
ಹಲವು ರೀತಿಯಲ್ಲಿ ಗಮನ ಸೆಳೆದ ನಟಿ ತೇಜಸ್ವಿ ಪ್ರಕಾಶ್ ಅವರು ‘ಹಿಂದಿ ಬಿಗ್ ಬಾಸ್ 15’ರ ವಿನ್ನರ್ ಆಗಿ ಹೊರಹೊಮ್ಮಿದ್ದಾರೆ. ಅವರು ವಿನ್ ಆಗುತ್ತಾರೆ ಎಂದು ಬಹುತೇಕರು ಊಹಿಸಿರಲಿಲ್ಲ.

ಶಿಲ್ಪಾ ಶೆಟ್ಟಿ ತಂಗಿ ಶಮಿತಾ ಶೆಟ್ಟಿ ಅವರೇ ಈ ಬಾರಿ ಬಿಗ್ ಬಾಸ್ ಗೆಲ್ಲಬಹುದು ಎಂದು ಅನೇಕರು ಅಂದಾಜಿಸಿದ್ದರು. ಆದರೆ ಅಂತಿಮವಾಗಿ ತೇಜಸ್ವಿ ಪ್ರಕಾಶ್ ಅವರಿಗೆ ವಿಜಯಲಕ್ಷ್ಮಿ ಒಲಿದಿದ್ದಾಳೆ.

ಸಲ್ಮಾನ್ ಖಾನ್ ಅವರು ತೇಜಸ್ವಿ ಪ್ರಕಾಶ್ ಅವರ ಕೈ ಎತ್ತುವ ಮೂಲಕ ಅವರೇ ವಿನ್ನರ್ ಎಂಬುದನ್ನು ಘೋಷಿಸಿದರು. ಬರೋಬ್ಬರಿ 40 ಲಕ್ಷ ರೂಪಾಯಿ ಬಹುಮಾನದ ಮೊತ್ತವನ್ನು ತೇಜಸ್ವಿ ಪ್ರಕಾಶ್ ಪಡೆದಿದ್ದಾರೆ.

ಭಾನುವಾರ (ಜ.30) ರಾತ್ರಿ ಅದ್ದೂರಿಯಾಗಿ ಬಿಗ್ ಬಾಸ್ 15ನೇ ಸೀಸನ್ ಫಿನಾಲೆ ಕಾರ್ಯಕ್ರಮ ನಡೆಯಿತು. ಹಲವು ಘಟನೆಗಳಿಗೆ ಈ ವೇದಿಕೆ ಸಾಕ್ಷಿ ಆಯಿತು.

ಈ ರಿಯಾಲಿಟಿ ಶೋ ಗೆದ್ದಿದ್ದರಿಂದ ತೇಜಸ್ವಿ ಪ್ರಕಾಶ್ ಖ್ಯಾತಿ ಹೆಚ್ಚಿದೆ. ಅವರಿಗೆ ಹೊಸ ಹೊಸ ಅವಕಾಶಗಳು ಹರಿದುಬರಲು ಆರಂಭಿಸಿವೆ. ಅವರ ಅಭಿಮಾನಿ ಬಳಗ ಕೂಡ ದೊಡ್ಡದಾಗಿದೆ.

‘ಹಿಂದಿ ಬಿಗ್ ಬಾಸ್ 15’ರ ವಿನ್ನರ್ ಪಟ್ಟ ಪಡೆಯುತ್ತಿದ್ದಂತೆಯೇ ತೇಜಸ್ವಿ ಪ್ರಕಾಶ್ ಅವರಿಗೆ ಅದೃಷ್ಟಲಕ್ಷ್ಮೀ ಒಲಿದಿದ್ದಾಳೆ. ‘ನಾಗಿನ್ 6’ ಧಾರಾವಾಹಿಯಲ್ಲಿ ನಾಯಕಿಯಾಗಿ ನಟಿಸುವ ಅವಕಾಶ ಅವರಿಗೆ ಸಿಕ್ಕಿದೆ.

ಈಗಾಗಲೇ ‘ನಾಗಿನ್ 6’ ಧಾರಾವಾಹಿಯ ಪ್ರೋಮೋ ಶೂಟಿಂಗ್ನಲ್ಲಿ ತೇಜಸ್ವಿ ಪ್ರಕಾಶ್ ಭಾಗವಹಿಸಿದ್ದಾರೆ. ಶೀಘ್ರದಲ್ಲೇ ಈ ಸೀರಿಯಲ್ ಪ್ರಸಾರ ಆರಂಭಿಸಲಿದೆ. ಎಲ್ಲರೂ ತೇಜಸ್ವಿ ಪ್ರಕಾಶ್ಗೆ ಅಭಿನಂದನೆ ಸಲ್ಲಿಸುತ್ತಿದ್ದಾರೆ.