Kannada News Photo gallery biggest rakhi offered to god ganesha in shree khajrana temple in Indore in Madhya Pradesh Rakhi Festival 2024 Spiritual photos Raksha Bandhan 2024
Rakhi 2024: ಮತ್ತೊಂದು ದಾಖಲೆಗೆ ಸಜ್ಜಾದ ಇಂದೋರ್.. ಗಣಪನಿಗೆ ಅದ್ಧೂರಿ ರಾಖಿ! ವಿಶೇಷ ಏನು ಗೊತ್ತಾ?
TV9 Web | Updated By: Digi Tech Desk
Updated on:
Aug 27, 2024 | 12:12 PM
Raksha Bandhan in Indore khajrana temple: ದೇಶದೆಲ್ಲೆಡೆ ರಾಖಿ ಹಬ್ಬ ಶುರುವಾಗಿದೆ. ಅಕ್ಕ-ತಂಗಿಯರಿಗೆ ರಾಖಿ ಕಟ್ಟಲು ಸಹೋದರಿಯರು ತಯಾರಾಗುತ್ತಿದ್ದಾರೆ. ಆದರೆ ಹಿಂದೂಗಳ ಈ ಮಹತ್ವದ ಹಬ್ಬವನ್ನು ಆಚರಿಸಲು ಭಾರತೀಯರು ಮಾತ್ರ ಸಿದ್ಧರಿಲ್ಲ.. ನೇಪಾಳ, ಪಾಕಿಸ್ತಾನದಂತಹ ದೇಶಗಳ ಜನರೂ ಸಿದ್ಧರಾಗಿದ್ದಾರೆ. ಮಾರುಕಟ್ಟೆಯಲ್ಲಿ ವಿವಿಧ ರಾಖಿಗಳು ರಾರಾಜಿಸುತ್ತಿವೆ. ಈ ಮಧ್ಯೆ ಭಾರತದಲ್ಲಿ ಬಹಳ ದೊಡ್ಡ ರಾಖಿಯನ್ನು ಸಿದ್ಧಪಡಿಸಿದ್ದಾರೆ. ಗಣಪತಿ ದೇವರಿಗೆ ಈ ರಾಖಿ ಕಟ್ಟಲು ಸಜ್ಜಾಗುತ್ತಿದ್ದಾರೆ.
1 / 9
Raksha Bandhan in Indore khajrana temple: ದೇಶದೆಲ್ಲೆಡೆ ರಾಖಿ ಹಬ್ಬ ಶುರುವಾಗಿದೆ. ಅಕ್ಕ-ತಂಗಿಯರಿಗೆ ರಾಖಿ ಕಟ್ಟಲು ಸಹೋದರಿಯರು ತಯಾರಾಗುತ್ತಿದ್ದಾರೆ. ಆದರೆ ಹಿಂದೂಗಳ ಈ ಮಹತ್ವದ ಹಬ್ಬವನ್ನು ಆಚರಿಸಲು ಭಾರತೀಯರು ಮಾತ್ರ ಸಿದ್ಧರಿಲ್ಲ.. ನೇಪಾಳ, ಪಾಕಿಸ್ತಾನದಂತಹ ದೇಶಗಳ ಜನರೂ ಸಿದ್ಧರಾಗಿದ್ದಾರೆ. ಮಾರುಕಟ್ಟೆಯಲ್ಲಿ ವಿವಿಧ ರಾಖಿಗಳು ರಾರಾಜಿಸುತ್ತಿವೆ. ಈ ಮಧ್ಯೆ ಭಾರತದಲ್ಲಿ ಬಹಳ ದೊಡ್ಡ ರಾಖಿಯನ್ನು ಸಿದ್ಧಪಡಿಸಿದ್ದಾರೆ. ಗಣಪತಿ ದೇವರಿಗೆ ಈ ರಾಖಿ ಕಟ್ಟಲು ಸಜ್ಜಾಗುತ್ತಿದ್ದಾರೆ.
