ಬಿಗ್ ಬಾಸ್​ಗೆ ಎಂಟ್ರಿ ಕೊಡೋರು ಇವರೇನಾ? ಹರಿದಾಡ್ತಿದೆ ಸೀರಿಯಲ್ ಕಲಾವಿದರ ಪಟ್ಟಿ

Updated on: Sep 01, 2026 | 12:13 PM

ಕನ್ನಡದ ಅತ್ಯಂತ ಜನಪ್ರಿಯ ರಿಯಾಲಿಟಿ ಶೋ 'ಬಿಗ್ ಬಾಸ್ ಕನ್ನಡ 13' ಆರಂಭಕ್ಕೆ ಕ್ಷಣಗಣನೆ ಶುರುವಾಗಿದೆ. ಸೆಪ್ಟೆಂಬರ್ 6 ರಿಂದ ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗಲಿರುವ ಈ ಕಾರ್ಯಕ್ರಮದಲ್ಲಿ ಜನಸಾಮಾನ್ಯರಿಗೂ ಅವಕಾಶ ಕಲ್ಪಿಸಲಾಗಿದೆ. ಇನ್ನು ಸೀರಿಯಲ್‌ಗಳಿಂದ ಹಠಾತ್ ಹೊರಬಂದಿರುವ ಪ್ರಮುಖ ಕಿರುತೆರೆ ತಾರೆಯರು ದೊಡ್ಮನೆ ಪ್ರವೇಶಿಸುವುದು ಬಹುತೇಕ ಖಚಿತ ಎನ್ನಲಾಗಿದ್ದು, ಪ್ರೇಕ್ಷಕರಲ್ಲಿ ಭಾರಿ ಕುತೂಹಲ ಮೂಡಿಸಿದೆ.

1 / 6
ಗಗನಾ ಭಾರಿ: ಕಳೆದ ಸೀಸನ್‌ನಿಂದಲೂ ಬಿಗ್ ಬಾಸ್ ಸಂಭಾವ್ಯ ಪಟ್ಟಿಯಲ್ಲಿ ಮುಂಚೂಣಿಯಲ್ಲಿದ್ದ ನಟಿ ಗಗನಾ ಭಾರಿ ಈ ಬಾರಿಯಾದರೂ ದೊಡ್ಮನೆ ಸೇರಲಿದ್ದಾರಾ ಎಂಬ ಕಾತುರ ಹೆಚ್ಚಾಗಿದೆ. ಅವರು ಈ ಮೊದಲು ಗಿಲ್ಲಿ ಜೊತೆಗಿನ ಕೆಮಿಸ್ಟ್ರಿ ಕಾರಣಕ್ಕೆ ಸುದ್ದಿ ಆಗಿದ್ದರು.

ಗಗನಾ ಭಾರಿ: ಕಳೆದ ಸೀಸನ್‌ನಿಂದಲೂ ಬಿಗ್ ಬಾಸ್ ಸಂಭಾವ್ಯ ಪಟ್ಟಿಯಲ್ಲಿ ಮುಂಚೂಣಿಯಲ್ಲಿದ್ದ ನಟಿ ಗಗನಾ ಭಾರಿ ಈ ಬಾರಿಯಾದರೂ ದೊಡ್ಮನೆ ಸೇರಲಿದ್ದಾರಾ ಎಂಬ ಕಾತುರ ಹೆಚ್ಚಾಗಿದೆ. ಅವರು ಈ ಮೊದಲು ಗಿಲ್ಲಿ ಜೊತೆಗಿನ ಕೆಮಿಸ್ಟ್ರಿ ಕಾರಣಕ್ಕೆ ಸುದ್ದಿ ಆಗಿದ್ದರು.

2 / 6

ಸುಶ್ಮಿತ್ ಜೈನ್: 'ಅಣ್ಣಯ್ಯ' ಧಾರಾವಾಹಿಯ 'ಜಿಮ್ ಸೀನ' ಪಾತ್ರದ ಮೂಲಕ ಪ್ರೇಕ್ಷಕರ ಮನ ಗೆದ್ದಿದ್ದ ಸುಶ್ಮಿತ್, ಬಿಗ್ ಬಾಸ್ ಸ್ಪರ್ಧಿಯಾಗುವ ಉದ್ದೇಶದಿಂದಲೇ ಸೀರಿಯಲ್‌ಗೆ ಗುಡ್‌ಬೈ ಹೇಳಿದ್ದಾರೆ ಎನ್ನಲಾಗುತ್ತಿದೆ.ಈ ಬಗ್ಗೆ ಅವರ ಕಡೆಯಿಂದ ಸ್ಪಷ್ಟನೆ ಸಿಕ್ಕಿಲ್ಲ.

