ಬಿಗ್ ಬಾಸ್ ಕನ್ನಡ ಸೀಸನ್ 12ರ 24 ಸ್ಪರ್ಧಿಗಳು ಇವರೇ; ಫೋಟೋ ಸಮೇತ ವಿವರ ಇದೆ

Updated on: Jan 19, 2026 | 7:30 AM

ಈ ಬಾರಿ ಬಿಗ್ ಬಾಸ್ ಸಾಕಷ್ಟು ಮನರಂಜನೆ ನೀಡಿದೆ. ಬರೋಬ್ಬರಿ 24 ಸ್ಪರ್ಧಿಗಳ ಮಧ್ಯೆ ಗಿಲ್ಲಿ ಗೆದ್ದು ಬೀಗಿದ್ದಾರೆ. ಹಾಗಾದರೆ, ಗಿಲ್ಲಿ ಜೊತೆ ಯಾರೆಲ್ಲ ಸ್ಪರ್ಧೆ ಮಾಡಿದ್ದರು? ಇವರ ಪೈಕಿ ಯಾರು ಮೊದಲು ಹೊರ ಹೋದರು ಎಂಬ ಬಗ್ಗೆ ಇಲ್ಲಿದೆ ಸಂಪೂರ್ಣ ಮಾಹಿತಿ.

1 / 24
ಸಿನಿಮಾಗಳಲ್ಲಿ ನಟಿಸಿ ಗಮನ ಸೆಳೆದ ಕರಿ ಬಸಪ್ಪ ಮೊದಲ ವಾರವೇ ಹೊರ ಹೋದರು. ಜರನ್ನು ಇಂಪ್ರೆಸ್ ಮಾಡಲು ಅವರಿಂದ ಸಾಧ್ಯವಾಗಿಲ್ಲ.

2 / 24
ಮೊದಲ ವಾರ ನಡೆದಿದ್ದ ಜೋಡಿ ಎಲಿಮಿನೇಷನ್. ಹೀಗಾಗಿ ಕರಿ ಬಸಪ್ಪ ಜೊತೆ ಇದ್ದ ಆರ್​ಜೆ ಅಮಿತ್ ಕೂಡ ಎಲಿಮಿನೇಟ್ ಆದರು. ವರು ಮಾತಾಡೋದಿಲ್ಲ ಎಂಬ ಆರೋಪ ಕೇಳಿ ಬಂದಿತ್ತು.

3 / 24
ಸತೀಶ್ ಕ್ಯಾಡಬಾಮ್ ಅವರು ಈ ಬಾರಿ ಬಿಗ್ ಬಾಸ್ ಮನೆಗೆ ಬಂದಿದ್ದರು. ಅವರು 18ನೇ ದಿನ ದೊಡ್ಮನೆಯಿಂದ ಹೊರ ಹೋದರು. ಮೂರನೇ ವಾರದ ಫಿನಾಲೆಗೂ ಮೊದಲು ನಡೆದ ಮಿಡ್ ವೀಕ್ ಎಲಿಮಿನೇಷನ್​​ ಅಲ್ಲಿ ಅವರು ಹೊರ ಹೋದರು. ಕಡಿಮೆ ಮತ ಅವರಿಗೆ ಸಿಕ್ಕಿತ್ತು.

4 / 24
ಮಂಜು ಭಾಷಿಣಿ ಅವರು ಧಾರಾವಾಹಿ ಮೂಲಕ ಗಮನ ಸೆಳೆದವರು. ಅವರು ಬಿಗ್ ಬಾಸ್ ಮನೆಯಲ್ಲಿ ಇದ್ದಿದ್ದು 21 ದಿನ ಮಾತ್ರ. ಮೂರನೇ ವಾರ ನಡೆದ ಫಿನಾಲೆಯಲ್ಲಿ ಹೊರ ಹೋದರು.

5 / 24
ಧಾರಾವಾಹಿಗಳ ಮೂಲಕ ಗಮನ ಸೆಳೆದ ಅಶ್ವಿನಿ ​​ಎಸ್ ಅವರು ದೊಡ್ಮನೆಯಿಂದ ಹೊರ ಬಂದಿದ್ದು  ಮೂರನೇ ವಾರದ ಫಿನಾಲೆ ದಿನವೇ. ಈ ವಿಷಯ ಅವರಿಗೆ ಸಾಕಷ್ಟು ಬೇಸರ ಮೂಡಿಸಿತ್ತು.

6 / 24
ಮೂರನೇ ವಾರದ ಫಿನಾಲೆ ನಂತರದ ವಾರದಲ್ಲಿ ಯಾವುದೇ ಎಲಿಮಿನೇಷನ್ ಇರಲಿಲ್ಲ. 35ನೇ ದಿನ ಮಲ್ಲಮ್ಮ ಅವರು ಎಲಿಮಿನೇಟ್ ಆದರು. ಇವರು ಉತ್ತರ ಕರ್ನಾಟಕದ ಪ್ರತಿಭೆ.

