- Kannada News Photo gallery Bengaluru Police's Vintage Car Rally: Boosting Drug Awareness Among Youth
ವಿಧಾನ ಸೌಧದ ಮುಂದೆ ಗಮನ ಸೆಳೆದ ವಿಂಟೇಜ್ ಬ್ಯೂಟಿಗಳು; ಡ್ರಗ್ಸ್ ಬಗ್ಗೆ ಅರಿವು ಮೂಡಿಸಲು ಪೊಲೀಸರ ಹೊಸ ಪ್ರಯತ್ನ
ಬೆಂಗಳೂರು ಪೊಲೀಸರು ಯುವ ಸಮೂಹದಲ್ಲಿ ಹೆಚ್ಚುತ್ತಿರುವ ಮಾದಕ ವಸ್ತುಗಳ ಬಳಕೆಯ ವಿರುದ್ಧ ಜಾಗೃತಿ ಮೂಡಿಸಲು ಭಾನುವಾರ ವಿಶಿಷ್ಟ ವಿಂಟೇಜ್ ಕಾರ್ ರ್ಯಾಲಿ ಆಯೋಜಿಸಿದ್ದರು. "ಮಾದಕ ಮುಕ್ತ ಕರ್ನಾಟಕ" ಸಂದೇಶದೊಂದಿಗೆ ನಡೆದ ಈ ಅಭಿಯಾನದಲ್ಲಿ 75ಕ್ಕೂ ಹೆಚ್ಚು ವಿಂಟೇಜ್ ವಾಹನಗಳು ಪಾಲ್ಗೊಂಡಿದ್ದವು. ಗೃಹ ಸಚಿವರು ಚಾಲನೆ ನೀಡಿದ ಈ ಕಾರ್ಯಕ್ರಮವು ಯುವಕರನ್ನು ಮಾದಕ ವ್ಯಸನದಿಂದ ದೂರವಿರಿಸುವ ಗುರಿ ಹೊಂದಿದೆ.
Updated on: Dec 08, 2025 | 9:05 AM

ಬೆಂಗಳೂರು ಪೊಲೀಸರು ನಿರಂತರವಾಗಿ ಡ್ರಗ್ಸ್ ವಿರುದ್ಧ ಸಮರ ಸಾರಿದ್ದು, ದಾಖಲೆ ಪ್ರಮಾಣದಲ್ಲಿ ಸೀಜ್ ಮಾಡಿ ಪೆಡ್ಲರ್ ಗಳ ಜೈಲಿಗಟ್ಟಿದ್ದಾರೆ. ಆಗಾಗ್ಗೆ ವಿಭಿನ್ನವಾಗಿ ಜಾಗೃತಿ ಮೂಡಿಸ್ತಿರುವ ಪೊಲೀಸ್ರು ಡಿ.07 ರಂದು ವಿಂಟೇಜ್ ಕಾರುಗಳ ರ್ಯಾಲಿ ಮೂಲಕ ಯುವಕರಿಗೆ ಜಾಗೃತಿ ಮೂಡಿಸಿದರು.ಈ ವಿನೂತನ ಜಾಗೃತಿ ಕಾರ್ಯಕ್ರಮಕ್ಕೆ ವಿಧಾನಸೌಧದ ಮೆಟ್ಟಿಲುಗಳ ಮುಂಭಾಗದಲ್ಲಿ ಗೃಹ ಸಚಿವ ಪರಮೇಶ್ವರ್ ಚಾಲನೆ ನೀಡಿದರು.

ಮಾದಕ ವಸ್ತುಗಳ ಬಳಕೆಯು ಯುವ ಸಮೂಹದಲ್ಲಿ ಹೆಚ್ಚಾಗ್ತಿದೆ. ಈ ಹಿನ್ನೆಲೆ ಮಾದಕ ವ್ಯಸನದಿಂದ ಆಗುವ ಪರಿಣಾಮಗಳ ಕುರಿತು ವೆರೈಟಿ ವೆರೈಟಿ ವಿಂಟೇಜ್ ಕಾರುಗಳ ರ್ಯಾಲಿ ಮಾಡಿದ್ದು, ಆಂಬ್ಯಾಸಿಡರ್, ಆಸ್ಟಿನ್, ಬೀಟಲ್, ಫಿಯೆಟ್, ಮರ್ಸಿಡಿಸ್ ಬೆನ್ಜ್, ಮಿನಿಕೂಪರ್, ಫ್ಲೀಟ್ ಮಾಸ್ಟರ್, ಫೋರ್ಡ್, ರೋಡ್ ರೋಸ್ಟರ್, ಜಾವಾ ಮೋಟರ್ ಬೈಕ್,ರಾಯಲ್ ಎನ್‌ಫೀಲ್ಡ್ ಸೇರಿದಂತೆ 75 ಕ್ಕೂ ಹೆಚ್ಚು ಗಾಡಿಗಳು ರಸ್ತೆಯಲ್ಲಿ ರ್ಯಾಲಿ ನಡೆಸಿದವು.

