Manu Bhaker: ಭಾರತದಲ್ಲಿ ನಡೆಯಲ್ಲಿರುವ ಶೂಟಿಂಗ್ ವಿಶ್ವಕಪ್​ನಲ್ಲಿ ಮನು ಭಾಕರ್ ಸ್ಪರ್ಧಿಸುವುದು ಡೌಟ್

Manu Bhaker: ಪ್ಯಾರಿಸ್ ಒಲಿಂಪಿಕ್ಸ್​ನಲ್ಲಿ ಶೂಟಿಂಗ್ ಸ್ಪರ್ಧೆಯಲ್ಲಿ ಭಾರತಕ್ಕೆ 2 ಕಂಚಿನ ಪದಕಗಳನ್ನು ಗೆದ್ದುಕೊಟ್ಟ ಮನು ಭಾಕರ್, ಈ ವರ್ಷ ಭಾರತದಲ್ಲೇ ನಡೆಯುವ ಶೂಟಿಂಗ್ ವಿಶ್ವಕಪ್​ನಲ್ಲಿ ಭಾಗವಹಿಸುವ ಬಗ್ಗೆ ಅನುಮಾನ ವ್ಯಕ್ತವಾಗಿದೆ. ಈ ಬಗ್ಗೆ ಮಾಹಿತಿ ನೀಡಿರುವ ಮನು ಅವರ ಕೋಚ್ ಜಸ್ಪಾಲ್ ರಾಣಾ, ಶೂಟಿಂಗ್ ವಿಶ್ವಕಪ್‌ನಲ್ಲಿ ಮನು ಭಾಗವಹಿಸುವ ಸಾಧ್ಯತೆ ತೀರ ಕಡಿಮೆ ಎಂದಿದ್ದಾರೆ.

|

Updated on: Aug 13, 2024 | 4:22 PM

ಪ್ಯಾರಿಸ್ ಒಲಿಂಪಿಕ್ಸ್​ನಲ್ಲಿ ಶೂಟಿಂಗ್ ಸ್ಪರ್ಧೆಯಲ್ಲಿ ಭಾರತಕ್ಕೆ 2 ಕಂಚಿನ ಪದಕಗಳನ್ನು ಗೆದ್ದುಕೊಟ್ಟ ಮನು ಭಾಕರ್, ಈ ವರ್ಷ ಭಾರತದಲ್ಲೇ ನಡೆಯುವ ಶೂಟಿಂಗ್ ವಿಶ್ವಕಪ್​ನಲ್ಲಿ ಭಾಗವಹಿಸುವ ಬಗ್ಗೆ ಅನುಮಾನ ವ್ಯಕ್ತವಾಗಿದೆ. ಈ ಬಗ್ಗೆ ಮಾಹಿತಿ ನೀಡಿರುವ ಮನು ಅವರ ಕೋಚ್ ಜಸ್ಪಾಲ್ ರಾಣಾ, ಶೂಟಿಂಗ್ ವಿಶ್ವಕಪ್‌ನಲ್ಲಿ ಮನು ಭಾಗವಹಿಸುವ ಸಾಧ್ಯತೆ ತೀರ ಕಡಿಮೆ ಎಂದಿದ್ದಾರೆ.

1 / 6
ಇದಕ್ಕೆ ಸ್ಪಷ್ಟನೆಯನ್ನು ನೀಡಿರುವ ಅವರು, ಸದ್ಯ ಮನು ಮೂರು ತಿಂಗಳ ವಿರಾಮ ಕೇಳಿದ್ದಾರೆ. ಹೀಗಾಗಿ ಅವರು ಶೂಟಿಂಗ್ ವಿಶ್ವಕಪ್‌ನಲ್ಲಿ ಭಾಗವಹಿಸುವುದಿಲ್ಲ ಎಂದು ತಿಳಿಸಿದ್ದಾರೆ. ಅಕ್ಟೋಬರ್‌ನಲ್ಲಿ ನಡೆಯಲಿರುವ ವಿಶ್ವಕಪ್‌ನಲ್ಲಿ ಮನು ಆಡುತ್ತಾರೋ ಇಲ್ಲವೋ ನನಗೆ ತಿಳಿದಿಲ್ಲ. ಏಕೆಂದರೆ ಅವರು 3 ತಿಂಗಳ ವಿರಾಮ ತೆಗೆದುಕೊಳ್ಳುತ್ತಿದ್ದಾರೆ.

