Bhoganandishwara Temple: ಜಿ 20 ಶೃಂಗಸಭೆ ಆತಿಥ್ಯಕ್ಕೆ ಭೋಗನಂದೀಶ್ವರ ದೇಗುಲಕ್ಕೆ ಬೆಳಕಿನ ಮೆರಗು, ಸುಂದರ ಫೋಟೊಗಳಿವೆ
ಭಾರತ ವಿಶ್ವಗುರು ಆಗ್ತಿದೆ..ಮುಂದಿನ ವರ್ಷ ನಡೆಯಲಿರೋ ಜಿ20 ಶೃಂಗಸಭೆಯ ಕ್ಯಾಪ್ಟನ್ ಆಗ್ತಿದೆ. ಈ ಸಂಭ್ರದ ಕ್ಷಣಕ್ಕೆ ನಾಡಿನ ಸ್ಮಾರಕಗಳೆಲ್ಲಾ ಸಾಕ್ಷಿಯಾಗಿವೆ. ವಿದ್ಯುತ್ ದೀಪಾಲಂಕಾರದಿಂದ ಕಂಗೊಳಿಸುತ್ತಿವೆ.
Updated on: Dec 08, 2022 | 8:00 AM

bhoga nandeeshwara temple decorated with lights over G20 in india

bhoga nandeeshwara temple decorated with lights over G20 in india

ದೇವಸ್ಥಾನದ ಅರುಣಾಚಲೇಶ್ವರ, ಭೋಗನಂದೀಶ್ವರ ಗೋಪುರಗಳು ಸೇರಿದಂತೆ ಒಳಾಂಗಣ ಪ್ರಾಂಗಣಕ್ಕೆ ಕಲರ್ ಪುಲ್ ಲೈಟಿಂಗ್ ವ್ಯವಸ್ಥೆ ಮಾಡಲಾಗಿದೆ.

ಭೋಗನಂದೀಶ್ವರ ದೇವಸ್ಥಾನದ ಭಿತ್ತಿಗಳು, ಪಡಸಾಲೆ, ಮಂಟಪ, ಆವರಣದಲ್ಲಿನ ಎಲ್ಲಾ ದೇವಸ್ಥಾನಗಳು ಸೇರಿದಂತೆ ಹೊರಾಂಗಣದ ಸ್ಮಾರಕಗಳು ಕೂಡಾ ವಿದ್ಯುತ್ ದೀಪಗಳಿಂದ ಕಂಗೊಳಿಸುತ್ತಿವೆ.

ಕಲರ್ಫುಲ್ ಲೈಟಿಂಗ್ ನಲ್ಲಿ ದೇವಸ್ಥಾನದ ಶಿಲ್ಪಕಲಾ ಸೌಂದರ್ಯ ಡ್ರೋಣ್ ಕ್ಯಾಮರಾದಲ್ಲಿ ಸೆರೆಯಾಗಿದ್ದು, ನೋಡಲು ಎರಡು ಕಣ್ಣುಗಳು ಸಾಲ್ತಿಲ್ಲ, ಈಗ ಅಳವಡಿಸಿರುವ ಲೈಟಿಂಗ್ ನ್ನು ವರ್ಷಪೂರ್ತಿ ಮುಂದುವರೆಸುವಂತೆ ಸ್ಥಳಿಯರು ಒತ್ತಾಯ ಮಾಡಿದ್ದಾರೆ.

ಶೃಂಗಸಭೆಯ ಸದಸ್ಯ ರಾಷ್ಟ್ರಗಳ ಗಣ್ಯರು ಒಂದು ವೇಳೆ ದೇವಸ್ಥಾನಕ್ಕೆ ಭೇಟಿ ನೀಡಿದ್ರೂ ದೇಶದ ಭವ್ಯ ಪರಂಪರೆ, ಶ್ರೀಮಂತ ಇತಿಹಾಸಕ್ಕೆ ಯಾವುದೆ ಅಡಚಣೆಯಾಗದಂತೆ ದೇವಸ್ಥಾನವನ್ನು ಮತ್ತಷ್ಟು ಕಂಗೊಳಿಸುವಂತೆ ಮಾಡಲಾಗಿದೆ



















