ಬೆಂಗಳೂರು ನಮ್ಮ ಮೆಟ್ರೋ: ಹೊಸ ಮೆಟ್ರೋ ರೈಲುಗಳಿಗಾಗಿ ಸಿದ್ಧವಾಗುತ್ತಿವೆ ಐದು ಡಿಪೋಗಳು

| Updated By: Digi Tech Desk

Updated on: Aug 05, 2024 | 3:33 PM

ಬೆಂಗಳೂರು, ಆಗಸ್ಟ್ 5: ಬೆಂಗಳೂರಿನಲ್ಲಿ ಮುಂದಿನ ಕೆಲವೇ ವರ್ಷಗಳಲ್ಲಿ ಮೆಟ್ರೋ ರೈಲುಗಳ ಸಂಖ್ಯೆ ಇನ್ನಷ್ಟು ಹೆಚ್ಚಾಗಲಿದೆ. ಹೊಸ ಹೊಸ ರೈಲುಗಳು ಬರುತ್ತಿದ್ದಂತೆಯೇ ಅವುಗಳ ನಿಲುಗಡೆಗೆ, ನಿರ್ವಹಣೆಗೆ ಬೇಕಾದ ವ್ಯವಸ್ಥೆಯನ್ನು ಮಾಡಿಕೊಳ್ಳಲು ಬಿಎಂಆರ್​ಸಿಎಲ್​ ಈಗಲೇ ಮುಂದಾಗಿದ್ದು, ಮೂರು ಡಿಪೋಗಳ ಪರಿಷ್ಕರಣೆ ಸೇರಿದಂತೆ ಒಟ್ಟು ಐದು ಡಿಪೋಗಳನ್ನು ಸಿದ್ಧಪಡಿಸಲು ಮುಂದಾಗಿದೆ.

1 / 7
ಬೆಂಗಳೂರು ನಮ್ಮ ಮೆಟ್ರೋ ಇದೀಗ ಹೊಸ ಡಿಪೋಗಳ ನಿರ್ಮಾಣ ಕಾರ್ಯ ಆರಂಭಿಸಿದೆ. ಸದ್ಯ ಅಸ್ತಿತ್ವದಲ್ಲಿರುವ ಮೂರು ಡಿಪೋಗಳನ್ನು ಮೇಲ್ದರ್ಜೆಗೇರಿಸುವುದರ ತೆಗೆ ಒಟ್ಟು ಡಿಪೋಗಳ ಸಂಖ್ಯೆ ಐದಕ್ಕೆ ಹೆಚ್ಚಿಸಲು ಬಿಎಮಾರ್​​ಸಿಎಲ್ ಕಾರ್ಯನಿರ್ವಹಿಸುತ್ತಿದೆ. 2041 ರವರೆಗೆ ಮೆಟ್ರೊದಿಂದ ಕಾರ್ಯಾಚರಿಸಬೇಕಾದ ರೈಲುಗಳ ಸ್ಥಿರತೆ ಮತ್ತು ನಿರ್ವಹಣೆಯ ಅಗತ್ಯತೆಗಳನ್ನು ಪೂರೈಸಲು ಈ ಕ್ರಮ ಕೈಗೊಳ್ಳಲಾಗುತ್ತಿದೆ.

2 / 7
ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

3 / 7
ಹೊರ ವರ್ತುಲ ರಸ್ತೆಗೆ (ನಮ್ಮ ಮೆಟ್ರೋ ಹಂತ-2ಎ) ಓಡಿಸಲಾಗುವ 16 ರೈಲುಗಳು ಮತ್ತು ಏರ್‌ಪೋರ್ಟ್ ಮಾರ್ಗದಲ್ಲಿ ಸಂಚರಿಸಲಿರುವ 21 ರೈಲುಗಳು (ಹಂತ-2ಬಿ) ಇವೆರಡೂ ವಿರುದ್ಧ ದಿಕ್ಕಿನಲ್ಲಿ ಚಲಿಸುತ್ತವೆ ಮತ್ತು ಈ ಡಿಪೋ ಇವೆರಡರ ಮಧ್ಯದಲ್ಲಿರುತ್ತದೆ.