2 / 6
ಸತತವಾಗಿ ಸ್ಪರ್ಧೆಯಲ್ಲಿ ತೊಡಗಿಸಿಕೊಂಡ ಬಳಿಕ ದೀರ್ಘ ವಿರಾಮ ತೆಗೆದುಕೊಳ್ಳುವುದು ಎಲ್ಲಾ ಕ್ರೀಡೆಯಲ್ಲೂ ಸರ್ವೆ ಸಾಮಾನ್ಯ. ಅಲ್ಲದೆ ಪ್ರಸ್ತುತ ಮನು ಭಾಕರ್ ಅವರ ಗಮನವು 2026 ರ ಏಷ್ಯನ್ ಗೇಮ್ಸ್ ಮತ್ತು ಕಾಮನ್‌ವೆಲ್ತ್ ಗೇಮ್ಸ್‌ ಮೇಲಿದೆ ಎಂದು ಮನು ಭಾಕರ್ ಅವರ ತರಬೇತುದಾರ ಜಸ್ಪಿಲ್ ರಾಣಾ ಹೇಳಿದ್ದಾರೆ.

3 / 6
ಇನ್ನು ಶೂಟಿಂಗ್ ವಿಶ್ವಕಪ್‌ ಬಗ್ಗೆ ಹೇಳುವುದಾದರೆ.. ಅಕ್ಟೋಬರ್ 13 ರಿಂದ 18 ರವರೆಗೆ ನವದೆಹಲಿಯಲ್ಲಿ ಶೂಟಿಂಗ್ ವಿಶ್ವಕಪ್ ನಡೆಯಲಿದೆ. ಪ್ರಪಂಚದಾದ್ಯಂತದ ಅನುಭವಿ ಶೂಟರ್‌ಗಳು ಈ ವಿಶ್ವಕಪ್‌ನಲ್ಲಿ ಆಡುವುದನ್ನು ಕಾಣಬಹುದಾಗಿದೆ.

4 / 6
ಈ ಬಾರಿಯ ಒಲಿಂಪಿಕ್ಸ್​ನಲ್ಲಿ ಮನು ಭಾಕರ್ ಅವರು ಮಹಿಳೆಯರ 10 ಮೀಟರ್ ಏರ್ ಪಿಸ್ತೂಲ್ ವಿಭಾಗದ ಸ್ಪರ್ಧೆಯಲ್ಲಿ ಕಂಚಿನ ಪದಕ ಗೆಲ್ಲುವ ಮೂಲಕ ಒಲಿಂಪಿಕ್ಸ್‌ನಲ್ಲಿ ಭಾರತದ ಪದಕದ ಖಾತೆ ತೆರೆದರು. ಇದರ ನಂತರ 10 ಮೀಟರ್ ಏರ್ ಪಿಸ್ತೂಲ್ ವಿಭಾಗದ ಮಿಶ್ರ ಸ್ಪರ್ಧೆಯಲ್ಲಿ ಸರಬ್ಜೋತ್ ಸಿಂಗ್ ಅವರೊಂದಿಗೆ ಮನು ಭಾಕರ್ ಕಂಚಿನ ಪದಕ ಗೆಲ್ಲುವಲ್ಲಿ ಯಶಸ್ವಿಯಾಗಿದ್ದರು.

5 / 6
ಇದಲ್ಲದೆ ಇದೇ ಒಲಿಂಪಿಕ್ಸ್​ನಲ್ಲಿ ಮನುಗೆ ಮೂರನೇ ಪದಕವನ್ನು ಗೆಲ್ಲುವ ಅವಕಾಶವಿತ್ತು. ಮನು ಮಹಿಳೆಯರ 25 ಮೀಟರ್ ಏರ್ ಪಿಸ್ತೂಲ್ ಸ್ಪರ್ಧೆಯಲ್ಲೂ ಫೈನಲ್ ತಲುಪಿದ್ದರು. ಆದರೆ ಕೂದಲೆಳೆ ಅಂತರದಲ್ಲಿ ಪದಕದಿಂದ ವಂಚಿತರಾಗಿ, ನಾಲ್ಕನೇ ಸ್ಥಾನಕ್ಕೆ ತೃಪ್ತಿಪಡಬೇಕಾಯಿತು. ಅದಾಗ್ಯೂ ಮನು, ಒಂದೇ ಆವೃತ್ತಿಯ ಒಲಿಂಪಿಕ್ಸ್‌ನಲ್ಲಿ ಎರಡು ಪದಕಗಳನ್ನು ಗೆದ್ದ ಸ್ವತಂತ್ರ ಭಾರತದ ಮೊದಲ ಅಥ್ಲೀಟ್ ಎಂಬ ಹೆಗ್ಗಳಿಕೆಗೆ ಪಾತ್ರರಾದರು.

6 / 6
Follow us