ಬಾಲಿವುಡ್ ನಟಿ, ಡಾನ್ಸರ್ ನೋರಾ ಫತೇಹಿ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ಸುದ್ದಿಯಲ್ಲಿರುತ್ತಾರೆ.
ಹೊಸ ಫೋಟೋಶೂಟ್ ಮಾಡಿಸಿಕೊಂಡು ಅದನ್ನು ಹಂಚಿಕೊಳ್ಳುತ್ತಾ, ಪಡ್ಡೆ ಹುಡುಗರ ನಿದ್ದೆಗೆಡಿಸುವ ಅವರು, ಇತ್ತೀಚೆಗೆ ಹೊಸ ಚಿತ್ರಗಳನ್ನು ಶೇರ್ ಮಾಡಿದ್ದಾರೆ.
ಮೂಲತಃ ಕೆನಡಾದವರಾದ ನೋರಾ, ತಾನು ಹೃದಯದಿಂದ ಭಾರತೀಯಳು ಎಂದು ಹೇಳಿಕೊಳ್ಳುತ್ತಾರೆ.
ಕಿರುತೆರೆ, ಬಾಲಿವುಡ್ ಸೇರಿದಂತೆ ದಕ್ಷಿಣ ಭಾರತದ ಚಿತ್ರಗಳಲ್ಲೂ ನೋರಾ ಕಾಣಿಸಿಕೊಂಡಿದ್ದು, ಬೇಡಿಕೆಯ ಕಲಾವಿದೆಯಾಗಿ ಗುರುತಿಸಿಕೊಂಡಿದ್ದಾರೆ.
ಹಲವು ಆಲ್ಬಂ ಸಾಂಗ್ಗಳಲ್ಲೂ ನೋರಾ ಕಾಣಿಸಿಕೊಂಡಿದ್ದಾರೆ.
ಅವರ ಬತ್ತಳಿಕೆಯಲ್ಲಿ ಕೆಲವು ಚಿತ್ರಗಳಿದ್ದು, ಕಿರುತೆರೆಯ ರಿಯಾಲಿಟಿ ಶೋಗಳಿಗೆ ನಿರ್ಣಾಯಕಿ/ ಅತಿಥಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ.
Published On - 8:55 am, Sun, 14 November 21