7 / 24
42ನೇ ದಿನಕ್ಕೆ ಚಂದ್ರಪ್ರಭ ಹೊರ ಹೋದರು. ಬಿಗ್ ಬಾಸ್​​​ ಪರಿಸರ ಅವರಿಗೆ ಟಾಕ್ಸಿಕ್ ಅನುಭವ ನೀಡಿತ್ತು. ಹೀಗಾಗಿ, ತಾವಾಗೇ ಹೊರ ಬರೋದಾಗಿ ಹೇಳುತ್ತಿದ್ದರು. ಕಡಿಮೆ ಮತ ಪಡೆದು ಎಲಿಮಿನೇಟ್ ಆದರು.

8 / 24
ಕಾಕ್ರೋಚ್ ಸುಧಿ ಅವರು ಬಿಗ್ ಬಾಸ್ ಮನೆಯಲ್ಲಿ ಹೆಚ್ಚು ದಿನ ಇರುತ್ತಾರೆ ಎಂಬ ಊಹೆ ಅನೇಕರದ್ದಾಗಿತ್ತು. ಆದರೆ, 50 ದಿನವನ್ನು ಅವರು ಪೂರೈಸಿಲ್ಲ. 49ನೇ ದಿನಕ್ಕೆ ಅವರ ಜರ್ನಿ ಕೊನೆ ಆಯಿತು.

9 / 24
ವೈಲ್ಡ್ ಕಾರ್ಡ್ ಮೂಲಕ 22ನೇ ದಿನಕ್ಕೆ ದೊಡ್ಮನೆಗೆ ಬಂದ ರಿಶಾ ಗೌಡ ಅವರು 56ನೇ ದಿನ ಎಲಿಮಿನೇಟ್ ಆದರು. ಅವರು ಗಿಲ್ಲಿಗೆ ಹೊಡೆದು ಚರ್ಚೆ ಆಗಿದ್ದರು. ಆಗ ಅವರನ್ನು ಎಲಿಮಿನೇಷನ್ ಮಾಡಿರಲಿಲ್ಲ.

10 / 24
ಆ್ಯಂಕರ್ ಜಾನ್ವಿ ಅವರು ವಿವಾದಗಳಿಂದ ಬಿಗ್ ಬಾಸ್ ಮನೆಯಲ್ಲಿ ಚರ್ಚೆ ಆಗಿದ್ದರು. ಅವರಯ 63ನೇ ದಿನಕ್ಕೆ ದೊಡ್ಮನೆಯಿಂದ ಎಲಿಮಿನೇಟ್ ಆದರು.

11 / 24
ಅಭಿಷೇಕ್ ಅವರು 70ನೇ ದಿನಕ್ಕೆ ಬಿಗ್ ಬಾಸ್ ಮನೆಯಿಂದ ಹೊರ ಹೋದರು. ಅವರು ಉತ್ತಮವಾಗಿ ಆಡಿಲ್ಲ ಎಂಬ ಅಭಿಪ್ರಾಯ ವೀಕ್ಷಕರದ್ದು.

12 / 24
ಬಿಗ್ ಬಾಸ್ ಮನೆಗೆ ಅತಿಥಿಯಾಗಿ ಬಂದು, ನಂತರ ಸ್ಪರ್ಧಿಗಳು ಎಂಬ ರೀತಿಯಲ್ಲಿ ಇದ್ದರು. ಒಂದು ತಿಂಗಳು ರಜತ್ ಬಿಗ್ ಬಾಸ್ ಮನೆಯಲ್ಲಿದ್ದರು. ಇವರು ಅತಿಥಿಯಾಗಿದ್ದರು. 84ನೇ ದಿನ ಹೊರ ಹೋದರು.

13 / 24
ರಜತ್ ಜೊತೆ ಚೈತ್ರಾ ಕೂಡ ಬಂದಿದ್ದರು. ಬಂದ ಒಂದೇ ತಿಂಗಳಲ್ಲಿ ಕ್ಯಾಪ್ಟನ್, ಕಳಪೆ ಹಾಗೂ ಉತ್ತಮ ಪಡೆದು ಸಾಧನೆ ಮಾಡಿದರು ಚೈತ್ರಾ.

14 / 24
ವೈಲ್ಡ್ ಕಾರ್ಡ ಮೂಲಕ ಮೂರನೇ ವಾರ ದೊಡ್ಮನೆಗೆ ಎಂಟ್ರಿ ಕೊಟ್ಟವರಲ್ಲಿ ಸೂರಜ್ ಕೂಡ ಒಬ್ಬರು. ಅವರು ದೊಡ್ಮನೆಯಲ್ಲಿ ಸರಿಯಾಗಿ ಮೂರು ತಿಂಗಳು ಅಂದರೆ 90 ದಿನ ಇದ್ದರು.

15 / 24
ಉತ್ತರ ಕರ್ನಾಟಕ ಪ್ರತಿಭೆ ಮಾಳು ಅವರು 91ನೇ ದಿನ ಎಲಿಮಿನೇಟ್ ಆದರು. ಎಲಿಮಿನೇಷನ್​​ನ ಅವರು ಒಪ್ಪಿಕೊಳ್ಳಲು ರೆಡಿ ಇರಲೇ ಇಲ್ಲ.

