- Kannada News Photo gallery Bjp mla SR Vishwanath and congress byrathi suresh become relatives, accepted children Love And arranged marriage News In kannada
ಪಕ್ಷ, ಜಾತಿ ಮೀರಿದ ಪ್ರೀತಿ: ಮಕ್ಕಳ ಅಂತರ್ಜಾತಿ ಪ್ರೀತಿಗೆ ಒಪ್ಪಿಗೆ, ಬಿಜೆಪಿ-ಕಾಂಗ್ರೆಸ್ ನಾಯಕರು ಈಗ ಬೀಗರು
ರಾಜಕಾರಣದಲ್ಲಿ ಯಾರು ಶತ್ರುಗಳೂ ಅಲ್ಲ. ಮಿತ್ರರೂ ಅಲ್ಲ. ಚುನಾವಣಾ ರಾಜಕೀಯದಲ್ಲಿ ಬದ್ಧ ವೈರಿಗಳಾಗಿರೋರು ಎಲೆಕ್ಷನ್ ಮುಗಿದ ಮೇಲೆ ದೋಸ್ತಿಗಳಾಗೋದು ಹೊಸದೇನೂ ಅಲ್ಲ. ರಾಜಕೀಯದ ಚದುರಂಗದಲ್ಲಿ ಜಿದ್ದಾಜಿದ್ದಿನಿಂದ ಹೋರಾಡುವ ಕಾಂಗ್ರೆಸ್, ಬಿಜೆಪಿ ನಾಯಕರು ಸಂಬಂಧಿಕರಾದ ಹಲವಾರು ಉದಾಹರಣೆಗಳಿವೆ. ಅದರಂತೆ ಕರ್ನಾಟಕ ರಾಜ್ಯ ರಾಜಕಾರಣದಲ್ಲಿ ಮತ್ತೊಂದು ಅಪರೂಪದ ಸಂಬಂಧ ಬೆಸೆದುಕೊಂಡಿದೆ. ಪಕ್ಷ ಬೇರೆ, ಜಾತಿ ಬೇರೆ ಆದರೂ, ಮಕ್ಕಳ ಅಂತರ್ಜಾತಿ ಪ್ರೀತಿಗೆ ರಾಜ್ಯದ ಇಬ್ಬರು ಪ್ರಮುಖ ರಾಜಕಾರಣಿಗಳು ಒಪ್ಪಿಗೆ ಸೂಚಿಸಿದ್ದಾರೆ. ಹೌದು...ಕಾಂಗ್ರೆಸ್ ನಾಯಕ, ಹಾಲಿ ಸಚಿವ ಬೈರತಿ ಸುರೇಶ್ ಹಾಗೂ ಯಲಹಂಕ ಬಿಜೆಪಿ ಶಾಸಕ ವಿಶ್ವನಾಥ್ ಪಕ್ಷ ಬೇರೆ-ಬೇರೆ ಜಾತಿ ಬೇರೆ ಬೇರೆಯಾಗಿದ್ದರೂ ಸಹ ಮಕ್ಕಳ ಪ್ರೀತಿಗೆ ಸಮ್ಮತಿಸಿ ಈಗ ಅವರ ಮದುವೆಗೂ ಮೊದಲ ನಿಶ್ಚಿತಾರ್ಥ ನೆರವೇರಿಸಿ ಬೀಗರಾಗಿದ್ದಾರೆ.
Updated on: Aug 28, 2024 | 11:08 PM

ಕರ್ನಾಟಕದ ಎರಡು ರಾಷ್ಟ್ರೀಯ ಪಕ್ಷಗಳಾದ ಕಾಂಗ್ರೆಸ್ ಹಾಗೂ ಬಿಜೆಪಿಯ ಪ್ರಮುಖ ನಾಯಕರು ಬೀಗರಾಗಿದ್ದಾರೆ. ಬಿಜೆಪಿ ಶಾಸಕ ಎಸ್ಆರ್ ವಿಶ್ವನಾಥ್ ಹಾಗೂ ಕಾಂಗ್ರೆಸ್ನ ನಗರಾಭಿವೃದ್ಧಿ ಸಚಿವರೂ ಆಗಿರುವ ಭೈರತಿ ಸುರೇಶ್ ಪಕ್ಷ, ಸಿದ್ಧಾಂತ ಹಾಗೂ ಜಾತಿಯನ್ನೂ ಮೀರಿ ಬೀಗರಾಗಿದ್ದಾರೆ.

