Bidar Utsav 2023: ಜನವರಿ 7 ರಿಂದ 9 ರವರೆಗೆ ಬೀದರ್ ಉತ್ಸವ

Edited By: ಆಯೇಷಾ ಬಾನು

Updated on: Dec 31, 2022 | 7:32 AM

ಒಂದು ದಶಕದ ಬಳಿಕ ಬೀದರ್ ಉತ್ಸವವನ್ನ ಅದ್ದೂರಿಯಾಗಿ ಆಚರಿಸಲು ನಿರ್ಧರಿಸಲಾಗಿದ್ದು, ಜನವರಿ 7 ರಿಂದ 9 ರವರೆಗೆ ನಡೆಯಲಿದೆ.

1 / 5
ಒಂದು ದಶಕದ ಬಳಿಕ ಬೀದರ್ ಉತ್ಸವವನ್ನ ಅದ್ದೂರಿಯಾಗಿ ಆಚರಿಸಲು ನಿರ್ಧರಿಸಲಾಗಿದ್ದು, ಜನವರಿ 7 ರಿಂದ 9 ರವರೆಗೆ ನಡೆಯಲಿದೆ. ಹೀಗಾಗಿ ಬೀದರ್ ಓಲ್ಡ್ ಸಿಟಿಯಲ್ಲಿರುವ ಸರಕಾರಿ ಪ್ರೌಢ ಶಾಲೆಯ ಗೋಡೆಗಳ ಮೇಲೆ ಚಿತ್ರಕಲಾ ಶಿಕ್ಷಕರಿಂದ ಜಿಲ್ಲೆಯ ಐತಿಹಾಸಿಕ ಸ್ಥಳಗಳ ಚಿತ್ರಗಳನ್ನ ಬಿಡಿಸಲಾಗುತ್ತಿದೆ.

ಒಂದು ದಶಕದ ಬಳಿಕ ಬೀದರ್ ಉತ್ಸವವನ್ನ ಅದ್ದೂರಿಯಾಗಿ ಆಚರಿಸಲು ನಿರ್ಧರಿಸಲಾಗಿದ್ದು, ಜನವರಿ 7 ರಿಂದ 9 ರವರೆಗೆ ನಡೆಯಲಿದೆ. ಹೀಗಾಗಿ ಬೀದರ್ ಓಲ್ಡ್ ಸಿಟಿಯಲ್ಲಿರುವ ಸರಕಾರಿ ಪ್ರೌಢ ಶಾಲೆಯ ಗೋಡೆಗಳ ಮೇಲೆ ಚಿತ್ರಕಲಾ ಶಿಕ್ಷಕರಿಂದ ಜಿಲ್ಲೆಯ ಐತಿಹಾಸಿಕ ಸ್ಥಳಗಳ ಚಿತ್ರಗಳನ್ನ ಬಿಡಿಸಲಾಗುತ್ತಿದೆ.

2 / 5

ಬೀದರ್ ನಗರದಲ್ಲಿರುವ ಐತಿಹಾಸಿಕ ಬೀದರ್ ಕೋಟೆ, ಮಹಮ್ಮದ್ ಗವಾನ್ ಮದರಸಾ, ಉಘ್ರನರಸಿಂಹ, ಗುರುದ್ವಾರ ಹೀಗೆ ಜಿಲ್ಲೆಯ ಬಹುತೇಕ ಐತಿಹಾಸಿಕ ಸ್ಥಳದ ಚಿತ್ರಗಳನ್ನ ಶಾಲೆಯ ಗೋಡೆಯ ಮೇಲೆ ಚಿತ್ರಿಸಲಾಗುತ್ತಿದೆ.

3 / 5

ಇಲ್ಲಿ ಬಿಡಿಸಲಾಗಿರುವ ಚಿತ್ರಗಳನ್ನ ವಿಕ್ಷಿಸಲು ಜನವರಿ 3 ಹಾಗೂ 4 ರಂದು ಎರಡು ದಿನಗಳ ಕಾಲ ಶಾಲಾ ಮಕ್ಕಳಿಗೆ, ಸಾರ್ವಜನಿಕರಿಗೆ ಅವಕಾಶ ಕಲ್ಪಿಸಲಾಗಿದೆ. ಈ ಮೂಲಕ ಜಿಲ್ಲೆಯ ಪ್ರವಾಸೋದ್ಯಮವನ್ನ ಬೆಳೆಸುವ ನಿಟ್ಟಿನಲ್ಲಿ ಚಿತ್ರಕಲಾತ್ಸೋವ ಸಹಕಾರಿಯಾಗಲಿದೆ.

4 / 5

ಉತ್ಸವದ ಒಂದು ದಿನ ಮೊದಲು ಮ್ಯಾರಥಾನ್‌ ಓಟ ಇರುತ್ತದೆ. ಕಾರ್ಯಕ್ರಮದ ಮೊದಲ ದಿನ ಬೆಳಗ್ಗೆ ವಿವಿಧ ಕಲಾ ತಂಡಗಳೊಂದಿಗೆ ಮೆರವಣಿಗೆ ಆರಂಭವಾಗುತ್ತದೆ. ಪ್ರತಿ ದಿನ ಸಂಜೆ 6 ರಿಂದ 7.15 ರವರೆಗೆ ಸ್ಥಳೀಯ ಕಲಾವಿದರಿಗೆ ನಂತರ ರಾಜ್ಯದ ಕಲಾವಿದರು, ರಾಷ್ಟ್ರ ಮಟ್ಟದ ಕಲಾವಿದರಿಂದ ಕಾರ್ಯಕ್ರಮಗಳು ನಡೆಯಲಿವೆ.

5 / 5

ಈ ಉತ್ಸವದಲ್ಲಿ ರೈತ ಮೇಳ, ಪಶು ಮೇಳ, ಪುಸ್ತಕ ಮೇಳ, ಸಂಗೀತ ಮೇಳ, ಮಹಿಳಾ ಉತ್ಸವ, ಗಾಳಿಪಟ ಉತ್ಸವ, ವಿವಿಧ ಕ್ರೀಡೆಗಳು, ಸಾಂಸ್ಕೃತಿಕ ಕಾರ್ಯಕ್ರಮಗಳು ಸೇರಿದಂತೆ ಹಲವಾರು ಕಾರ್ಯಕ್ರಮಗಳು ನಡೆಯುತ್ತವೆ.

Published On - 7:32 am, Sat, 31 December 22

TV9 Web

TV9 Kannada

Read More
Loading...
Unable to load recommendations.
Follow Us