4 / 7
ಮೇಲ್ದರ್ಜೆಗೇರಿಸಲಾದ ಈ ಡಿಪೋದಲ್ಲಿ, ಒಂದು ಹಂತ ಅಂಡರ್​ಗ್ರೌಂಡ್​​ನಲ್ಲಿರಲಿದ್ದು, ಇನ್ನೊಂದು ಹಂತವು ಗ್ರೇಡ್‌ ಲೆವೆಲ್​ನದ್ದಾಗಿರುತ್ತದೆ. ಅಂಡರ್​ಗ್ರೌಂಡ್ ಮಾರ್ಗವು 21 ಸ್ಟೇಬ್ಲಿಂಗ್ ಲೈನ್‌ಗಳನ್ನು ಹೊಂದಿರುತ್ತದೆ ಮತ್ತು ಗ್ರೇಡ್ ಲೆವೆಲ್​​ನಲ್ಲಿ 20 ಲೈನ್‌ಗಳು ಇರುತ್ತವೆ ಎಂದು ಅವರು ತಿಳಿಸಿದ್ದಾರೆ.

5 / 7
ನಮ್ಮ ಮೆಟ್ರೋ ರೈಲು ಸೇವೆಯಲ್ಲಿ ವ್ಯತ್ಯಯ: ಈ ದಿನಗಳಂದು ಸಂಪೂರ್ಣ ಸ್ಥಗಿತ

6 / 7
ವಿಮಾನ ನಿಲ್ದಾಣದ ಬಳಿ ಶೆಟ್ಟಿಗೆರೆ ಡಿಪೋವನ್ನು 182.33 ಕೋಟಿ ರೂ.ಗಳಲ್ಲಿ ನಿರ್ಮಿಸಲಾಗುತ್ತಿದೆ. ಇಲ್ಲಿ ಶೇ 49ರಷ್ಟು ಕಾಮಗಾರಿ ಪೂರ್ಣಗೊಂಡಿದೆ. ಇದು ಭವಿಷ್ಯದಲ್ಲಿ ನಿರ್ಮಿಸಲಿರುವ 12 ಎಲಿವೇಟೆಡ್ ಲೈನ್‌ಗಳನ್ನು ಹೊಂದಿರುತ್ತದೆ. ಇದು 21 ರೈಲುಗಳಿಗೆ ಅವಕಾಶ ಕಲ್ಪಿಸುತ್ತದೆ. ಹಂತ-2B ಯ ಕಾರ್ಯಾಚರಣೆ ಮತ್ತು ನಿರ್ವಹಣೆ ಅಗತ್ಯತೆಗಳನ್ನು ಇಲ್ಲಿ ನಿರ್ವಹಿಸಲಾಗುವುದು ಎಂದು ಮತ್ತೊಬ್ಬರು ಅಧಿಕಾರಿ ತಿಳಿಸಿದ್ದಾರೆ.

7 / 7
ಕೊತ್ತನೂರು ಡಿಪೋದಲ್ಲಿ ಶೇ 66 ರಷ್ಟು ಕೆಲಸ ಪೂರ್ಣಗೊಂಡಿದ್ದರೆ, ಅಂಜನಾಪುರ (ಉತ್ತರ-ದಕ್ಷಿಣ ಹಸಿರು ಮಾರ್ಗ) ಡಿಪೋದಲ್ಲಿ ಶೇ 50 ರಷ್ಟು ಕೆಲಸ ಮುಗಿದಿದೆ ಎಂದು ಅಧಿಕಾರಿ ಹೇಳಿದ್ದಾರೆ.

Published On - 2:55 pm, Mon, 5 August 24