3 / 6

ಆಸಿಯಾ ಫಿರ್ದೋಸ್: 'ಕನ್ಯಾಕುಮಾರಿ' ಹಾಗೂ 'ಶ್ರಾವಣಿ ಸುಬ್ರಹ್ಮಣ್ಯ' ಧಾರಾವಾಹಿಗಳಲ್ಲಿ ನಟಿಸಿ ಸೈ ಎನಿಸಿಕೊಂಡಿರುವ ಆಸಿಯಾ, ಈ ಬಾರಿ ಬಿಗ್ ಬಾಸ್ ಮನೆ ಪ್ರವೇಶಿಸುವ ಸಾಧ್ಯತೆ ದಟ್ಟವಾಗಿದೆ. ಅವರು ಕಠಿಣ ಸ್ಪರ್ಧೆ ನೀಡಬಹುದು.

4 / 6

ಅಮೋಘ್ ಆದಿತ್ಯ: 'ಶ್ರಾವಣಿ ಸುಬ್ರಹ್ಮಣ್ಯ' ಧಾರಾವಾಹಿಯ ನಾಯಕ ನಟನಾಗಿ ಪ್ರಸಿದ್ದಿ ಪಡೆದಿರುವ ಅಮೋಘ್ ಆದಿತ್ಯ ಅವರ ಹೆಸರು ಕೂಡ ಬಿಗ್ ಬಾಸ್ ಸಂಭಾವ್ಯ ಸ್ಪರ್ಧಿಗಳ ಪಟ್ಟಿಯಲ್ಲಿ ಬಲವಾಗಿ ಕೇಳಿಬರುತ್ತಿದೆ.

5 / 6

ಯಶ್ವಂತ್: 'ನಂದಗೋಕುಲ' ಧಾರಾವಾಹಿಯಲ್ಲಿ ಕೇಶವ ಪಾತ್ರದ ಮೂಲಕ ಜನಪ್ರಿಯತೆ ಗಳಿಸಿದ್ದ ಇವರು, ಬಿಗ್ ಬಾಸ್ ಆರಂಭದ ಬೆನ್ನಲ್ಲೇ ಸೀರಿಯಲ್‌ನಿಂದ ದಿಢೀರ್ ನಿರ್ಗಮಿಸಿದ್ದು ಹಲವು ಅನುಮಾನಗಳಿಗೆ ಕಾರಣವಾಗಿದೆ. ಅವರು ಸಿನಿಮಾ ಪ್ರಚಾರಕ್ಕೆ ಹೀಗೆ ಮಾಡುತ್ತಿದ್ದೇನೆ ಎಂದಿದ್ದಾರೆಯಾದರೂ, ಅಸಲಿಯತ್ತು ಬೇರೆಯದೇ ಇದೆಯೇ ಎಂಬ ಪ್ರಶ್ನೆ ಮೂಡಿದೆ.

6 / 6

ಅಥರ್ವ್: 'ಶ್ರಾವಣಿ ಸುಬ್ರಹ್ಮಣ್ಯ' ಸೀರಿಯಲ್‌ನಲ್ಲಿ ಮದನ್ ಪಾತ್ರದ ಮೂಲಕ ಗಮನ ಸೆಳೆದಿದ್ದ ಅಥರ್ವ್ ಕೂಡ ಈ ಸೀಸನ್‌ನ ಹೊಸ ಸ್ಪರ್ಧಿಯಾಗಿ ಎಂಟ್ರಿ ಕೊಡುವ ನಿರೀಕ್ಷೆಯಿದೆ. ಜೀ ಕನ್ನಡದವರ ಹೆಸರೇ ಹೆಚ್ಚಿದೆ.

Published On - 12:12 pm, Tue, 1 September 26

ರಾಜೇಶ್ ದುಗ್ಗುಮನೆ

ರಾಜೇಶ್ ದುಗ್ಗುಮನೆಯವರು ಮೂಲತಃ ಉತ್ತರ ಕನ್ನಡದ ಶಿರಸಿಯವರು. ಇವರು ಪತ್ರಿಕಾ ರಂಗಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More
Loading...
Unable to load recommendations.
Follow Us