ಹೊಸ ಬಿಎಸ್ಎನ್ಎಲ್ ಸಿಮ್ ಕಾರ್ಡ್ ಆ್ಯಕ್ಟಿವೇಟ್ ಮಾಡುವುದು ಹೇಗೆ? ಇಲ್ಲಿದೆ ಕ್ರಮ
Guide to BSN SIM activation: ಜಿಯೋ, ಏರ್ಟೆಲ್, ವೊಡಾಫೋನ್ ಐಡಿಯಾ ಕಂಪನಿಗಳು ರೀಚಾರ್ಜ್ ದರಗಳನ್ನು ಬಹಳಷ್ಟು ಏರಿಸಿವೆ. ಇದೇ ವೇಳೆ ಸರ್ಕಾರಿ ಸ್ವಾಮ್ಯದ ಬಿಎಸ್ಸೆನ್ನೆಲ್ ಮೈಕೊಡವಿ ನಿಂತಿದೆ. ಕಡಿಮೆ ಬೆಲೆಗೆ ರೀಚಾರ್ಜ್ ಆಫರ್ ಮಾಡುತ್ತಿದೆ. ಬಹಳಷ್ಟು ಜನರು ಬಿಎಸ್ಸೆನ್ನೆಲ್ ಕಡೆಗೆ ವಾಲುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ, ಬಿಎಸ್ಎನ್ಎಲ್ನ ಸಿಮ್ ಅನ್ನು ಆ್ಯಕ್ಟಿವೇಟ್ ಮಾಡುವುದು ಹೇಗೆ ಎನ್ನುವ ಕ್ರಮಗಳ ವಿವರ ಇಲ್ಲಿದೆ...
Updated on: Aug 13, 2024 | 11:32 AM

ಜಿಯೋ, ಏರ್ಟೆಲ್ ಇತ್ಯಾದಿ ಟೆಲಿಕಾಂ ಕಂಪನಿಗಳ ರೀಚಾರ್ಜ್ ದರ ದುಬಾರಿಯಾದ ಹಿನ್ನೆಲೆಯಲ್ಲಿ ಬಹಳ ಜನರು ಬಿಎಸ್ಸೆನ್ನೆಲ್ ಕಡೆ ವಾಲುತ್ತಿದ್ದಾರೆ. ಸರ್ಕಾರಿ ಸ್ವಾಮ್ಯದ ಈ ಟೆಲಿಕಾಂ ಸಂಸ್ಥೆಯ ರೀಚಾರ್ಜ್ ದರ ಬಹಳ ಅಗ್ಗದ್ದಾಗಿವೆ. ಜಿಯೋ, ಏರ್ಟೆಲ್, ವಿಐನಿಂದ ಲಕ್ಷಾಂತರ ಗ್ರಾಹಕರು ಬಿಎಸ್ಸೆನ್ನೆಲ್ ಕಡೆ ಬರುತ್ತಿದ್ದಾರೆ.

ಆಂಧ್ರವೊಂದರಲ್ಲೇ ಜುಲೈ ತಿಂಗಳಲ್ಲಿ 2.17 ಕ್ಷ ಹೊಸ ಕನೆಕ್ಷನ್ಗಳು ಬಿಎಸ್ಎನ್ಎಲ್ಗೆ ಸಿಕ್ಕಿವೆ. ಕರ್ನಾಟಕದಲ್ಲೂ ಸಾಕಷ್ಟು ಜನರು ಬಿಎಸ್ಎನ್ಎಲ್ಗೆ ಪೋರ್ಟ್ ಮಾಡಿಸಿಕೊಳ್ಳುತ್ತಿದ್ದಾರೆ. ಬಿಎಸ್ಸೆನ್ನೆಲ್ನ ಗ್ರಾಹಕರ ಸಂಖ್ಯೆ 50 ಲಕ್ಷ ಸಮೀಪಕ್ಕೆ ಏರುತ್ತಿದೆ. 5ಜಿ ಸಿಮ್ಗಳನ್ನೂ ಬಿಎಸ್ಸೆನ್ನೆಲ್ ಒದಗಿಸುತ್ತಿದೆ.

