- Kannada News Photo gallery Cricket photos Kannada News | Virat Kohli, Faf du Plessis and RCB team visit Siraj's house
IPL 2023: ವಿರಾಟ್ ಕೊಹ್ಲಿ ಮೇಲಿನ ಸಿರಾಜ್ರ ವಿಶೇಷ ಅಭಿಮಾನಕ್ಕೆ ಭಾರೀ ಮೆಚ್ಚುಗೆ
IPL 2023 Kannada: ಟೀಮ್ ಇಂಡಿಯಾ ಪರ ವಿಕೆಟ್ ಪಡೆದು ವಿರಾಟ್ ಕೊಹ್ಲಿ ಜೊತೆ ಸಂಭ್ರಮಿಸುತ್ತಿರುವ ವಿಶೇಷ ಫೋಟೋವೊಂದನ್ನು ಸಿರಾಜ್ ಫ್ರೇಮ್ ಹಾಕಿಸಿ ಮನೆಯಲ್ಲಿರಿಸಿದ್ದಾರೆ.
Updated on:May 16, 2023 | 11:50 PM

IPL 2023: ಐಪಿಎಲ್ನ 65ನೇ ಪಂದ್ಯದಲ್ಲಿ ಆರ್ಸಿಬಿ ಹಾಗೂ ಎಸ್ಆರ್ಹೆಚ್ ತಂಡಗಳು ಮುಖಾಮುಖಿಯಾಗಲಿದೆ. ಗುರುವಾರ ನಡೆಯಲಿರುವ ಈ ಪಂದ್ಯಕ್ಕಾಗಿ ಈಗಾಗಲೇ ಆರ್ಸಿಬಿ ಆಟಗಾರರು ಹೈದರಾಬಾದ್ಗೆ ಬಂದಿಳಿದಿದೆ.

ಇನ್ನು ತವರಿಗೆ ಆಗಮಿಸಿದ ಆರ್ಸಿಬಿ ಆಟಗಾರರಿಗೆ ಮೊಹಮ್ಮದ್ ಸಿರಾಜ್ ವಿಶೇಷ ಆತಿಥ್ಯ ನೀಡಿದ್ದಾರೆ. ತಮ್ಮ ಹೊಸ ಮನೆಗೆ ಸಹ ಆಟಗಾರರನ್ನು ಆಹ್ವಾನಿಸಿದ ಆರ್ಸಿಬಿ ವೇಗಿ ಭೋಜನ ವ್ಯವಸ್ಥೆ ಮಾಡಿದ್ದರು.

ಇದೀಗ ಸಿರಾಜ್ ಅವರ ಮನೆಯಲ್ಲಿ ಕಾಣಿಸಿಕೊಂಡ ಆರ್ಸಿಬಿ ಆಟಗಾರರ ಫೋಟೋಗಳು ವೈರಲ್ ಆಗಿದೆ. ಹೀಗೆ ವೈರಲ್ ಆಗಿರುವ ಫೋಟೋಗಳಲ್ಲಿ ಎಲ್ಲರ ಗಮನ ಸೆಳೆದಿರುವುದು ಗೋಡೆ ಮೇಲೆ ಫ್ರೇಮ್ ಹಾಕಿಟ್ಟಿರುವ ಫೋಟೋ.

ಹೌದು, ಟೀಮ್ ಇಂಡಿಯಾ ಪರ ವಿಕೆಟ್ ಪಡೆದು ವಿರಾಟ್ ಕೊಹ್ಲಿ ಜೊತೆ ಸಂಭ್ರಮಿಸುತ್ತಿರುವ ವಿಶೇಷ ಫೋಟೋವೊಂದನ್ನು ಸಿರಾಜ್ ಫ್ರೇಮ್ ಹಾಕಿಸಿ ಮನೆಯಲ್ಲಿರಿಸಿದ್ದಾರೆ.

ವಿರಾಟ್ ಕೊಹ್ಲಿ ಮೇಲಿನ ಮೊಹಮ್ಮದ್ ಸಿರಾಜ್ ಅವರ ಅಭಿಮಾನಕ್ಕೆ ಇದೀಗ ಕಿಂಗ್ ಕೊಹ್ಲಿ ಅಭಿಮಾನಿಗಳಿಂದ ಭಾರೀ ಮೆಚ್ಚುಗೆಗಳು ವ್ಯಕ್ತವಾಗುತ್ತಿದೆ.

ಅಂದಹಾಗೆ ಮೊಹಮ್ಮದ್ ಸಿರಾಜ್ ಅವರ ಕ್ರಿಕೆಟ್ ಕೆರಿಯರ್ ರೂಪಿಸುವಲ್ಲಿ ವಿರಾಟ್ ಕೊಹ್ಲಿ ಪಾತ್ರ ಮಹತ್ವದ್ದು. ಆರ್ಸಿಬಿ ಪರ ಸಾಧಾರಣ ಬೌಲರ್ ಆಗಿ ಕಾಣಿಸಿಕೊಂಡಿದ್ದ ಯುವ ವೇಗಿಯನ್ನು ಕೊಹ್ಲಿ ಸದಾ ಬೆಂಬಲಿಸುತ್ತಾ ಬಂದಿದ್ದರು. ಸ್ಟಾರ್ ಆಟಗಾರನಿಂದ ಸಿಕ್ಕ ಬೆಂಬಲದೊಂದಿಗೆ ಸಿರಾಜ್ ಅತ್ಯುತ್ತಮ ವೇಗಿಯಾಗಿ ರೂಪುಗೊಂಡಿದ್ದರು.

ಅಷ್ಟೇ ಅಲ್ಲದೆ ಕಿಂಗ್ ಕೊಹ್ಲಿಯ ನಾಯಕತ್ವದಲ್ಲಿ ಟೀಮ್ ಇಂಡಿಯಾಗೂ ಪಾದರ್ಪಣೆ ಮಾಡಿದ್ದ ಸಿರಾಜ್ ಆ ಬಳಿಕ ಹಿಂತಿರುಗಿ ನೋಡಿಲ್ಲ ಎಂದರೆ ತಪ್ಪಾಗಲಾರದು. ಇದೇ ಕಾರಣದಿಂದಾಗಿ ವಿರಾಟ್ ಕೊಹ್ಲಿ ಬಗ್ಗೆ ಸಿರಾಜ್ ವಿಶೇಷ ಅಭಿಮಾನ ಹೊಂದಿದ್ದಾರೆ.

ಈ ಅಭಿಮಾನ ಕೇವಲ ಮಾತುಗಳಿಗೆ ಸೀಮಿತವಾಗಿಲ್ಲ ಎಂಬುದು ಇದೀಗ ಮೊಹಮ್ಮದ್ ಸಿರಾಜ್ ಅವರ ಮನೆಯಲ್ಲಿ ಕಾಣಿಸಿಕೊಂಡ ಕಿಂಗ್ ಕೊಹ್ಲಿಯ ಫೋಟೋದೊಂದಿಗೆ ಬಹಿರಂಗವಾಗಿದೆ.

ವಿರಾಟ್ ಕೊಹ್ಲಿ ಜೊತೆ ಫೋಟೋ ತೆಗೆಸಿಕೊಂಡ ಸಿರಾಜ್ ಕುಟುಂಬ

ಆರ್ಸಿಬಿ ಆಟಗಾರರೊಂದಿಗೆ ಸಿರಾಜ್ ಕುಟುಂಬ
Published On - 8:29 pm, Tue, 16 May 23