2 / 9
ಮಧ್ಯಪ್ರದೇಶದ ಇಂದೋರ್ ನಗರದಲ್ಲಿ ಪ್ರತಿಯೊಂದು ಕೆಲಸವು ತುಂಬಾ ವಿಶೇಷವಾಗಿದೆ. ಅದು ನೈರ್ಮಲ್ಯದ ವಿಷಯವಾಗಿರಲಿ ಅಥವಾ ವಿಮಾನ ನಿಲ್ದಾಣವಾಗಿರಲಿ. ಈ ವರ್ಷ ರಾಖಿ ಹುಣ್ಣಿಮೆ ದಿನದಂದು, ಇಂದೋರ್ ಇತರೆ ನಗರಗಳಿಗಿಂತ ಭಿನ್ನವಾಗಿ ಸುದ್ದಿಯಲ್ಲಿದೆ. ಇಂದೋರ್‌ನ ಕುಟುಂಬವೊಂದು ಅತಿ ದೊಡ್ಡ, ವಿಶೇಷ, ಅದ್ಧೂರಿ ರಾಖಿಯನ್ನು ಸಿದ್ಧಪಡಿಸಿದೆ. ಈ ರಾಖಿಯನ್ನು ಶ್ರೀ ಖಜರಾನ ಗಣೇಶನಿಗೆ ಅರ್ಪಿಸಲಾಗುತ್ತದೆ. ಈ ದೇವಾಲಯವು ದೇಶದ ಪ್ರಸಿದ್ಧ ದೇವಾಲಯಗಳಲ್ಲಿ ಒಂದಾಗಿದೆ. ಪಾಲ್ರೇಚಾ ಕುಟುಂಬದ 20 ಮಂದಿ ಸೇರಿ ಈ ಬೃಹತ್ ರಾಖಿಯನ್ನು ತಯಾರಿಸಿದ್ದಾರೆ. ಕುಟುಂಬಸ್ಥರು ಈ ರಾಖಿಯನ್ನು ಪೂರ್ಣಗೊಳಿಸಲು 25 ದಿನ ತೆಗೆದುಕೊಂಡಿದ್ದಾರೆ. ಈ ರಾಖಿ ಎಷ್ಟು ಸುಂದರವಾಗಿದೆಯೋ ಅಷ್ಟೇ ಪ್ರಾಮುಖ್ಯತೆಯನ್ನೂ ಹೊಂದಿದೆ. ವಾಸ್ತವವಾಗಿ, ಈ ರಾಖಿ ಪರಿಸರ ಸಂರಕ್ಷಣೆ ಮತ್ತು ದೇಶಭಕ್ತಿಯನ್ನು ಸಂಕೇತಿಸುತ್ತದೆ.
3 / 9
ಮಹಾರಾಷ್ಟ್ರ ಮತ್ತು ಗುಜರಾತ್‌ನಿಂದ ತಂದ ಸಾಮಗ್ರಿಗಳೊಂದಿಗೆ: ರಾಖಿಯನ್ನು ಅನನ್ಯವಾಗಿ ಸುಂದರಗೊಳಿಸಲು ವಿವಿಧ ನಗರಗಳು, ಸ್ಥಳಗಳಿಂದ ವಸ್ತುಗಳನ್ನು ತರಿಸಿದ್ದಾರೆ. ಈ ರಾಖಿ ತಯಾರಿಸಲು ಮಹಾರಾಷ್ಟ್ರ ಮತ್ತು ಗುಜರಾತ್‌ನಿಂದ ಹಲವು ಅಗತ್ಯ ಸಾಮಗ್ರಿಗಳನ್ನು ಖರೀದಿಸಲಾಗಿದೆ. ಈ ರಾಖಿಯನ್ನು ಅಲಂಕರಿಸಲು ಹೈದರಾಬಾದಿನ ಮುತ್ತುಗಳು, ಕಾರ್ಡ್ಬೋರ್ಡ್ ರಟ್ಟು, ರಶ್ಮಿ ನಕ್ಷತ್ರಗಳು ಮತ್ತು ರತ್ನಗಳನ್ನು ಬಳಸಲಾಗಿದೆ. ಇದಲ್ಲದೆ, ಪರಿಣಿತ ಕರಕುಶಲತೆಯು ಈ ರಾಖಿಯನ್ನು ಆಕರ್ಷಕವಾಗಿ ಮಾಡಿದೆ.
