ನಟಿ ದಿಶಾ ಪಟಾನಿ ಅವರು ಗ್ಲಾಮರಸ್ ಆಗಿ ಪೋಸ್ ನೀಡುವಲ್ಲಿ ಯಾವತ್ತೂ ಹಿಂದೆ ಬಿದ್ದಿಲ್ಲ. ಆಗಾಗ ಅವರು ಹಾಟ್ ಫೋಟೋಗಳನ್ನು ಹಂಚಿಕೊಳ್ಳುತ್ತಾರೆ. ಆ ಫೋಟೋಗಳಿಗೆ ಅಭಿಮಾನಿಗಳು ಭರಪೂರ ಮೆಚ್ಚುಗೆ ಸೂಚಿಸುತ್ತಾರೆ.
ಸೋಶಿಯಲ್ ಮೀಡಿಯಾದಲ್ಲಿ ದಿಶಾ ಪಟಾನಿ ಅನೇಕ ಫೋಟೋಗಳನ್ನು ಶೇರ್ ಮಾಡಿಕೊಂಡಿದ್ದಾರೆ. ಆ ಪೈಕಿ ಬಿಕಿನಿ ಫೋಟೋಸ್ ಹೆಚ್ಚು ವೈರಲ್ ಆಗಿವೆ. ಕಡಲ ದಡದಲ್ಲಿ ದಿಶಾ ಅವರು ಫೋಟೋಶೂಟ್ ಮಾಡಿಸಿದ್ದಾರೆ. ಈ ಫೋಟೋಗಳು ಪಡ್ಡೆಗಳ ನಿದ್ದೆ ಕೆಡಿಸಿವೆ.
ಈ ಹಿಂದೆ ದಿಶಾ ಪಟಾನಿ ಅವರು ಈ ಫೋಟೋ ಶೇರ್ ಮಾಡಿಕೊಂಡಾಗ ಸಿಕ್ಕಾಪಟ್ಟೆ ವೈರಲ್ ಆಗಿತ್ತು. ಇದೇ ಫೋಟೋ ಇಟ್ಟುಕೊಂಡು ಬಗೆಬಗೆಯಲ್ಲಿ ಮೀಮ್ಸ್ ಮಾಡಲಾಗಿತ್ತು. ಕೆಲವರು ಸಿಕ್ಕಾಪಟ್ಟೆ ಟ್ರೋಲ್ ಕೂಡ ಮಾಡಿದ್ದರು.
ನೆಗೆಟಿವ್ ಕಮೆಂಟ್ಗಳಿಗೆ ದಿಶಾ ಪಟಾನಿ ತಲೆ ಕೆಡಿಸಿಕೊಳ್ಳುವವರಲ್ಲ. ತಮಗೆ ಇಷ್ಟವಾದ ಫೋಟೋವನ್ನು ಅವರು ಅಭಿಮಾನಿಗಳಿಗಾಗಿ ಹಂಚಿಕೊಳ್ಳುವುದನ್ನು ನಿಲ್ಲಿಸಿಲ್ಲ. ಇನ್ಸ್ಟಾಗ್ರಾಮ್ನಲ್ಲಿ ಅವರನ್ನು 5 ಕೋಟಿಗೂ ಹೆಚ್ಚು ಜನರು ಫಾಲೋ ಮಾಡುತ್ತಿದ್ದಾರೆ.
ಅನೇಕ ವರ್ಷಗಳಿಂದ ದಿಶಾ ಪಟಾನಿ ಅವರು ಬಾಲಿವುಡ್ನಲ್ಲಿ ಸಕ್ರಿಯರಾಗಿದ್ದಾರೆ. ಹಲವು ಸೂಪರ್ ಹಿಟ್ ಸಿನಿಮಾಗಳನ್ನು ನೀಡಿದ್ದಾರೆ. ಸಿನಿಮಾ ಮಾತ್ರವಲ್ಲದೇ ವೈಯಕ್ತಿಕ ಕಾರಣದಿಂದಲೂ ಅವರು ಆಗಾಗ ಸುದ್ದಿ ಆಗುತ್ತಾರೆ.
ನಟ ಟೈಗರ್ ಶ್ರಾಫ್ ಜೊತೆ ದಿಶಾ ಪಟಾನಿ ಡೇಟಿಂಗ್ ಮಾಡುತ್ತಿದ್ದಾರೆ ಎಂಬ ಮಾತಿದೆ. ಅನೇಕ ಸಂದರ್ಭದಲ್ಲಿ ಈ ಜೋಡಿ ಒಟ್ಟಾಗಿ ಕಾಣಿಸಿಕೊಂಡಿದ್ದುಂಟು. ಆದರೆ ತಮ್ಮ ಪ್ರೀತಿಯ ಬಗ್ಗೆ ಅವರು ನೇರವಾಗಿ ಯಾವುದೇ ಹೇಳಿಕೆ ನೀಡಿಲ್ಲ.