ಬೇರೆ ಟೆಲಿಕಾಂ ಸಿಮ್ ಬಳಸುವ ಗ್ರಾಹಕರು ಅದೇ ನಂಬರ್ ಉಳಿಸಿಕೊಂಡು ಬಿಎಸ್ಸೆನ್ನೆಲ್ಗೆ ಪೋರ್ಟ್ ಮಾಡಿಕೊಳ್ಳಬಹುದು. ಹೊಸ ಸಿಮ್ ಬೇಕಾದರೂ ಖರೀದಿಸಬಹುದು. ಬಿಎಸ್ಸೆನ್ನೆಲ್ ಕಸ್ಟಮರ್ ಸೆಂಟರ್ಗಳಲ್ಲಿ, ಮೊಬೈಲ್ ಶಾಪ್ಗಳಲ್ಲಿ ನೀವು ಸಿಮ್ ಪಡೆಯಬಹುದು. ಹೊಸ ಸಿಮ್ಗಳನ್ನು ಆ್ಯಕ್ಟಿವೇಟ್ ಮಾಡುವುದು ಹೇಗೆ ಎನ್ನುವ ಹಂತ ಹಂತದ ಕ್ರಮದ ವಿವರ ಇಲ್ಲಿದೆ.

ನೀವು ತಂದಿರುವ ಹೊಸ ಬಿಎಸ್ಸೆನ್ನೆಲ್ ಸಿಮ್ ಕಾರ್ಡ್ ಅನ್ನು ನಿಮ್ಮ ಮೊಬೈಲ್ ಫೋನ್ಗೆ ತೂರಿಸಿ, ರೀಸ್ಟಾರ್ಟ್ ಮಾಡಿ. ಬಳಿಕ ನಿಮಗೆ ಬಿಎಸ್ಸೆನ್ನೆಲ್ ನೆಟ್ವರ್ಕ್ ಸಿಗ್ನಲ್ ಅನ್ನು ಮೊಬೈಲ್ ಸ್ಕ್ರೀನ್ ಮೇಲ್ಗಡೆ ಕಾಣಬಹುದು. ಅದು ಖಚಿತಪಡಿಸಿಕೊಂಡ ಬಳಿಕ ಮೊಬೈಲ್ನಿಂದ 1507 ನಂಬರ್ಗೆ ಕರೆ ಮಾಡಿ ನಿಮ್ಮ ಗುರುತು ದೃಢೀಕರಿಸಿರಿ.

1507 ನಂಬರ್ಗೆ ಕರೆ ಮಾಡಿದಾಗ ನಿಮ್ಮ ಗುರುತು, ವಿಳಾಸ ಇತ್ಯಾದಿ ಬಗ್ಗೆ ಮಾಹಿತಿ ಕೇಳಲಾಗುವುದು. ಅದನ್ನು ಒದಗಿಸಿ. ನಂತರ ನೀಡಲಾಗುವ ಸೂಚನೆಗಳನ್ನು ಅನುಸರಿಸಿ. ಈ ಪ್ರಕ್ರಿಯೆ ಮುಗಿದ ಬಳಿಕ ನಿಮ್ಮ ಬಿಎಸ್ಸೆನ್ನೆಲ್ ಸಿಮ್ ಆ್ಯಕ್ಟಿವೇಟ್ ಆಗುತ್ತದೆ.

ಸಿಮ್ ಆ್ಯಕ್ಟಿವೇಟ್ ಆದ ಬಳಿಕ ನಿಮ್ಮ ಮೊಬೈಲ್ ಸೆಟ್ಗೆ ನಿರ್ದಿಷ್ಟವಾಗಿರುವ ಇಂಟರ್ನೆಟ್ ಸೆಟಿಂಗ್ಸ್ ಬರುತ್ತದೆ. ಇದನ್ನು ಸೇವ್ ಮಾಡಿರಿ. ಈಗ ನಿಮ್ಮ ಸಿಮ್ ಕಾರ್ಡ್ ಅನ್ನು ನಿಶ್ಚಿಂತೆಯಿಂದ ಬಳಸಬಹುದು. ಕರೆ ಮಾಡಬಹುದು, ಇಂಟರ್ನೆಟ್ ಬಳಕೆ ಮಾಡಬಹುದು.