4 / 9
ದಾಖಲೆ ನಿರ್ಮಿಸಿದ ಇಂದೋರ್: ಸ್ವಚ್ಛತೆ ಮತ್ತು ಹಸಿರಿನ ವಿಷಯದಲ್ಲಿ ದಾಖಲೆ ನಿರ್ಮಿಸುವ ಮೂಲಕ ಇಂದೋರ್ ಇದುವರೆಗೆ ದೇಶದ ಇತರೆ ನಗರಗಳಿಗಿಂತ ಮುಂದಿದೆ. ಇದೀಗ ಅತಿ ದೊಡ್ಡ ರಾಖಿ ಕಟ್ಟಿ ಗಣೇಶನಿಗೆ ಅರ್ಪಿಸುವ ಮೂಲಕ ಹೊಸ ದಾಖಲೆ ಸೃಷ್ಟಿಸಲು ಮುಂದಾಗಿದ್ದಾರೆ ಎಂದು ಈ ಗ್ರಾಮದ ಜನರು ತಿಳಿಸಿದ್ದಾರೆ. ಶ್ರೀ ಖಜರಾನಾ ಗಣೇಶ ಮಂದಿರದಲ್ಲಿ ದೇವರಿಗೆ ಅರ್ಪಿಸುವ ಅತಿ ದೊಡ್ಡ ರಾಖಿಯ ಮೂಲಕ ವು ದಾಖಲೆ ನಿರ್ಮಿಸಿದ್ದೇವೆ ಎಂದು ಬಹಿರಂಗಪಡಿಸಿದರು. ಈ ನಗರದ ನಿವಾಸಿಗಳು ಹಲವು ವರ್ಷಗಳಿಂದ ದೇವರಿಗೆ ಇಂತಹ ರಾಖಿಗಳನ್ನು ಕಟ್ಟುತ್ತಿದ್ದಾರೆ. ಈ ಸಂಪ್ರದಾಯ ವರ್ಷಗಳಿಂದ ನಡೆದುಕೊಂಡು ಬಂದಿದೆ.
5 / 9
ರಾಖಿಯ ವಿಶೇಷತೆಗಳು: ಈ ವರ್ಷ ಮಾಡಿದ ಬೃಹತ್ ರಾಖಿ ಪರಿಸರ ಸಂರಕ್ಷಣೆ, ದೇಶಪ್ರೇಮವನ್ನು ತೋರಿಸುತ್ತದೆ. ಮೊದಲಿಗಿಂತ ಭಿನ್ನವಾಗಿ ವಿಶೇಷವಾಗಿ ಸಿದ್ಧಪಡಿಸಲಾಗಿದೆ. ಈ ಬೃಹತ್ ರಾಖಿಯನ್ನು ತಯಾರಿಸಲು ಪಾಲ್ರೇಚಾ ಕುಟುಂಬ 25 ದಿನಗಳನ್ನು ತೆಗೆದುಕೊಂಡಿತು.
6 / 9
ಪ್ರತಿ ವರ್ಷ ರಾಖಿ ಕಟ್ಟುವ ಪಾಲ್ರೇಚಾ ಕುಟುಂಬ: ಪ್ರತಿ ವರ್ಷದಂತೆ ಈ ವರ್ಷವೂ 40 x 80 ಇಂಚಿನ ಬೃಹತ್ ರಾಖಿ ಸಿದ್ಧಪಡಿಸಿದರು. ಪ್ರಧಾನಿ ನರೇಂದ್ರ ಮೋದಿ ಅವರು ನಡೆಸುತ್ತಿರುವ 51 ಲಕ್ಷ ಗಿಡ ನೆಡುವ ಕಾರ್ಯಕ್ರಮ ಹಾಗೂ ತ್ರಿವರ್ಣ ಧ್ವಜ ಅಭಿಯಾನದ ಪ್ರಚಾರದ ಉದ್ದೇಶದಿಂದ ಈ ಬಾರಿ ಬೃಹತ್ ರಾಖಿ ಕಟ್ಟಿರುವುದಾಗಿ ತಿಳಿದುಬಂದಿದೆ. ಈ ರಾಖಿ ದೇಶಭಕ್ತಿಯನ್ನು ಉತ್ತೇಜಿಸುತ್ತದೆ.
