Brahmos Missiles: ಭಾರತದಿಂದ ಫಿಲಿಪೈನ್ಸ್‌ಗೆ ಹಾರಿದ ಶಕ್ತಿಶಾಲಿ ಕ್ಷಿಪಣಿ ಬ್ರಹ್ಮೋಸ್

Updated on: Apr 19, 2024 | 2:47 PM

ಭಾರತದ ಬಲಶಾಲಿ ಕ್ಷಿಪಣಿ ಬ್ರಹ್ಮೋಸ್ ಸೂಪರ್‌ಸಾನಿಕ್ ಕ್ರೂಸ್ ಇಂದು ಫಿಲಿಪೈನ್ಸ್‌ಗೆ ಹೋಗಲು ಸಿದ್ಧವಾಗಿದೆ. ಇದಕ್ಕಾಗಿ ಭಾರತ ಜತೆಗೆ ಫಿಲಿಪೈನ್ಸ್‌ ಎರಡು ವರ್ಷದ ಹಿಂದೆ USD 375 ಮಿಲಿಯನ್ (₹37,50,00,000) ಒಪ್ಪಂದವನ್ನು ಮಾಡಿಕೊಂಡಿದೆ.

1 / 6
ಭಾರತದ ಶಕ್ತಿಶಾಲಿ ಕ್ಷಿಪಣಿ ಬ್ರಹ್ಮೋಸ್ ಸೂಪರ್‌ಸಾನಿಕ್ ಕ್ರೂಸ್ ಇಂದು ಫಿಲಿಪೈನ್ಸ್‌ಗೆ ಹೋಗಲು ಸಿದ್ಧವಾಗಿದೆ. ಆಗ್ನೇಯ ಏಷ್ಯಾದ ದೇಶದೊಂದಿಗೆ ಶಸ್ತ್ರಾಸ್ತ್ರ ವ್ಯವಸ್ಥೆ ಪೂರೈಸಲು USD 375 ಮಿಲಿಯನ್ (₹37,50,00,000) ಒಪ್ಪಂದವನ್ನು ಮಾಡಿಕೊಂಡ ಎರಡು ವರ್ಷಗಳ ಇದನ್ನು ಆ ದೇಶಗಳಿಗೆ ಭಾರತ ಪೂರೈಸುತ್ತಿದೆ.

ಭಾರತದ ಶಕ್ತಿಶಾಲಿ ಕ್ಷಿಪಣಿ ಬ್ರಹ್ಮೋಸ್ ಸೂಪರ್‌ಸಾನಿಕ್ ಕ್ರೂಸ್ ಇಂದು ಫಿಲಿಪೈನ್ಸ್‌ಗೆ ಹೋಗಲು ಸಿದ್ಧವಾಗಿದೆ. ಆಗ್ನೇಯ ಏಷ್ಯಾದ ದೇಶದೊಂದಿಗೆ ಶಸ್ತ್ರಾಸ್ತ್ರ ವ್ಯವಸ್ಥೆ ಪೂರೈಸಲು USD 375 ಮಿಲಿಯನ್ (₹37,50,00,000) ಒಪ್ಪಂದವನ್ನು ಮಾಡಿಕೊಂಡ ಎರಡು ವರ್ಷಗಳ ಇದನ್ನು ಆ ದೇಶಗಳಿಗೆ ಭಾರತ ಪೂರೈಸುತ್ತಿದೆ.

2 / 6

ಈಗಾಗಗಲೇ ಭಾರತೀಯ ವಾಯುಪಡೆಯ ಮಿಲಿಟರಿ ಬ್ರಹ್ಮೋಸ್ ಸೂಪರ್‌ಸಾನಿಕ್ ಕ್ರೂಸ್ ಕ್ಷಿಪಣಿಯನ್ನು ಸಾಗಿಸಲು ಎಲ್ಲ ಸಿದ್ಧತೆಗಳನ್ನು ಮಾಡಿಕೊಂಡಿದೆ. ವಾಯುಪಡೆ ಮಿಲಿಟರಿ ವಿಮಾನದ ಮೂಲಕ ಪಣಿ ಮತ್ತು ಲಾಂಚರ್‌ ಫಿಲಿಪೈನ್ಸ್‌ಗೆ ಕಳುಹಿಸಲಿದೆ.

3 / 6

ಜನವರಿ 2022 ರಲ್ಲಿ, ಕ್ಷಿಪಣಿಯ ಮೂರು ಬ್ಯಾಟರಿಗಳನ್ನು ಪೂರೈಸಲು ಭಾರತವು ಫಿಲಿಪೈನ್ಸ್‌ನೊಂದಿಗೆ ಒಪ್ಪಂದವನ್ನು ಮಾಡಿಕೊಂಡಿತು. ಇದು ಭಾರತದಿಂದ ಬ್ರಹ್ಮೋಸ್ ಕ್ಷಿಪಣಿಯ ಮೊದಲ ರಫ್ತು ಆಗಿದೆ.

4 / 6

ಅರ್ಜೆಂಟೀನಾ ಸೇರಿದಂತೆ ಇತರ ಕೆಲವು ದೇಶಗಳು ಭಾರತದಿಂದ ಬ್ರಹ್ಮೋಸ್ ಕ್ಷಿಪಣಿಗಳನ್ನು ಪಡೆಯಲು ಆಸಕ್ತಿ ತೋರಿಸಿವೆ. ಬ್ರಹ್ಮೋಸ್ ಏರೋಸ್ಪೇಸ್ ಪ್ರೈವೇಟ್ ಲಿಮಿಟೆಡ್, ಭಾರತ-ರಷ್ಯಾದ ಜಂಟಿ ಉದ್ಯಮವಾಗಿದೆ.

5 / 6

ಜಲಾಂತರ್ಗಾಮಿ ನೌಕೆಗಳು, ಹಡಗುಗಳು, ವಿಮಾನಗಳು ಅಥವಾ ಭೂ ಭಾಗಗಳಿಂದ ಇದನ್ನು ಉಡಾವಣೆ ಮಾಡಬಹುದು. ಬ್ರಹ್ಮೋಸ್ ಕ್ಷಿಪಣಿ 2.8 ಮ್ಯಾಕ್ ವೇಗ ಅಥವಾ ಅದಕ್ಕಿಂತ ಹೆಚ್ಚಿನ ವೇಗದಲ್ಲಿ ಹಾರಾಟ ನಡೆಸುತ್ತದೆ.

6 / 6

ದಕ್ಷಿಣ ಚೀನಾ ಸಮುದ್ರ ಭಾಗದಲ್ಲಿ ಚೀನಾದ ಮಿಲಿಟರಿ ಬಲ ಹೆಚ್ಚುತ್ತಿದೆ. ಇದರಿಂದ ಜಾಗತಿಕ ಕಳವಳಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಭಾರತವು ಫಿಲಿಪೈನ್ಸ್‌ನೊಂದಿಗೆ ರಕ್ಷಣಾ ಸಂಬಂಧಗಳನ್ನು ಮತ್ತಷ್ಟು ವಿಸ್ತರಿಸುವ ಸಾಧ್ಯತೆ ಇದೆ.

Loading...
Unable to load recommendations.
Follow Us