- Kannada News Photo gallery Kriti Sanon reaction on dating rumours with Kabir Bahia Entertainment news in Kannada
ಪರಮ ಸುಂದರಿಗೆ ನೋವು ತಂದ ಡೇಟಿಂಗ್ ಗಾಸಿಪ್; ಕಡೆಗೂ ಮೌನ ಮುರಿದ ಕೃತಿ ಸನನ್
ಬಾಲಿವುಡ್ನ ಖ್ಯಾತ ನಟಿ ಕೃತಿ ಸನನ್ ಬಗ್ಗೆ ಇಲ್ಲಸಲ್ಲದ ಗಾಸಿಪ್ಗಳು ಹಬ್ಬಿವೆ. ತಮಗಿಂತ 10 ವರ್ಷ ಕಿರಿಯ ಯುವಕನ ಜೊತೆ ಅವರು ಡೇಟಿಂಗ್ ಮಾಡುತ್ತಿದ್ದಾರೆ ಎಂದು ಕೆಲವರು ಗಾಳಿಸುದ್ದಿ ಹಬ್ಬಿಸಿದ್ದಾರೆ. ಇದರಿಂದ ನೊಂದುಕೊಂಡಿರುವ ಕೃತಿ ಸನನ್ ಅವರು ಮೌನ ಮುರಿದಿದ್ದಾರೆ. ಈ ರೀತಿಯ ಗಾಸಿಪ್ಗಳಿಂದ ತಮಗೆ ಏನೆಲ್ಲ ತೊಂದರೆ ಆಗುತ್ತಿದೆ ಎಂಬುದನ್ನು ಅವರು ವಿವರಿಸಿದ್ದಾರೆ.
Updated on: Aug 13, 2024 | 9:47 PM

‘ಮಿಮಿ’ ಸಿನಿಮಾದ ‘ಪರಮ ಸುಂದರಿ..’ ಹಾಡಿನ ಮೂಲಕ ಸಿಕ್ಕಾಪಟ್ಟೆ ಸೆನ್ಸೇಷನ್ ಸೃಷ್ಟಿ ಮಾಡಿದ ಬಾಲಿವುಡ್ ನಟಿ ಕೃತಿ ಸನನ್ ಅವರು ಈಗ ವೈಯಕ್ತಿಕ ವಿಚಾರದ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ. ಅವರ ಡೇಟಿಂಗ್ ಬಗ್ಗೆ ಒಂದಷ್ಟು ಗಾಳಿಸುಬ್ಬಿ ಹಬ್ಬಿವೆ.

ವಿದೇಶದಲ್ಲಿ ನೆಲೆಸಿರುವ ಕಬೀರ್ ಎಂಬ ಉದ್ಯಮಿ ಜೊತೆ ಕೃತಿ ಸನನ್ ಅವರು ಡೇಟಿಂಗ್ ಮಾಡುತ್ತಿದ್ದಾರೆ ಎಂದು ಕೆಲವು ಮಾಧ್ಯಮಗಳು ಸುಳ್ಳು ಸುದ್ದಿ ಪ್ರಕಟ ಮಾಡಿವೆ. ಇದರಿಂದ ನೊಂದುಕೊಂಡಿರುವ ಕೃತಿ ಅವರು ಪ್ರತಿಕ್ರಿಯೆ ನೀಡಿದ್ದಾರೆ.

ಇತ್ತೀಚೆಗೆ ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನಲ್ಲಿ ಕೃತಿ ಸನನ್ ಅವರು ಈ ಕುರಿತು ಮಾತನಾಡಿದ್ದಾರೆ. ‘ಸುಳ್ಳು ಸುದ್ದಿಗಳು ಪ್ರಕಟ ಆದಾಗ ನನಗೆ ಮಾತ್ರವಲ್ಲದೇ ನಮ್ಮ ಕುಟುಂಬದವರಿಗೂ ನೋವಾಗುತ್ತದೆ’ ಎಂದು ಕೃತಿ ಸನನ್ ಅವರು ಹೇಳಿದ್ದಾರೆ.

ಡೇಟಿಂಗ್, ಲವ್, ಮದುವೆ, ರಿಲೀಷನ್ಶಿಪ್ ಬಗ್ಗೆ ಗಾಳಿಸುದ್ದಿಗಳು ಹಬ್ಬಿದಾಗ ಅವು ನಿಜವಲ್ಲ ಎಂದು ಆಪ್ತರಿಗೆ ಮತ್ತು ಸ್ನೇಹಿತರಿಗೆ ಪ್ರತಿ ಬಾರಿಯೂ ತಾವು ಸ್ಪಷ್ಟನೆ ನೀಡಬೇಕಾಗುತ್ತದೆ ಎಂದಿದ್ದಾರೆ ಕೃತಿ. ಆ ಮೂಲಕ ಅವರು ಬೇಸರ ವ್ಯಕ್ತಪಡಿಸಿದ್ದಾರೆ.

‘ಒಬ್ಬರ ಬಗ್ಗೆ ಕಟ್ಟುಕಥೆಗಳನ್ನು ಹರಡುವುದಕ್ಕೂ ಮುನ್ನ, ನಿಜ ಏನು ಎಂಬುದನ್ನು ಜನರು ತಿಳಿದುಕೊಳ್ಳುವುದಿಲ್ಲ. ಅದರಲ್ಲೂ ಸೋಶಿಯಲ್ ಮೀಡಿಯಾದಲ್ಲಿ ಜನರು ನೆಗೆಟಿವ್ ವಿಚಾರಗಳನ್ನು ಬೇಗ ಹರಡುತ್ತಾರೆ’ ಎಂಬುದು ಕೃತಿ ಸನನ್ ಅವರ ಅಭಿಪ್ರಾಯ.

‘ಇಂಥ ಸುಳ್ಳು ಸುದ್ದಿಗಳ ಬಗ್ಗೆ ಪ್ರತಿ ಬಾರಿ ಸ್ಪಷ್ಟನೆ ನೀಡುವುದು ನಿಜಕ್ಕೂ ಕಿರಿಕಿರಿ ಆಗುತ್ತದೆ. ಅದಕ್ಕಿಂತ ದೊಡ್ಡ ತಲೆನೋವು ಬೇರೊಂದಿಲ್ಲ’ ಎಂದು ಕೃತಿ ಸನನ್ ಹೇಳಿದ್ದಾರೆ. ಬಾಲಿವುಡ್ನ ಅನೇಕ ಸಿನಿಮಾಗಳಲ್ಲಿ ನಟಿಸಿ ಅವರು ಫೇಮಸ್ ಆಗಿದ್ದಾರೆ.

ಕೃತಿ ಸನನ್ ಅವರಿಗೆ ಈಗ 34 ವರ್ಷ ವಯಸ್ಸು. ಸದ್ಯಕ್ಕೆ ಅವರು ಸಿಂಗಲ್ ಆಗಿದ್ದಾರೆ. 2024ರಲ್ಲಿ ಅವರು ‘ಕ್ರೂ’ ಸಿನಿಮಾದಿಂದ ಯಶಸ್ಸು ಪಡೆದಿದ್ದಾರೆ. ‘ಮಿಮಿ’ ಸಿನಿಮಾದಲ್ಲಿನ ಅಭಿನಯಕ್ಕೆ ‘ಅತ್ಯುತ್ತಮ ನಟಿ’ ರಾಷ್ಟ್ರ ಪ್ರಶಸ್ತಿ ಪಡೆದುಕೊಂಡಿದ್ದಾರೆ.




