
ಫ್ರಾನ್ಸ್ನಲ್ಲಿ ಪ್ರತಿಷ್ಠಿತ ಕಾನ್ ಸಿನಿಮೋತ್ಸವ ಆರಂಭ ಆಗಿದೆ. ಅನೇಕ ಸೆಲೆಬ್ರಿಟಿಗಳು ರೆಡ್ ಕಾರ್ಪೆಟ್ ಮೇಲೆ ಹೆಜ್ಜೆ ಹಾಕಿದ್ದಾರೆ. ಭಾರತದ ಸಾರಾ ಅಲಿ ಖಾನ್ ಸೇರಿ ಅನೇಕರು ಕೆಂಪು ಹಾಸಿನ ಮೇಲೆ ನಡೆದಿದ್ದಾರೆ.

ಇಶಾ ಗುಪ್ತಾ ಅವರು ಸಖತ್ ಬೋಲ್ಡ್ ಆಗಿ ಕಾಣಿಸಿಕೊಂಡಿದ್ದಾರೆ. ಕೆಂಪುಹಾಸಿನ ಮೇಲೆ ಅವರು ಹೆಜ್ಜೆ ಹಾಕಿ ಗಮನ ಸೆಳೆದಿದ್ದಾರೆ.

ಬಾಲಿವುಡ್ನಲ್ಲಿ ಈಗತಾನೇ ಗುರುತಿಸಿಕೊಳ್ಳುತ್ತಿರುವ ಸಾರಾ ಅಲಿ ಖಾನ್ಗೂ ಕಾನ್ ಸಿನಿಮೋತ್ಸವದಲ್ಲಿ ಹೆಜ್ಜೆ ಹಾಕುವ ಅವಕಾಶ ಸಿಕ್ಕಿದೆ. ಕಾನ್ ಸಿನಿಮೋತ್ಸವದಲ್ಲಿ ಅವರು ಕಾಣಿಸಿಕೊಂಡಿದ್ದು ಇದೇ ಮೊದಲು.

ಮಾಡೆಲಿಂಗ್ ಲೋಕದಿಂದ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿರೋ ಮಾನುಶಿ ಚಿಲ್ಲರ್ ಅವರು ಪ್ರತಿಷ್ಠಿತ ಸಿನಿಮೋತ್ಸವದಲ್ಲಿ ಮಿಂಚಿದ್ದಾರೆ.

ಟೀಂ ಇಂಡಿಯಾ ಮಾಜಿ ಸ್ಪಿನ್ನರ್ ಅನಿಲ್ ಕುಂಬ್ಳೆ ಅವರು ಕಾನ್ ಸಿನಿಮೋತ್ಸವದಲ್ಲಿ ಭಾಗಿ ಆಗಿದ್ದಾರೆ. ಈ ಫೋಟೋನ ಅವರು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
Published On - 8:00 am, Wed, 17 May 23