- Kannada News Photo gallery Gilli Nata Wins Bigg Boss Kannada 12: 50 Lakh Prize Money and Maruti Victorious Car special Amount from sudeep
ಗಿಲ್ಲಿಗೆ ಬಂಪರ್; 50 ಲಕ್ಷದ ಜೊತೆ ಐಷಾರಾಮಿ ಕಾರು, ಸುದೀಪ್ ಕಡೆಯಿಂದ ಬಿಗ್ ಅಮೌಂಟ್
Gilli Nata News: ಬಿಗ್ ಬಾಸ್ ಕನ್ನಡ ಸೀಸನ್ 12ರಲ್ಲಿ ಕಿಚ್ಚ ಸುದೀಪ್ ಅವರು ಗಿಲ್ಲಿ ನಟ ವಿನ್ ಎಂದು ಘೋಷಣೆ ಮಾಡಿದರು. ಗಿಲ್ಲಿ ನಟ ಅವರಿಗೆ ಹಣದ ಜೊತೆಗೆ ಐಷಾರಾಮಿ ಕಾರು ಕೂಡ ಸಿಕ್ಕಿದೆ. ಈ ವಿಷಯ ತಿಳಿದು ಅಭಿಮಾನಿಗಳು ಖುಷಿ ಆಗಿದೆ.
Updated on: Jan 18, 2026 | 11:54 PM

‘ಬಿಗ್ ಬಾಸ್ ಕನ್ನಡ ಸೀಸನ್ 12’ರ ವಿನ್ನರ್ ಆಗಿ ಗಿಲ್ಲಿ ನಟ ಹೊರ ಹೊಮ್ಮಿದ್ದಾರೆ. ಅವರಿಗೆ ಅಭೂತಪೂರ್ವ ಗೆಲುವು ಸಿಕ್ಕಿದೆ. 24 ಸ್ಪರ್ಧಿಗಳನ್ನು ಹಿಂದಿಕ್ಕಿ ಗೆಲುವನ್ನು ಕಂಡರು. ರನ್ನರ್ ಅಪ್ ಸ್ಥಾನಕ್ಕೆ ರಕ್ಷಿತಾ ಶೆಟ್ಟಿ ಖುಷಿಪಟ್ಟಿದ್ದಾರೆ.

ಗಿಲ್ಲಿ ನಟ ಅವರಿಗೆ ಸೋಶಿಯಲ್ ಮೀಡಿಯಾದಲ್ಲಿ ದೊಡ್ಡ ಫ್ಯಾನ್ ಬೇಸ್ ಸಿಕ್ಕಿದೆ. ಇದು ಅವರಿಗೆ ವೋಟ್ ಆಗಿಯೂ ಬದಲಾಗಿದೆ. 40 ಕೋಟಿಗೂ ಅಧಿಕ ವೋಟ್ ಅವರು ಪಡೆದಿದ್ದಾರೆ ಎಂಬುದೇ ಇದಕ್ಕೆ ಸಾಕ್ಷಿ.

ಗಿಲ್ಲಿ ನಟಗೆ ವಿನ್ನಿಂಗ್ ಅಮೌಂಟ್ ಆಗಿ 50 ಲಕ್ಷ ರೂಪಾಯಿ ಸಿಕ್ಕಿದೆ. ಇದು ಪ್ರತಿ ಬಾರಿ ವಿನ್ನರ್ಗೂ ಸಿಗುತ್ತಿದ್ದ ಮೊತ್ತ. ಈ ಬಾರಿ ಗಿಲ್ಲಿಗೆ ಬಂಪರ್ ಲಾಟರಿ ಹೊಡೆದಿದೆ. ಏಕೆಂದರೆ ಒಂದು ಕಾರು ಕೂಡ ಸಿಗುತ್ತಿದೆ.

ವಿನ್ನರ್ ಗಿಲ್ಲಿಗೆ ಸುಮಾರು 20 ಲಕ್ಷ ರೂಪಾಯಿಯ ಕಾರು ಉಡುಗೊರೆಯಾಗಿ ಸಿಗುತ್ತಿದೆ. ಈ ಬಾರಿಯ ಬಿಗ್ ಬಾಸ್ಗೆ ಮಾರುತಿ ಸುಜುಕಿ ಕೂಡ ಸ್ಪಾನ್ಸರ್ ಆಗಿತ್ತು. ಅವರ ಕಡೆಯಿಂದ ಮಾರುತಿ ಸುಜುಕಿ ವಿಕ್ಟೋರಿಸ್ ಕಾರು ವಿಜೇತರಿಗೆ ಸಿಕ್ಕಿದೆ.

ಮಾರುತಿ ವಿಕ್ಟೋರಿಸ್ ಕಳೆದ ವರ್ಷ ಪರಿಚಯಿಸಲಾಗಿದೆ. ಈ ಕಾರು 1490 ಸಿಸಿ ಇಂಜಿನ್ ಹೊಂದಿದೆ. ಗ್ಲೋಬಲ್ ನ್ಕ್ಯಾಪ್ನಲ್ಲಿ 5 ಸ್ಟಾರ್ ರೇಟಿಂಗ್ ಪಡೆದಿದೆ. ಈ ಕಾರು ಗಿಲ್ಲಿಗೆ ಸಿಕ್ಕಿರೋದು ಅಭಿಮಾನಿಗಳ ಖುಷಿಗೆ ಕಾರಣ ಆಗಿದೆ.

ಸುದೀಪ್ ಕಡೆಯಿಂದ ಗಿಲ್ಲಿಗೆ 10 ಲಕ್ಷ ರೂಪಾಯಿ ಸಿಗುತ್ತಿದೆ. ಈ ಬಗ್ಗೆ ಅವರು ಘೋಷಣೆ ಮಾಡಿದರು. ಮುಂದಿನ ದಿನಗಳಲ್ಲಿ ಅವರಿಗೆ ಸಾಕಷ್ಟು ಸಿನಿಮಾ ಆಫರ್ಗಳು ಕೂಡ ಬರುವ ಸಾಧ್ಯತೆ ಇದೆ. ಗಿಲ್ಲಿ ಅವರನ್ನು ನೋಡಲು ಜಾಲಿವುಡ್ ಸ್ಟುಡಿಯೋ ಹೊರಗೆ ಸಾಕಷ್ಟು ಜನರು ಸೇರಿದ್ದರು.




