- Kannada News Photo gallery Bidar’s Marigamma Devi Fair Modeled After Puri Jagannath Festival: See Photos
ಪುರಿ ಜಗನ್ನಾಥ ಜಾತ್ರೆ ಮಾದರಿಯಲ್ಲಿ ನಡೆಯುತ್ತೆ ಬೀದರ್ನ ಮರಿಗೆಮ್ಮ ದೇವಿ ಜಾತ್ರೆ: ಇಲ್ಲಿವೆ ಫೋಟೋಸ್
ಬೀದರ್ ತಾಲೂಕಿನ ಕಾಶೆಂಪುರದ ಮರಿಗೆಮ್ಮ ದೇವಿ ಜಾತ್ರೆ ಅದ್ಭುತವಾದ ಏಕದಿನ ಆಚರಣೆಯಾಗಿದೆ. ಪುರಿಯ ಜಗನ್ನಾಥ ಜಾತ್ರೆಯಂತೆ, ಇಲ್ಲಿ ಹೊಸ ಮೂರ್ತಿಗಳನ್ನು ಒಂದೇ ದಿನ ತಯಾರಿಸಿ ಪ್ರತಿಷ್ಠಾಪಿಸಲಾಗುತ್ತದೆ. ಮದುವೆಯಾದ ಮಹಿಳೆಯರು ಈ ಜಾತ್ರೆಯಲ್ಲಿ ಭಾಗವಹಿಸುವುದು ಕಡ್ಡಾಯ. ದೇವಿಯ ಮೂರ್ತಿಯನ್ನು ಮೆರವಣಿಗೆಯ ಮೂಲಕ ದೇವಾಲಯಕ್ಕೆ ತರಲಾಗುತ್ತದೆ ಮತ್ತು ಗ್ರಾಮಸ್ಥರು ನೈವೇದ್ಯ ಅರ್ಪಿಸುತ್ತಾರೆ.
Updated on:Jul 17, 2025 | 1:25 PM

ಈ ಗ್ರಾಮದಲ್ಲಿ ನಡೆಯುವ ಮರಿಗೆಮ್ಮ ದೇವಿಯ ಜಾತ್ರೆ ಬಹಳ ವಿಶೇಷವಾಗಿದೆ. ಪುರಿ ಜಗನ್ನಾಥ ಮಂದಿರದ ಜಾತ್ರೆಯಂತೆಯೇ ಇಲ್ಲಿನ ಮರಿಗೆಮ್ಮ ದೇವಿಯ ಜಾತ್ರೆ ನಡೆಯುತ್ತದೆ. ಪ್ರತಿ ವರ್ಷ ನಡೆಯುವ ಈ ಜಾತ್ರೆಗೆ ಹೆಚ್ಚಿನ ಸಂಖ್ಯೆಯಲ್ಲಿ ಜನರು ಆಗಮಿಸಿವಿಜೃಂಭಣೆಯಿಂದ ಆಚರಿಸುತ್ತಾರೆ.

ಬೀದರ್ ತಾಲೂಕಿನ ಕಾಶೆಂಪುರ ಗ್ರಾಮದಲ್ಲಿ ನಡೆಯುವ ಮರಿಗೆಮ್ಮ ದೇವಿ ಜಾತ್ರೆ ಪ್ರತಿ ವರ್ಷ ಕೂಡ ಅದ್ದೂರಿಯಾಗಿ ಆಚರಿಸಲಾಗುತ್ತದೆ. ಬೇರೆಡೆ ನಡೆಯುವ ಜಾತ್ರೆಗೆ ತಿಂಗಳುಗಳ ಕಾಲ ಸಿದ್ಧತೆ ಮಾಡಲಾಗುತ್ತದೆ. ಆದರೆ ಇಲ್ಲಿ ನಡೆಯುವ ಈ ಜಾತ್ರೆ ಒಂದೇ ದಿನದಲ್ಲಿ ಎಲ್ಲಾ ಸಿದ್ಧತೆಯನ್ನ ಮಾಡಿಕೊಂಡು, ಒಂದೇ ದಿನದಲ್ಲಿ ಮುಗಿಸುತ್ತಾರೆ. ಹೀಗಾಗಿ ಈ ಜಾತ್ರೆ ತುಂಬಾ ವಿಶೇಷವಾಗಿದೆ.

