
ನಮ್ರತಾ ಗೌಡ ಅವರು ‘ಬಿಗ್ ಬಾಸ್ ಕನ್ನಡ ಸೀಸನ್ 10’ರ ಮೂಲಕ ಫೇಮಸ್ ಆದರು. ನಮ್ರತಾ ಗೌಡ ಅವರು ಆಗಾಗ ಸೋಶಿಯಲ್ ಮೀಡಿಯಾದಲ್ಲಿ ಹೊಸ ಹೊಸ ಫೋಟೋ ಹಂಚಿಕೊಂಡು ಗಮನ ಸೆಳೆಯುತ್ತಾ ಇರುತ್ತಾರೆ. ಈಗ ಹೊಸ ಫೋಟೋಗಳು ವೈರಲ್ ಆಗಿವೆ.

ನಮ್ರತಾ ಗೌಡ ಗ್ಲಾಮರಸ್ ಫೋಟೋಗೆ ಭರ್ಜರಿ ಲೈಕ್ಸ್ ಸಿಕ್ಕಿದೆ. ಬಿಳಿ ಸೀರೆ ಉಟ್ಟು, ತಲೆಗೆ ಕೆಂಗುಲಾಬಿ ಮುಡಿದು ಮಿಂಚಿದ್ದಾರೆ. ಈ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಗಮನ ಸೆಳದಿವೆ. ನಮ್ರತಾ ಹಿಂಬಾಲಕರ ಸಂಖ್ಯೆ ಹೆಚ್ಚಿದೆ.

ನಮ್ರತಾ ಗೌಡ ‘ಬಿಗ್ ಬಾಸ್’ನಿಂದ ಸಾಕಷ್ಟು ಫೇಮ್ ಪಡೆದರು. ಆದರೆ, ಅವರು ಯಾವುದೇ ಸಿನಿಮಾ ಆಫರ್ ಒಪ್ಪಿಕೊಂಡಿಲ್ಲ. ಅವರ ಕಡೆಯಿಂದ ಯಾವುದೇ ಹೊಸ ಪ್ರಾಜೆಕ್ಟ್ ಘೋಷಣೆ ಆಗಿಲ್ಲ. ಈಗ ಅವರು ರಿಯಾಲಿಟಿ ಶೋ ಒಂದರ ಭಾಗ ಆಗುತ್ತಿದ್ದಾರೆ.

ಸ್ಟಾರ್ ಸುವರ್ಣದಲ್ಲಿ ಪ್ರಸಾರ ಕಾಣಲಿರುವ ‘ಸುವರ್ಣ ಸೆಲೆಬ್ರಿಟಿ ಲೀಗ್’ ರಿಯಾಲಿಟಿ ಶೋನಲ್ಲಿ ನಮ್ರತಾ ಸ್ಪರ್ಧಿಸುತ್ತಿದ್ದಾರೆ. ವಿನಯ್ ಗೌಡ, ನಮ್ರತಾ ಮೊದಲಾದವರು ಇದರ ಭಾಗ ಆಗುತ್ತಿದ್ದಾರೆ. ಇದಕ್ಕಾಗಿ ಫ್ಯಾನ್ಸ್ ಕಾದಿದ್ದಾರೆ.

ಇನ್ನು ಸೋಶಿಯಲ್ ಮೀಡಿಯಾದಲ್ಲಿ ನಮ್ರತಾ ಗೌಡ ಅವರು ನಾನಾ ರೀತಿಯ ಫೋಟೋಗಳನ್ನು ಹಂಚಿಕೊಳ್ಳುತ್ತಾ ಇರುತ್ತಾರೆ. ಹಲವು ರೀತಿಯ ಶೂಟ್ಗಳನ್ನು ಅವರು ಮಾಡಿಸುತ್ತಾ ಇರುತ್ತಾರೆ.