ಫಿನಾಲೆಯ ಟಿಕೆಟ್ ಪಡೆಯಲು ಮನೆಯ ಸ್ಪರ್ಧಿಗಳಲ್ಲಿ ಭಾರಿ ಪೈಪೋಟಿ

|

Updated on: Jan 10, 2024 | 9:06 PM

Bigg Boss Kannada: ಫಿನಾಲೆಗೆ ಹತ್ತಿರ ಬಂದಂತೆ ಬಿಗ್​ಬಾಸ್ ಮನೆಯ ಸದಸ್ಯರ ನಡುವಿನ ಸಂಬಂಧಗಳು ಬದಲಾಗುತ್ತಿವೆ. ಗೆಳೆಯರು ವೈರಿಗಳಾಗುತ್ತಿದ್ದರು. ವೈರಿಗಳು ಮಿತ್ರರಾಗುತ್ತಿದ್ದಾರೆ.

1 / 7
ಫಿನಾಲೆಯ ವೇದಿಕೆ ಹತ್ತಲು ಬಿಗ್‌ಬಾಸ್‌ ಮನೆಯೊಳಗೆ ಪೈಪೋಟಿ ಜೋರಾಗಿಯೇ ನಡೆದಿದೆ. ಇದಕ್ಕೆ ಅನುಗುಣವಾಗಿ ಸ್ವತಃ ಬಿಗ್‌ಬಾಸ್‌ ಎಲ್ಲ ಸ್ಪರ್ಧಿಗಳಿಗೂ ಟಾಸ್ಕ್‌ಗಳನ್ನು ನೀಡುತ್ತಿದ್ದಾರೆ.

2 / 7
ನಿನ್ನೆ ನಮೃತಾ ಅವರಿಗೆ ತಮ್ಮ ಎದುರಾಳಿಗಳನ್ನು ಆಯ್ಕೆ ಮಾಡಿಕೊಳ್ಳುವ ಅವಕಾಶ ನೀಡಿದ್ದರು. ನಮೃತಾ, ವರ್ತೂರು ಸಂತೋಷ್, ಪ್ರತಾಪ್ ಮತ್ತು ಸಂಗೀತಾ ಅವರನ್ನು ಎದುರಾಳಿಗಳನ್ನಾಗಿ ಆಯ್ದುಕೊಂಡಿದ್ದರು. ಆದರೆ ಎಲ್ಲರಿಗಿಂತ ಮೊದಲು ಅವರೇ ಸ್ಪರ್ಧೆಯಿಂದ ಔಟ್ ಆಗಿದ್ದರು.

3 / 7
ಈ ಟಾಸ್ಕ್‌ನಲ್ಲಿ ವರ್ತೂರು ಸಂತೋಷ್ ಜಯಶಾಲಿಗಳಾಗಿದ್ದಾರೆ. ಎರಡನೇ ಸ್ಥಾನವನ್ನು ಪ್ರತಾಪ್ ಪಡೆದುಕೊಂಡಿದ್ದಾರೆ. 
ವೈಯಕ್ತಿಕ ಟಾಸ್ಕ್‌ನ ಮುಂದುವರಿದ ಭಾಗ ಇಂದು ನಡೆಯಲಿದೆ.

ಈ ಟಾಸ್ಕ್‌ನಲ್ಲಿ ವರ್ತೂರು ಸಂತೋಷ್ ಜಯಶಾಲಿಗಳಾಗಿದ್ದಾರೆ. ಎರಡನೇ ಸ್ಥಾನವನ್ನು ಪ್ರತಾಪ್ ಪಡೆದುಕೊಂಡಿದ್ದಾರೆ. ವೈಯಕ್ತಿಕ ಟಾಸ್ಕ್‌ನ ಮುಂದುವರಿದ ಭಾಗ ಇಂದು ನಡೆಯಲಿದೆ.

4 / 7
ಈ ಬಾರಿ ಬಿಗ್‌ಬಾಸ್‌ ತನಿಷಾ ಅವರಿಗೆ ಟಾಸ್ಕ್‌ ಕೊಟ್ಟು, ತಮ್ಮ ಎದುರಾಳಿಗಳನ್ನು ಆಯ್ದುಕೊಳ್ಳುವ ಅಧಿಕಾರನ್ನು ಕೊಟ್ಟಿದ್ದಾರೆ. ಈ ವಾರದ ನಾಮಿನೇಷನ್‌ನಲ್ಲಿ ತನಿಷಾ ಅವರನ್ನು ನಾಮಿನೇಟ್ ಮಾಡಿದ್ದ ಕಾರ್ತೀಕ್, ಈಗ ತಮ್ಮನ್ನೂ ಆಟಕ್ಕೆ ಸೇರಿಸಿಕೊಳ್ಳುವಂತೆ ತನಿಷಾ ಬಳಿ ಕನ್ವಿನ್ಸ್ ಮಾಡುತ್ತಿದ್ದಾರೆ.

5 / 7
ಆದರೆ ಇದಕ್ಕೆ ಜಗ್ಗಿಲ್ಲ. ‘ಬೇರೆವರು ಸಜಷನ್ ಕೊಟ್ರೆ ಕೇಳಿಸ್ಕೋತೀಯಾ, ನಾನು ಮಾತಾಡೋಕೆ ಬಂದ್ರೆ ಉಲ್ಟಾ ಮಾತಾಡ್ತೀಯಾ?’ ಎಂದು ಕಾರ್ತಿಕ್ ಕೇಳಿದ್ದಾರೆ. ಅದಕ್ಕೆ ತನಿಷಾ, ‘ನನಗೂ ಬ್ರೇನ್ ಇದೆ. ನೀನು ಹೇಳ್ಕೊಟ್ಟೇ ತಿಳ್ಕೋಬೇಕಾಗಿಲ್ಲ’ ಎಂದು ಖಡಕ್ಕಾಗಿ ಉತ್ತರಿಸಿದ್ದಾರೆ.

6 / 7
ಈ ಸೀಸನ್‌ ಆರಂಭದಿಂದಲೂ ಸ್ನೇಹಿತರಾಗಿದ್ದ, ಒಬ್ಬರಿಗೊಬ್ಬರು ಬೆಂಬಲಕ್ಕೆ ನಿಂತಿದ್ದ ತನಿಷಾ ಮತ್ತು ಕಾರ್ತೀಕ್ ನಡುವೆ ಈಗ ಬಿರುಕು ಮೂಡಿದಂತಿದೆ. ಫಿನಾಲೆಗೆ ನೇರ ಪ್ರವೇಶ ಪಡೆಯುವ ಸ್ಪರ್ಧಿ ಯಾರೆಂಬುದು ಮಾತ್ರ ಇನ್ನೂ ಕುತೂಹಲಕಾರಿ ಪ್ರಶ್ನೆಯಾಗಿಯೇ ಉಳಿದಿದೆ.

7 / 7
ಇದೆಲ್ಲದರ ನಡುವೆ ಈ ವಾರ ನಾಮಿನೇಟ್ ಆಗದಿರುವ ಸಂಗೀತಾ ಹಾಗೂ ಡ್ರೋನ್ ಪ್ರತಾಪ್ ಯಾವುದೇ ಟೆನ್ಷನ್ ಇಲ್ಲದೆ ಆರಾಮವಾಗಿದ್ದಾರೆ.