7 / 9
ರೇಷ್ಮೆ ದಾರ ಮತ್ತು ರತ್ನಾಭರಣದ ರಾಖಿ: ಈ ರಾಖಿಯನ್ನು ರೇಷ್ಮೆ ದಾರ ಮತ್ತು ಅಲಂಕಾರಿಕ ರತ್ನಗಳಿಂದ ಸುಂದರವಾಗಿ ಅಲಂಕರಿಸಲಾಗಿದೆ. ಈ ಅಲಂಕಾರವು ರಾಖಿಯನ್ನು ಹೆಚ್ಚು ಆಕರ್ಷಕವಾಗಿ ಮಾಡಿದೆ. ರಾಖಿಯಲ್ಲಿ ಹೈದರಾಬಾದಿನ ಮುತ್ತುಗಳನ್ನು ಬಳಸಿದ್ದಾರೆ. ಇದಲ್ಲದೆ, ಕೆಲವು ವಸ್ತುಗಳನ್ನು ಮಹಾರಾಷ್ಟ್ರ ಮತ್ತು ಗುಜರಾತ್‌ನಿಂದ ಸಂಗ್ರಹಿಸಲಾಗಿದೆ. ಈ ರಾಖಿಯನ್ನು ಆಗಸ್ಟ್ 19 ರಂದು ಅಂದರೆ ಇಂದು ಶ್ರೀ ಖಜರಾನ ಗಣೇಶ ದೇವಸ್ಥಾನದಲ್ಲಿ ಗಣೇಶನಿಗೆ ಅರ್ಪಿಸಲಾಗುತ್ತದೆ.
8 / 9
40 x 80 ಇಂಚಿನ ಈ ರಾಖಿಯಲ್ಲಿ ಒಂದು ಲಕ್ಷಕ್ಕೂ ಹೆಚ್ಚು ಮಣಿಗಳು ಮತ್ತು ವಿವಿಧ ಕಲ್ಲುಗಳನ್ನು ಬಳಸಲಾಗಿದೆ. ಇದರಲ್ಲಿ ಪಾರಿಜಾತ, ಅಶೋಕ, ಖರ್ಜೂರ, ತೆಂಗಿನ ಮರಗಳ ಆಕಾರಗಳ ಜೊತೆಗೆ ಕೈಲಾಸ ಪರ್ವತ, ಗೋಮುಖ ಗಂಗೆಯ ಅದ್ಭುತ ಬಣ್ಣಗಳನ್ನು ಕೆತ್ತಲಾಗಿದೆ. ಜತೆಗೆ ಹೈದರಾಬಾದಿ ಮುತ್ತುಗಳು, ಅಮೆರಿಕದ ವಜ್ರಗಳು, ನಕ್ಷತ್ರಗಳು, ಕಲ್ಪ ವೃಕ್ಷ, ನೃತ್ಯ ಮಾಡುವ ರಾಷ್ಟ್ರೀಯ ಪಕ್ಷಿ ನವಿಲು ಸೃಷ್ಟಿಗೆ ಆಕರ್ಷಕ ಲುಕ್ ನೀಡಿದೆ.
9 / 9
ತ್ರಿವರ್ಣಗಳಿಂದ ಮಾಡಲ್ಪಟ್ಟ ಭಾರತದ ನಕ್ಷೆ: ರಾಖಿಯು ಭಾರತದ ನಕ್ಷೆಯನ್ನು ತ್ರಿವರ್ಣ ಧ್ವಜದ ರೂಪದಲ್ಲಿ ತೋರಿಸುತ್ತದೆ. ಭಾರತದ ಭೂಪಟವನ್ನು ವಿಶೇಷವಾಗಿ ತ್ರಿವರ್ಣ ಧ್ವಜಗಳಿಂದ ಅಲಂಕರಿಸಲಾಗಿದೆ. ರಾಖಿಯ ಮೂಲಕ ನಿಸರ್ಗ ಪ್ರೇಮ, ದೇಶಪ್ರೇಮ ವ್ಯಕ್ತವಾಗಲಿದೆ. ಇದು ತುಂಬಾ ಸುಂದರ ಮತ್ತು ಆಕರ್ಷಕವಾಗಿದೆ. ಈ ಸುಂದರವಾದ ರಾಖಿಯನ್ನು ನೋಡಲು ತುಂಬಾ ಜನ ಸೇರುತ್ತಾರೆ. ಈ ಬೃಹತ್ ರಾಖಿ ನೋಡಿ ಜನರು ಪಾಲ್ರೇಚಾ ಕುಟುಂಬಸ್ಥರನ್ನು ಪ್ರಶಂಸಿಸುತ್ತಿದ್ದಾರೆ.
Published On - 10:59 am, Mon, 19 August 24