16 / 24
ಕಲರ್ಸ್​ ಖೋಟಾ ಮೇಲೆ ಇದ್ದಾರೆ ಎಂಬ ಆರೋಪ ಹೊತ್ತಿದ್ದ ಸ್ಪಂದನಾ ಅವರು 98ನೇ ದಿನ ಎಲಿಮಿನೇಟ್ ಆದರು. ಅವರು ಆರೋಪವನ್ನು ಅಲ್ಲೆಗಳೆದಿದ್ದರು.

17 / 24
ಟಾಸ್ಕ್​ ಕ್ವೀನ್ ಎನಿಸಿಕೊಂಡಿದ್ದ ರಾಶಿಕಾ ಶೆಟ್ಟಿ ಅವರು ದೊಡ್ಮನೆಯಲ್ಲಿ 100 ದಿನ ಪೂರೈಸಿದ್ದರು. 105ನೇ ದಿನ ಅವರು ಹೋದರು. ಫಿನಾಲೆ ಕನಸು ಭಗ್ನವಾಯಿತು.

18 / 24
ಬಿಗ್ ಬಾಸ್​​ನಲ್ಲಿ ವಿಚಿತ್ರ ವ್ಯಕ್ತಿತ್ವದ ವ್ಯಕ್ತಿ ಎಂಬ ಖ್ಯಾತಿ ಧ್ರುವಂತ್​​ಗೆ ಸಿಗುತ್ತದೆ. ಅವರು 108ನೇ ದಿನ ಮಿಡ್ ವೀಕ್ ಎಲಿಮಿನೇಷನ್​​ನಲ್ಲಿ ಹೊರ ಹೋದರು. ಅವರು ಫಿನಾಲೆ ವೀಕ್ ತಲುಪಿದ್ದರು.

19 / 24
ಧನುಶ್ ಅವರು ‘ಬಿಗ್ ಬಾಸ್ ಕನ್ನಡ’ದ ಈ ಸೀಸನ್ ಟಾಪ್ 6ರಲ್ಲಿ ಇದ್ದರು. ಟಾಪ್ ಆರರಿಂದ ಮೊದಲು ಔಟ್ ಆದ ಸ್ಪರ್ಧಿ.

20 / 24
ರಘು ಅವರು ‘ಕ್ವಾಟ್ಲೆ ಕಿಚನ್’ ವಿನ್ನರ್. ಈ ಬಾರಿ ವೈಲ್ಡ್ ಕಾರ್ಡ್​​ನಲ್ಲಿ ಹೊರ ಬಂದ ಅವರು ನಾಲ್ಕನೇ ರನ್ನರ್ ಅಪ್ ಸ್ಥಾನ ಪಡೆದರು.

21 / 24
ಕಾವ್ಯಾ ಶೈವ ಅವರು ಫಿನಾಲೆಯಲ್ಲಿ ಟಾಪ್ 5ರಲ್ಲಿ ಇದ್ದರು. ಇವರು ಮೂರನೇ ರನ್ನರ್ ಅಪ್ ಸ್ಥಾನವನ್ನು ಅಲಂಕರಿಸಿದರು.

22 / 24
ಅಶ್ವಿನಿ ಗೌಡ ವಿನ್ನರ್ ಆಗಬೇಕು ಎಂಬುದು ಎಲ್ಲರ ಕೋರಿಕೆ ಆಗಿತ್ತು. ಆದರೆ, ಆಗಲಿಲ್ಲ. ಅವರು ಎರಡನೇ ರನ್ನರ್ ಅಪ್ ಸ್ಥಾನಕ್ಕೆ ಖುಷಿಪಟ್ಟರು.

23 / 24
ಬಿಗ್ ಬಾಸ್ ಜರ್ನಿಯನ್ನು ಜೀವಿಸಿದ ರಕ್ಷಿತಾ ಶೆಟ್ಟಿ ಮೊದಲ ವಾರವೇ ಹೊರ ಹೋಗಿದ್ದರು. ನಂತರ ಮರಳಿ ಬಂದರು ರನ್ನರ್ ಅಪ್ ಆದರು.

24 / 24
ಗಿಲ್ಲಿ ಈ ಸೀಸನ್​​ ವಿನ್ನರ್. 50 ಲಕ್ಷ ರೂಪಾಯಿ ಹಣದ ಜೊತೆಗೆ, ಮಾರುತಿ ಸುಜುಕಿ ವಿಕ್ಟೋರಿಸ್ ಕಾರು, ಸುದೀಪ್ ಕಡೆಯಿಂದ 10 ಲಕ್ಷ ರೂಪಾಯಿ ಸಿಕ್ಕಿದೆ. ಜೊತೆಗೆ ಆಕರ್ಷಕ ಟ್ರೋಫಿ ಕೂಡ ದೊರಕಿದೆ.

Published On - 7:29 am, Mon, 19 January 26