ಮಾದಕ ವಸ್ತು ಮುಕ್ತ ಕರ್ನಾಟಕ (drug free karnataka) ಅನ್ನೋ ಟ್ಯಾಗ್ ಲೈನ್ ಮೂಲಕ ಬೆಂಗಳೂರು ನಗರ ಪೊಲೀಸ್ ಇಲಾಖೆ ಮತ್ತು ಫೆಡರೇಷನ್ ಆಫ್ ಹಿಸ್ಟೋರಿಕ್ ವೆಹಿಕಲ್ಸ್ ಆಫ್ ಇಂಡಿಯಾ ಸಹಯೋಗದಲ್ಲಿ ನಿನ್ನೆ ಬೆಳಗ್ಗೆ ವಿಂಟೇಜ್ ಕಾರ್ ರ‍್ಯಾಲಿ ಅಭಿಯಾನದಲ್ಲಿ ಸೇ ನೋ ಟು ಡ್ರಗ್ ಜಾಗೃತಿ ಮೂಡಿಸಲಾಯಿತು.

ಮಾದಕ ಜಾಲದ ವಿರುದ್ಧ ನಿರಂತರವಾಗಿ ಹೋರಾಟ ನಡೆಸ್ತಿರುವ ಪೊಲೀಸ್ ಇಲಾಖೆ ಕಳೆದ 2 ವರ್ಷದಲ್ಲಿ 300 ಕೋಟಿಗೂ ಅಧಿಕ ಮೌಲ್ಯದ ಡ್ರಗ್ ವಶಪಡಿಸಿಕೊಂಡು ನಾಶಪಡಿಸಿದೆ. ಸಾವಿರಾರು ಜನ ಆರೋಪಿಗಳನ್ನ ಬಂಧಿಸಲಾಗಿದೆ.ಯುವ ಸಮುದಾಯ, ಟೆಕ್ಕಿಗಳು ಮಾದಕಗಳ ವ್ಯೂಹದಲ್ಲಿ ಸಿಲುಕಬಾರದು ಎಂದು ಹೋಂ ಮಿನಿಸ್ಟರ್ ಹೇಳಿದರು.

ವಿಂಟೇಜ್ ರ‍್ಯಾಲಿಯಲ್ಲಿ 70ಕ್ಕೂ ಅಧಿಕ ವಿಂಟೇಜ್ ಕಾರುಗಳು, ಬೈಕ್‌ಗಳ ಮಾಲೀಕರು ಭಾಗಿಯಾಗಿದ್ದರು. ವಿಧಾನಸೌಧದಿಂದ ಹೊರಟ ವಿಂಟೇಜ್ ಕಾರುಗಳ ಆಕರ್ಷಕ ರ್ಯಾಲಿ ಎಂಜಿ ರೋಡ್, ಬ್ರಿಗೆಡ್ ರೋಡ್, ವಿಟಲ್ ಮಲ್ಯ ರಸ್ತೆ, ಮೈಸೂರು ರಸ್ತೆಯ ಮೂಲಕ ಬಿಗ್ ಬನಿಯಾನ್ ವೈನ್‌ಯಾರ್ಡ್ ಅಂಡ್ ರೆಸಾರ್ಟ್ ತನಕ ಸಾಗಿತು. ಒಟ್ಟಾರೆ ನಗರದಲ್ಲಿ ಡ್ರಗ್ ಮಾಫಿಯಾ ಬಗ್ಗೆ ಎಚ್ಚರವಹಿಸುವ ಕೆಲಸವನ್ನ ಪೊಲೀಸ್ ಇಲಾಖೆ ನಿರತವಾಗಿದೆ.



