸುವುದು ಒಂದು ಬ್ಲಾಗ್ ಬರೆದಷ್ಟೇ ಸುಲಭವಾಗಿರುತ್ತದೆ. ಇದರಿಂದ ವ್ಯಕ್ತಿಗಳು, ಸಂಸ್ಥೆಗಳು ತಮಗೆ ಅಗತ್ಯ ಇರುವ ಕಾರ್ಯಗಳಿಗೆ ನೆರವಾಗುವ ಎಐ ಟೂಲ್​ಗಳನ್ನು ಅವರೇ ರಚಿಸಬಲ್ಲುವು ಎಂದೆನ್ನುತ್ತಾರೆ ಅವರು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Follow Us
ಗ್ಯಾಂಗ್​ಸ್ಟರ್ ಸಂದೀಪ್​ಗೆ ಡ್ರಮ್ ಬಾರಿಸಿ ಸ್ವಾಗತ ಕೋರಿದ ಗ್ರಾಮಸ್ಥರು
ಗ್ಯಾಂಗ್​ಸ್ಟರ್ ಸಂದೀಪ್​ಗೆ ಡ್ರಮ್ ಬಾರಿಸಿ ಸ್ವಾಗತ ಕೋರಿದ ಗ್ರಾಮಸ್ಥರು
ಬೆಂಗಳೂರಿನ ಹಲವೆಡೆ ತಡರಾತ್ರಿ ಮಳೆ ಅಬ್ಬರ: ವಾಹನ ಸವಾರರ ಪರದಾಟ
ಬೆಂಗಳೂರಿನ ಹಲವೆಡೆ ತಡರಾತ್ರಿ ಮಳೆ ಅಬ್ಬರ: ವಾಹನ ಸವಾರರ ಪರದಾಟ
ರವಿ ಕನ್ಯಾ, ಚಂದ್ರ ಧನು ರಾಶಿಯಲ್ಲಿ ಸಂಚಾರ: 12 ರಾಶಿಗಳ ಇಂದಿನ ದಿನ ಭವಿಷ್ಯ
ರವಿ ಕನ್ಯಾ, ಚಂದ್ರ ಧನು ರಾಶಿಯಲ್ಲಿ ಸಂಚಾರ: 12 ರಾಶಿಗಳ ಇಂದಿನ ದಿನ ಭವಿಷ್ಯ
ಸಾಮೂಹಿಕ ಗಣೇಶ ವಿಸರ್ಜನೆ ವೇಳೆ ಕೋಮು ಸೌಹಾರ್ದತೆ ಮೆರೆದ ಮುಸ್ಲಿಂ ಬಾಂಧವರು
ಸಾಮೂಹಿಕ ಗಣೇಶ ವಿಸರ್ಜನೆ ವೇಳೆ ಕೋಮು ಸೌಹಾರ್ದತೆ ಮೆರೆದ ಮುಸ್ಲಿಂ ಬಾಂಧವರು
ಬದರಿನಾಥದ ಮಹಿಳೆಯರ ಜೊತೆ ಜಾನಪದ ನೃತ್ಯ ಮಾಡಿದ ಸಿಎಂ ಪುಷ್ಕರ್ ಸಿಂಗ್ ಧಾಮಿ!
ಬದರಿನಾಥದ ಮಹಿಳೆಯರ ಜೊತೆ ಜಾನಪದ ನೃತ್ಯ ಮಾಡಿದ ಸಿಎಂ ಪುಷ್ಕರ್ ಸಿಂಗ್ ಧಾಮಿ!
ವೇದಿಕೆ ಮೇಲೆಯೇ ಶಿಡ್ಲಘಟ್ಟ ತಹಶೀಲ್ದಾರ್​​ಗೆ ಡಿಸಿ ಕ್ಲಾಸ್
ವೇದಿಕೆ ಮೇಲೆಯೇ ಶಿಡ್ಲಘಟ್ಟ ತಹಶೀಲ್ದಾರ್​​ಗೆ ಡಿಸಿ ಕ್ಲಾಸ್
ಸಿನಿಮಾ ಸೆನ್ಸಾರ್​​ಗೆ ಹೊಸ ಮಾರ್ಗಸೂಚಿ: ಇಲ್ಲಿದೆ ಪೂರ್ಣ ಮಾಹಿತಿ ವಿಡಿಯೋ
ಸಿನಿಮಾ ಸೆನ್ಸಾರ್​​ಗೆ ಹೊಸ ಮಾರ್ಗಸೂಚಿ: ಇಲ್ಲಿದೆ ಪೂರ್ಣ ಮಾಹಿತಿ ವಿಡಿಯೋ
ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿಕೆಗೆ ಹೆಚ್.ಸಿ. ಮಹದೇವಪ್ಪ ಟಾಂಗ್
ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿಕೆಗೆ ಹೆಚ್.ಸಿ. ಮಹದೇವಪ್ಪ ಟಾಂಗ್
ಜಪಾನ್ ವಾಯುಪಡೆ ಮುಖ್ಯಸ್ಥರಿಂದ ಭಾರತದ ತೇಜಸ್ ಯುದ್ಧವಿಮಾನ ಹಾರಾಟ
ಜಪಾನ್ ವಾಯುಪಡೆ ಮುಖ್ಯಸ್ಥರಿಂದ ಭಾರತದ ತೇಜಸ್ ಯುದ್ಧವಿಮಾನ ಹಾರಾಟ
ಎಲಿಮಿನೇಷನ್​​​ಗೆ ಮುನ್ನ ಬಿಗ್​​ಬಾಸ್ ಮನೆಯಲ್ಲಿ ನಗುವೋ ನಗು: ವಿಡಿಯೋ
ಎಲಿಮಿನೇಷನ್​​​ಗೆ ಮುನ್ನ ಬಿಗ್​​ಬಾಸ್ ಮನೆಯಲ್ಲಿ ನಗುವೋ ನಗು: ವಿಡಿಯೋ