ಇನ್ನು ಈ ಜಾತ್ರೆಗೆ ಗ್ರಾಮದಿಂದ ಮದುವೆಯಾಗಿ ಹೋದ ಮಹಿಳೆಯವರು ಭಾಗವಹಿಸಲೇಬೇಕು ಎಂಬ ನಿಯಮ ಹಿನ್ನಲೆ ಆಗಮಿಸುತ್ತಾರೆ. ಬೆಳಗ್ಗೆಯಿಂದಲೇ ಸಿದ್ಧತೆ ಆರಂಭಿಸಿ, ಸಂಜೆ ವೇಳೆಗೆ ಗ್ರಾಮ ದೇವತೆಯ ನೂತನ ಮೂರ್ತಿಗಳನ್ನು ಪ್ರತಿಷ್ಠಾಪಿಸಿ, ವಿಶೇಷ ಪೂಜೆ ಮಾಡಲಾಗುತ್ತದೆ.

ಈ ಮರಿಗೆಮ್ಮ ದೇವಿಯ ಮೂರ್ತಿಯನ್ನ ಪ್ರತಿ ವರ್ಷ ಬದಲಾವಣೆ ಮಾಡಲಾಗುತ್ತದೆ. ದೇವತೆ ಮರಿಗೆಮ್ಮ ದೇವಿಯ ಮೂರ್ತಿಗಳನ್ನು ಜಾತ್ರಾ ಮಹೋತ್ಸವ ದಿನದಂದೇ ಒಂದೇ ದಿನದಲ್ಲೇ ತಯಾರಿಸುವ ಸಂಪ್ರದಾಯ ಮೊದಲಿನಿಂದಲೂ ಜಾರಿಯಲಿದ್ದು, ಈ ವರ್ಷ ಕೂಡ ಅದನ್ನ ಪಾಲಿಕೊಂಡು ಬರಲಾಗಿದೆ.

ಜಾತ್ರೆ ನಡೆಯುವ ದಿನದಂದು ಅಂದರೆ ಬೆಳಿಗ್ಗೆ ಗ್ರಾಮಸ್ಥರು ಮರದ ತುಕಡಿಗಳನ್ನು ಮೂರ್ತಿ ತಯಾರಿಸುವವರಿಗೆ ನೀಡುತ್ತಾರೆ. ಆ ಮರದ ತುಂಡುಗಳಿಂದ ಅವರು ಹೊಸ ಮೂರ್ತಿಗಳನ್ನು ಸಿದ್ಧಪಡಿಸುತ್ತಾರೆ. ಸಂಜೆಯ ವೇಳೆಯಲ್ಲಿ ಗ್ರಾಮಸ್ಥರು ಬಡಿಗೇರ ಮನೆಯಿಂದ ಬಾಜಾ ಭಜಂತ್ರಿಗಳೊಂದಿಗೆ ಸುಮಾರು ಎರಡು ಗಂಟೆಗಳ ಕಾಲ ಮೆರವಣಿಗೆ ಮೂಲಕ ಮೂರ್ತಿಯನ್ನ ತಂದು ಮರಿಗೆಮ್ಮ ದೇವಿಯ ಮಂದಿರದಲ್ಲಿ ಪ್ರತಿಷ್ಠಾಪಿಸುತ್ತಾರೆ.

ತಾವು ಮಾಡಿದ ನೈವೈದ್ಯವನ್ನ ಗ್ರಾಮದ ಪ್ರತಿಯೊಬ್ಬರು ತಂದು ದೇವಿಗೆ ಅರ್ಪಿಸಿ ಆ ನಂತರ ಜನರು ಊಟ ಮಾಡುವ ಸಂಪ್ರದಾಯವಿದೆ. ಮರಿಗೆಮ್ಮ ದೇವಿಯ ಜಾತ್ರೆಯ ಸಮಯದಲ್ಲಿ ಒಂದು ಸ್ವಲ್ಪವಾದರೂ ಮಳೆ ಬಂದೆ ಬರುತ್ತದೆ ಇದು ದೇವಿಯ ಶಕ್ತಿ ಎಂದು ಗ್ರಾಮಸ್ಥರ ನಂಬಿಕೆ ಆಗಿದೆ.
Published On - 1:23 pm, Thu, 17 July 25