ಎಸ್ಆರ್ ವಿಶ್ವನಾಥ್ ಬಿಜೆಪಿಯ ಯಲಹಂಕ ಶಾಸಕ, ಇನ್ನು ಬೈರತಿ ಸುರೇಶ್ ಪಕ್ಕದ ಹೆಬ್ಬಾಳ ಕ್ಷೇತ್ರದ ಶಾಸಕ. ವಿಶ್ವನಾಥ್ ಅವರ ಪುತ್ರಿ ಅಪೂರ್ವ ಹಾಗೂ ಬೈರತಿ ಸುರೇಶ್ ಪುತ್ರ ಸಂಜಯ್ ಅವರು ಲವ್ ಕಮ್ ಅರೇಂಜ್ಡ್ ಮ್ಯಾರೇಜ್ಗೆ ಎರಡೂ ಕುಟುಂಬಗಳು ಪರಸ್ಪರ ಒಪ್ಪಿಕೊಂಡಿದ್ದರಿಂದ ಇವರ ಎಂಗೇಜ್ಮೆಂಟ್ ನೆರವೇರಿತು.

ಯಲಹಂಕ ಬಿಜೆಪಿ ಶಾಸಕ ಎಸ್ಆರ್ ವಿಶ್ವನಾಥ್ ಪುತ್ರಿ ಹಾಗೂ ಸಚಿವ ಬೈರತಿ ಸುರೇಶ್ ಅವರ ಪುತ್ರನ ನಿಶ್ಚಿತಾರ್ಥ ಇಂದು (ಆಗಸ್ಟ್ 28) ಬೆಂಗಳೂರಿನ ಖಾಸಗಿ ಹೋಟೆಲ್ನಲ್ಲಿ ನಡೆಯಿತು. ಎರಡು ಭಿನ್ನ ವಿಚಾರಧಾರೆಗಳ ಪಕ್ಷಗಳ ನಾಯಕರಾಗಿದ್ದರೂ ಬೀಗರಾಗುತ್ತಿರುವುದು ವಿಶೇಷ.

ಇಂದು ಬೆಂಗಳೂರಿನ ಖಾಸಗಿ ಹೋಟೆಲ್ನಲ್ಲಿ ನಡೆದ ಅಪೂರ್ವ ಮತ್ತು ಸಂಜಯ್ ನಿಶ್ಚಿತಾರ್ಥ ಸಮಾರಂಭದಲ್ಲಿ ಪ್ರಮುಖ ಗಣ್ಯರು ಭಾಗವಹಿಸಿದ್ದರು. ಡಿಕೆ ಶಿವಕುಮಾರ್, ರಾಜ್ಯಪಾಲ ಥಾವರ್ ಚೆಂದ ಗೆಹ್ಲೋಟ್ ಸೇರಿದಂತೆ ಎರಡೂ ಪಕ್ಷದ ಶಾಸಕರು, ಸಚಿವರು ಭಾಗಿಯಾಗಿ ನವದಂಪತಿಗೆ ಶುಭ ಹಾರೈಸಿದರು.

ಇನ್ನು ತಮ್ಮ ಆಪ್ತ ಸಚಿವರಾಗಿರುವ ಬೈರತಿ ಸುರೇಶ್ ಪುತ್ರನ ನಿಶ್ಚಿತಾರ್ಥ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಭಾಗವಹಿಸಿ ನವಜೋಡಿಗಳಿಗೆ ಶುಭ ಕೋರಿದರು. ಈ ವೇಳೆ ವಿಶ್ವನಾಥ್ ಮತ್ತು ಬೈರತಿ ಸುರೇಶ್ ಕುಟುಂಬ ಸಿಎಂ ಜೊತೆ ಗ್ರೂಪ್ ಫೋಟೋ ತೆಗೆಸಿಕೊಂಡಿತು.

ಯಲಹಂಕ ಶಾಸಕ ವಿಶ್ವನಾಥ್ ಮತ್ತು ನಗರಾಭಿವೃದ್ಧಿ ಸಚಿವ ಸುರೇಶ್ ಎರಡು ಭಿನ್ನ ವಿಚಾರಧಾರೆಗಳ ಪಕ್ಷಗಳ ನಾಯಕರಾಗಿದ್ದರೂ ಬೀಗರಾಗುತ್ತಿರುವುದು ವಿಶೇಷ, ರಾಜಕೀಯವೇ ಬೇರೆ ವೈಯಕ್ತಿಕ ಬದುಕು ಮತ್ತು ಅದರ ಉದ್ದೇಶಗಳೇ ಬೇರೆ. ಎರಡೂ ಕುಟುಂಬಗಳಿಗೆ ಅಭಿನಂದನೆ ಮತ್ತು ಶುಭಾಶಯಗಳು.




