ಪರಮ ಸುಂದರಿಗೆ ನೋವು ತಂದ ಡೇಟಿಂಗ್ ಗಾಸಿಪ್​; ಕಡೆಗೂ ಮೌನ ಮುರಿದ ಕೃತಿ ಸನನ್​

ಬಾಲಿವುಡ್​ನ ಖ್ಯಾತ ನಟಿ ಕೃತಿ ಸನನ್​ ಬಗ್ಗೆ ಇಲ್ಲಸಲ್ಲದ ಗಾಸಿಪ್​ಗಳು ಹಬ್ಬಿವೆ. ತಮಗಿಂತ 10 ವರ್ಷ ಕಿರಿಯ ಯುವಕನ ಜೊತೆ ಅವರು ಡೇಟಿಂಗ್​ ಮಾಡುತ್ತಿದ್ದಾರೆ ಎಂದು ಕೆಲವರು ಗಾಳಿಸುದ್ದಿ ಹಬ್ಬಿಸಿದ್ದಾರೆ. ಇದರಿಂದ ನೊಂದುಕೊಂಡಿರುವ ಕೃತಿ ಸನನ್​ ಅವರು ಮೌನ ಮುರಿದಿದ್ದಾರೆ. ಈ ರೀತಿಯ ಗಾಸಿಪ್​ಗಳಿಂದ ತಮಗೆ ಏನೆಲ್ಲ ತೊಂದರೆ ಆಗುತ್ತಿದೆ ಎಂಬುದನ್ನು ಅವರು ವಿವರಿಸಿದ್ದಾರೆ.

|

Updated on: Aug 13, 2024 | 9:47 PM

‘ಮಿಮಿ’ ಸಿನಿಮಾದ ‘ಪರಮ ಸುಂದರಿ..’ ಹಾಡಿನ ಮೂಲಕ ಸಿಕ್ಕಾಪಟ್ಟೆ ಸೆನ್ಸೇಷನ್​ ಸೃಷ್ಟಿ ಮಾಡಿದ ಬಾಲಿವುಡ್​ ನಟಿ ಕೃತಿ ಸನನ್​ ಅವರು ಈಗ ವೈಯಕ್ತಿಕ ವಿಚಾರದ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ. ಅವರ ಡೇಟಿಂಗ್​ ಬಗ್ಗೆ ಒಂದಷ್ಟು ಗಾಳಿಸುಬ್ಬಿ ಹಬ್ಬಿವೆ.

1 / 7
ವಿದೇಶದಲ್ಲಿ ನೆಲೆಸಿರುವ ಕಬೀರ್​ ಎಂಬ ಉದ್ಯಮಿ ಜೊತೆ ಕೃತಿ ಸನನ್​ ಅವರು ಡೇಟಿಂಗ್​ ಮಾಡುತ್ತಿದ್ದಾರೆ ಎಂದು ಕೆಲವು ಮಾಧ್ಯಮಗಳು ಸುಳ್ಳು ಸುದ್ದಿ ಪ್ರಕಟ ಮಾಡಿವೆ. ಇದರಿಂದ ನೊಂದುಕೊಂಡಿರುವ ಕೃತಿ ಅವರು ಪ್ರತಿಕ್ರಿಯೆ ನೀಡಿದ್ದಾರೆ.

2 / 7
ಇತ್ತೀಚೆಗೆ ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನಲ್ಲಿ ಕೃತಿ ಸನನ್​ ಅವರು ಈ ಕುರಿತು ಮಾತನಾಡಿದ್ದಾರೆ. ‘ಸುಳ್ಳು ಸುದ್ದಿಗಳು ಪ್ರಕಟ ಆದಾಗ ನನಗೆ ಮಾತ್ರವಲ್ಲದೇ ನಮ್ಮ ಕುಟುಂಬದವರಿಗೂ ನೋವಾಗುತ್ತದೆ’ ಎಂದು ಕೃತಿ ಸನನ್​ ಅವರು ಹೇಳಿದ್ದಾರೆ.

3 / 7
 ಡೇಟಿಂಗ್​, ಲವ್​, ಮದುವೆ, ರಿಲೀಷನ್​ಶಿಪ್​ ಬಗ್ಗೆ ಗಾಳಿಸುದ್ದಿಗಳು ಹಬ್ಬಿದಾಗ ಅವು ನಿಜವಲ್ಲ ಎಂದು ಆಪ್ತರಿಗೆ ಮತ್ತು ಸ್ನೇಹಿತರಿಗೆ ಪ್ರತಿ ಬಾರಿಯೂ ತಾವು ಸ್ಪಷ್ಟನೆ ನೀಡಬೇಕಾಗುತ್ತದೆ ಎಂದಿದ್ದಾರೆ ಕೃತಿ. ಆ ಮೂಲಕ ಅವರು ಬೇಸರ ವ್ಯಕ್ತಪಡಿಸಿದ್ದಾರೆ.

4 / 7
‘ಒಬ್ಬರ ಬಗ್ಗೆ ಕಟ್ಟುಕಥೆಗಳನ್ನು ಹರಡುವುದಕ್ಕೂ ಮುನ್ನ, ನಿಜ ಏನು ಎಂಬುದನ್ನು ಜನರು ತಿಳಿದುಕೊಳ್ಳುವುದಿಲ್ಲ. ಅದರಲ್ಲೂ ಸೋಶಿಯಲ್​ ಮೀಡಿಯಾದಲ್ಲಿ ಜನರು ನೆಗೆಟಿವ್​ ವಿಚಾರಗಳನ್ನು ಬೇಗ ಹರಡುತ್ತಾರೆ’ ಎಂಬುದು ಕೃತಿ ಸನನ್​ ಅವರ ಅಭಿಪ್ರಾಯ.

5 / 7
‘ಇಂಥ ಸುಳ್ಳು ಸುದ್ದಿಗಳ ಬಗ್ಗೆ ಪ್ರತಿ ಬಾರಿ ಸ್ಪಷ್ಟನೆ ನೀಡುವುದು ನಿಜಕ್ಕೂ ಕಿರಿಕಿರಿ ಆಗುತ್ತದೆ. ಅದಕ್ಕಿಂತ ದೊಡ್ಡ ತಲೆನೋವು ಬೇರೊಂದಿಲ್ಲ’ ಎಂದು ಕೃತಿ ಸನನ್​ ಹೇಳಿದ್ದಾರೆ. ಬಾಲಿವುಡ್​ನ ಅನೇಕ ಸಿನಿಮಾಗಳಲ್ಲಿ ನಟಿಸಿ ಅವರು ಫೇಮಸ್​ ಆಗಿದ್ದಾರೆ.

6 / 7
ಕೃತಿ ಸನನ್​ ಅವರಿಗೆ ಈಗ 34 ವರ್ಷ ವಯಸ್ಸು. ಸದ್ಯಕ್ಕೆ ಅವರು ಸಿಂಗಲ್​ ಆಗಿದ್ದಾರೆ. 2024ರಲ್ಲಿ ಅವರು ‘ಕ್ರೂ’ ಸಿನಿಮಾದಿಂದ ಯಶಸ್ಸು ಪಡೆದಿದ್ದಾರೆ. ‘ಮಿಮಿ’ ಸಿನಿಮಾದಲ್ಲಿನ ಅಭಿನಯಕ್ಕೆ ‘ಅತ್ಯುತ್ತಮ ನಟಿ’ ರಾಷ್ಟ್ರ ಪ್ರಶಸ್ತಿ ಪಡೆದುಕೊಂಡಿದ್ದಾರೆ.

7 / 7
Follow us